ಉದ್ಯೋಗ ಖಾತ್ರಿ ಯೋಜನೆ ಸಮರ್ಪಕ ಜಾರಿಗೆ ಆಗ್ರಹಿಸಿ ಪ್ರತಿಭಟನೆ

ವಿಜಯನಗರ : ವಸತಿ, ನಿವೇಶನ, ಉದ್ಯೋಗ ಖಾತ್ರಿ ಸಮರ್ಪಕ ಜಾರಿ ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಡಿವೈಎಫ್‌ಐ ತೋರಣಗಲ್ಲು ಗ್ರಾಮ ಸಮಿತಿ ವತಿಯಿಂದ ಇಂದು ಗ್ರಾಮ ಪಂಚಾಯಿತಿ ಮುಂಭಾಗ ಪ್ರತಿಭಟನೆ ನಡೆಸಿ ಅಧ್ಯಕ್ಷರು ಹಾಗೂ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ಮನವಿ ಸಲ್ಲಿಸಿದರು.

ಪ್ರತಿಭಟನೆ ಉದ್ದೇಶಿಸಿ ದಿವೈಎಫ್‌ಐ ಗ್ರಾಮ ಘಟಕದ ಅಧ್ಯಕ್ಷ  ಶಿವರೆಡ್ಡಿ  ಮಾತನಾಡಿ, ತೋರಣಗಲ್ಲು ಗ್ರಾಮ, ಅಭಿವೃದ್ಧಿ ಹೊಂದುವ ಸ್ಮಾರ್ಟ್ ಸಿಟಿಯಾಗಿ ಪರಿಗಣಿಸಲ್ಪಟ್ಟಿದೆ ಮತ್ತೊಂದು ಕಡೆ ಈ ಗ್ರಾಮದಲ್ಲಿ ಬಡತನವು ತಾಂಡವಾಡುತ್ತಿದ್ದು ಸಾಮಾನ್ಯರ ಆರ್ಥಿಕ ಪಿಡುಗಿನಿಂದ ಬಳಲುತ್ತಿದ್ದಾರೆ.  ವಾಸ ಮಾಡಲು ಯೋಗ್ಯವಾದ ನಿವೇಶನ ಇಲ್ಲದೆ ಮತ್ತು ನಿವೇಶನವಿದ್ದು ಮನೆಯಲ್ಲಿದೆ ದುಡಿದು ತಿನ್ನಲು ಉದ್ಯೋಗವಿಲ್ಲ ಇದ್ದರೂ ಕೊಡಿ ಒಂದು ಕುಟುಂಬದವರ ಜೊತೆ ಯೋಗ್ಯಾವಾಗಿ ಬದುಕಲು ಕನಿಷ್ಠ ವೇತನದ ಆದಾಯ ಸಿಗುತ್ತಿಲ್ಲ ಎಂದರು.

ಡಿವೈಎಫ್‌ಐ ಜಿಲ್ಲಾ ಕಾರ್ಯದರ್ಶಿ ಸ್ವಾಮಿ ಅವರು ಮಾತನಾಡಿ, ಒಂದು ಹೊತ್ತಿನ ಊಟಕ್ಕೆ ಚಿಂತಿಸುವ  ಸ್ಥಿತಿಯಲ್ಲಿ ಗ್ರಾಮದ ಜನರಿದ್ದಾರೆ. ಅವರಿಗೆ ನಿವೇಶನ ಇಲ್ಲ. ಉದ್ಯೋಗ ಇಲ್ಲ, ಸರಿಯಾದ ಸೌಲಭ್ಯ ಇಲ್ಲದೆ ನರಳುತ್ತಿದ್ದಾರೆ.  ಉದ್ಯೋಗ ಖಾತ್ರಿ ಕೆಲಸವನ್ನು ಅತಿ ಶೀಘ್ರದಲ್ಲಿ ಜಾರಿ ಮಾಡಬೇಕು.  ಮತ್ತು 200 ದಿನಗಳಿಗೆ ಕೆಲಸವನ್ನು ಹೆಚ್ಚಿಸಬೇಕೆಂದು ಎಂದು ಆಗ್ರಹಿಸಿದರು.

ಡಿವೈಎಫ್‌ನ ತೋರಣಗಲ್ಲು ಗ್ರಾಮ ಸಮಿತಿಯ ಉಪಾಧ್ಯಕ್ಷರಾದ ವೇಭಾಕುಮಾರಿ ಅವರು ಮಾತನಾಡಿ,  ಸಮುದಾಯ ಆರೋಗ್ಯ ಕೇಂದ್ರ ಮೂಲಸೌಲಭ್ಯ ಇಲ್ಲದೆ ನರಳುತ್ತಿದೆ.  ಶಾಲಾ ಕಾಲೇಜುಗಳಿಗೆ ಮೂಲಸೌಲಭ್ಯಗಳಿಲ್ಲ, ಸರಿಯಾದ ರಸ್ತೆಗಳು ಇಲ್ಲದೆ ಜನ ಸಂಕಷ್ಟ ಅನುಭವಿಸುತ್ತಿದ್ದಾರೆ. ಕೂಡಲೇ ಸೌಲಭ್ಯಗಳನ್ನು ನೀಡಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಹಿರಿಯ ಮುಖಂಡರು ಎಂಪಿ ತಿಮ್ಮಪ್ಪ ಮತ್ತು ಡಿವೈಎಫ್‌ಐ ಮುಖಂಡರಾದ ವಾಲ್ಮೀಕಿ, ಅಕ್ಷಯ್, ಸಂತೋಷ, ಹಾಗೂ ನಿವೇಶನ ರಹಿತರಾದ, ಮಾಯಮ್ಮ, ಲಕ್ಷಮ್ಮಾ, ದುರ್ಗಮ್ಮ, ಏರಿಮ್ಮಾ, ರಮ್ಯಾ ಹಾಗೂ ಇತರರು ಭಾಗವಹಿಸಿದ್ದರು.

Donate Janashakthi Media

Leave a Reply

Your email address will not be published. Required fields are marked *