ಮಂಗಳೂರು: ಕೋವಿಡ್ ಹಿನ್ನೆಲೆಯಲ್ಲಿ ಜನರಲ್ಲಿ ಆರೋಗ್ಯ ಸಂಬಂಧಿಸಿದಂತೆ ಕಾರ್ಯಪಡೆಯನ್ನು ರಚಿಸಿಕೊಂಡಿರುವ ಡಿವೈಎಫ್ಐ ಸಂಘಟನೆಯು ಸಹಾಯವಾಣಿ ಮೂಲಕ ಕಳೆದ ಹಲವು ದಿನಗಳಿಂದ ಕಾರ್ಯನಿರ್ವಹಿಸುತ್ತದೆ. ತಂಡವು ಖಾಸಗಿ ಆಸ್ಪತ್ರೆಗಳಲ್ಲಿ ಆಯುಷ್ಮಾನ್ ಅಡಿ ಕೋವಿಡ್ ಸೋಂಕಿತರಿಗೆ ಉಚಿತವಾಗಿ ದಾಖಲು ಮಾಡಿಸುವುದು. ರೋಗಿಗಳಿಗೆ ನೀಡುವ ಹೆಚ್ಚುವರಿ ವೆಚ್ಚಗಳ ಅನಗತ್ಯ ಖರ್ಚುವೆಚ್ಚಗಳ ವಿಪರೀತ ಮೊತ್ತದ ರಸೀದಿಯಲ್ಲಿ ಆಗಿರುವ ವ್ಯತ್ಯಾಸಗಳನ್ನು ಸರಿಪಡಿಸುವುದು. ಜಿಲ್ಲಾಡಳಿತದ ಅಧಿಕಾರಿಗಳ ಸಂಪರ್ಕ ಪಡೆದು ದುಬಾರಿ ಮೊತ್ತವನ್ನು ಕಡಿತಗೊಳಿಸಲು ಪ್ರಯತ್ನಿಸುವುದು ಸೇರಿದಂತೆ ಕೋವಿಡ್ ನಿವಾರಣೆಯಲ್ಲಿ ನಿರಂತರವಾಗಿ ತೊಡಗಿಸಿಕೊಂಡುರವ ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್ ಸಂಘಟನೆಯು ಸಕ್ರಿಯವಾಗಿ ತೊಡಗಿಸಿಕೊಂಡಿದೆ.
ಇದನ್ನು ಓದಿ: ಪಾಠ ಕಲಿಯಲು ನಿರಾಕರಿಸುವ ಈ ಸರ್ಕಾರ ಜನತೆಯ ಮತ್ತು ದೇಶದ ದುರಂತ
ಅದೇ ರೀತಿಯಲ್ಲಿ ಹೋಂ ಐಸೊಲೇಷನ್ ನಲ್ಲಿ ಆರೈಕೆ ಪಡೆಯುತ್ತಿರುವ ಕೋವಿಡ್ ಸೋಂಕಿತರಿಗೆ ಔಷಧಿಗಳನ್ನು ತಲುಪಿಸುವುದು. ಸೋಂಕಿತರ ಮನೆಗಳಲ್ಲೇ ಇದ್ದರೆ ಅವರ ಮನೆಗಳನ್ನು ಸ್ಯಾನಿಟೈಜ್ ಮಾಡುವುದು ಹಾಗೂ ತುರ್ತು ಸಂದರ್ಭದಲ್ಲಿ ಅಗತ್ಯ ಇರುವ ರೋಗಿಗಳಿಗೆ ರಕ್ತದಾನ ಮಾಡುವುದು ಹೀಗೆ ಹಲವು ಕೆಲಸಗಳನ್ನು ಪರಿಣಾಮಕಾರಿಯಾಗಿ ಡಿವೈಎಫ್ಐ ಸಂಘಟನೆಯು ನಡೆಸುತ್ತಿದೆ.
ಇಂದು ಡಿವೈಎಫ್ಐ ಮಂಗಳೂರು ಸಹಾಯವಾಣಿ ನೇತೃತ್ವದಲ್ಲಿ ಬೆಂಗರೆ ಪ್ರದೇಶದ ಕಾರ್ಯಕರ್ತರು ಇಂಡಿಯನ್ ರೆಡ್ ಕ್ರಾಸ್ ರಕ್ತನಿಧಿ ಕೇಂದ್ರದಲ್ಲಿ ಸಾಮೂಹಿಕವಾಗಿ ರಕ್ತದಾನ ಮಾಡಿದರು.
ಈ ವೇಳೆ ಡಿವೈಎಫ್ಐ ರಾಜ್ಯಾದ್ಯಕ್ಷರಾದ ಮುನೀರ್ ಕಾಟಿಪಳ್ಳ, ಸಹಾಯವಾಣಿ ನೇತೃತ್ವ ವಹಿಸಿದ ಡಿವೈಎಫ್ಐ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್, ನಗರಾದ್ಯಕ್ಷ ನವೀನ್ ಕೊಂಚಾಡಿ, ನೌಶದ್ ಬೆಂಗರೆ ಹಾಗೂ ಬೆಂಗರೆ ಪ್ರದೇಶದ ಮುಖಂಡರಾದ ರಿಯಾಜ್ ಬೆಂಗರೆ, ಬಿಲಾಲ್ ಬೆಂಗರೆ, ಅಸ್ಲಂ, ಮುಹಾಬ್ ಮುಂತಾದವರು ಉಪಸ್ಥಿತರಿದ್ದರು.
ಡಿವೈಎಫ್ಐ ಮಂಗಳೂರು ನಗರ ಕೋವಿಡ್-19 ಸಲಹೆ, ಸಹಕಾರ, ಸಹಾಯಕ್ಕಾಗಿ ಸಹಾಯವಾಣಿ ಸಂಖ್ಯೆ 9035969179, 9845441249 ಕರೆ ಮಾಡಬಹುದು.