ದಿವಂಗತ ಗಣೇಶ್ ಬಂಗೇರ ಸ್ಮರಣೆಯಲ್ಲಿ ಡಿವೈಎಫ್‌ಐ ವತಿಯಿಂದ ರಕ್ತದಾನ ಶಿಬಿರ

Please follow and like us:
ಯಯ್ಯಾಡಿ–ಕೊಂಚಾಡಿ: ದಿವಂಗತ ಗಣೇಶ್ ಬಂಗೇರ ಕೊಪ್ಪಳಕಾಡು ಅವರ ಸ್ಮರಣಾರ್ಥ ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್ (ಡಿವೈಎಫ್‌ಐ) ಯಯ್ಯಾಡಿ–ಕೊಂಚಾಡಿ ಘಟಕದ ವತಿಯಿಂದ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು. ಕೆ.ಎಂ.ಸಿ. ಆಸ್ಪತ್ರೆಯ ಸಹಯೋಗದಲ್ಲಿ ನವೆಂಬರ್ 15ರಂದು ಕೊಂಚಾಡಿಯ ಶ್ರೀರಾಮಾಶ್ರಮ ಪ್ರಾಥಮಿಕ ಶಾಲೆಯ ಸಭಾಂಗಣದಲ್ಲಿ ನಡೆದ ಶಿಬಿರದಲ್ಲಿ ಸ್ಥಳೀಯರು, ಯುವಜನರು ಹಾಗೂ ಡಿವೈಎಫ್‌ಐ ಕಾರ್ಯಕರ್ತರು ಸ್ವಯಂಪ್ರೇರಿತರಾಗಿ ರಕ್ತದಾನ ಮಾಡಿದರು. ಡಿವೈಎಫ್‌ಐ

ಡಿವೈಎಫ್‌ಐ ಕೊಂಚಾಡಿ ಘಟಕದ ಅಧ್ಯಕ್ಷ ವೆಂಕಟೇಶ್ ಕೊಂಚಾಡಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಸಂಘಟನೆಯ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಮನೋಜ್ ವಾಮಂಜೂರು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ರಕ್ತದಾನವು ಮತ್ತೊಬ್ಬರ ಜೀವ ಉಳಿಸುವ ಮಹತ್ವದ ಮಾನವೀಯ ಸೇವೆಯಾಗಿದ್ದು, ಇಂತಹ ಶಿಬಿರಗಳು ಸಮಾಜದಲ್ಲಿ ಪರಸ್ಪರ ಸಹಕಾರ ಮತ್ತು ಮಾನವೀಯ ಮೌಲ್ಯಗಳನ್ನು ಬೆಳೆಸಲು ನೆರವಾಗುತ್ತವೆ ಎಂದು ಹೇಳಿದರು.

ಇದನ್ನೂ ಓದಿ :ಕಾರ್ಮಿಕ ಸಂಹಿತೆಗಳ ವಿರುದ್ಧ ರಾಜ್ಯಾದ್ಯಂತ ಕಟ್ಟಡ ಕಾರ್ಮಿಕರ ಪ್ರತಿಭಟನೆ

ಕಾರ್ಯಕ್ರಮದಲ್ಲಿ ಉದ್ಯಮಿ ಉಮೇಶ್ ದಂಡಕೇರಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಲಯನ್ಸ್ ಕ್ಲಬ್ ಕುಳೂರು ವಿಭಾಗದ ಅಧ್ಯಕ್ಷ ಹರ್ಷವರ್ಧನ್ ಹಾಗೂ ಲಯನ್ಸ್ ಕ್ಲಬ್‌ನ ಎನ್.ಜೆ. ನಾಗೇಶ್ ಕುಮಾರ್ ಉಪಸ್ಥಿತರಿದ್ದು ಮಾತನಾಡಿದರು. ಡಿವೈಎಫ್‌ಐ ಮುಖಂಡೆ ಸುನಂದ ಕೊಂಚಾಡಿ ಹಾಗೂ ಕೆ.ಎಂ.ಸಿ. ಆಸ್ಪತ್ರೆಯ ವೈದ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಯಯ್ಯಾಡಿ–ಕೊಂಚಾಡಿ ಭಾಗದ ಹಲವು ಮಂದಿ ಶಿಬಿರದಲ್ಲಿ ಪಾಲ್ಗೊಂಡು ರಕ್ತದಾನ ಮಾಡಿದರು. ಕಾರ್ಯಕ್ರಮದ ಆರಂಭದಲ್ಲಿ ನವೀನ್ ಬೊಲ್ಪುಗುಡ್ಡೆ ಸ್ವಾಗತಿಸಿದರು. ಕೊನೆಯಲ್ಲಿ ರಾಜ್ ಕುಮಾರ್ ವಂದಿಸಿದರು.

ದಿವಂಗತ ಗಣೇಶ್ ಬಂಗೇರ ಅವರ ಸ್ಮರಣೆಯನ್ನು ರಕ್ತದಾನದಂತಹ ಮಾನವೀಯ ಸೇವೆಯ ಮೂಲಕ ಅರ್ಥಪೂರ್ಣಗೊಳಿಸುವ ಉದ್ದೇಶದಿಂದ ಆಯೋಜಿಸಿದ್ದ ಶಿಬಿರ ಯಶಸ್ವಿಯಾಗಿ ನಡೆಯಿತು. ಡಿವೈಎಫ್‌ಐ

ಇದನ್ನೂ ನೋಡಿ : AIKS ಸಮ್ಮೇಳನ | ರೈತರ ಒಗ್ಗಟ್ಟಿನ ಮೆರವಣಿಗೆ, ಕೃಷಿ ಬಿಕ್ಕಟ್ಟಿನ ಕುರಿತು ಚರ್ಚೆ Janashakthi Media

Please follow and like us:
Donate Janashakthi Media

Leave a Reply

Your email address will not be published. Required fields are marked *