ದ್ವೇಷ ಬಿಟ್ಟು ದೇಶ ಕಟ್ಟಬೇಕು: ಬರಗೂರು ರಾಮಚಂದ್ರಪ್ಪ

ವರದಿ:
ಮಮತ ಜಿ.
ನಾಗಾರ್ಜುನ ಎಂ. ವಿ.

ಬೆಂಗಳೂರು: ಭಾರತದ ಪ್ರಜೆಗಳು ಎಲ್ಲರು ಸಮಾನರು ಧರ್ಮ, ಜಾತಿ, ಹರಿಯುತ್ತಿರುವ ರಕ್ತ ಎಲ್ಲವು ಒಂದೆ ಎಂದು ರಾಜ್ಯಕ್ಕೆ, ದೇಶಕ್ಕೆ ಅಂಟಿರುವ ಧರ್ಮ, ಜಾತೀಯತೆ ಎಂಬ ಕೊಳೆಯನ್ನು ತೆಗೆಯುವ ಬಗೆಗೆ ಆಯೋಜನೆಗೊಂಡ ಒಂದು ಕಾರ್ಯಕ್ರಮ `ಸೌಹಾರ್ದ ಸಂಸ್ಕೃತಿ ಸಮಾವೇಶ’ ಬೆಂಗಳೂರಿನ ಅಂಬೇಡ್ಕರ್ ಭವನದಲ್ಲಿ ನಡೆಯಿತು.

ರಾಜ್ಯದ 20ಕ್ಕೂ ಹೆಚ್ಚು ವಿವಿಧ ಪ್ರಗತಿಪರ ಸಂಘಟನೆಗಳ ಆಶ್ರಯದಲ್ಲಿ ಗುರುವಾರ ನಡೆದ ಸಮಾವೇಶವನ್ನು ನ್ಯಾಯಮೂರ್ತಿ ಎನ್. ಸಂತೋಷ್ ಹೆಗ್ಡೆ ಅವರು ಗಿಡಕ್ಕೆ ನೀರೆರೆಯುವ ಮೂಲಕ ಉದ್ಘಾಟಿಸಿದರು. ಧರ್ಮ ಗುರುಗಳು ಮತ್ತು ಸಂವಿಧಾನ ತಜ್ಞರ ಸಂದೇಶ ಸಾರುವ ‘ಸೌಹಾರ್ದ ಸಂಸ್ಕೃತಿ ಸಮಾವೇಶ’ದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಇದನ್ನು ಓದಿ: ‘ಎಲ್ಲ ಧರ್ಮಗಳಲ್ಲೂ ಸಣ್ಣ ಜನ ಇರುತ್ತಾರೆʼ – ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ

ಕಾರ್ಯಕ್ರಮದಲ್ಲಿ ಎಲ್ಲ ಧರ್ಮದ ಮಠಾಧೀಶರು, ಮೌಲ್ವಿಗಳು ಹಾಗೂ ಸಂತರು ಆಸೀನರಾಗಿದ್ದರು. ಹಾಗೇಯೇ ಸಂವಿಧಾನದ ಮಹತ್ವವನ್ನು ತಿಳಿಸಲು ಮುಖ್ಯವಾಗಿ ಕೇಂದ್ರಬಿಂದು ಆದ ವಿಶ್ರಾಂತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಭಾರತದ ಸರ್ವೋಚ್ಚ ನ್ಯಾಯಲಯ, ವಿಶ್ರಾಂತ ನ್ಯಾಯಮೂರ್ತಿ ವಿ.ಗೋಪಾಲಗೌಡ, ಕರ್ನಾಟಕ ಹೈಕೋರ್ಟ್‌ ವಿಶ್ರಾಂತ ನ್ಯಾಯಮೂರ್ತಿ ಹೆಚ್.ಎನ್.ನಾಗಮೋಹನ್ ದಾಸ್ ಉಪಸ್ಥಿತರಿದ್ದರು.

ವಿವೀಕ ಅವಿವೇಕವನ್ನ ಆಳ್ತಾ ಇದೆ. ಮನುಷ್ಯ ಮನುಷ್ಯನ ನಡುವ ಕಂದರವನ್ನು ಧರ್ಮವು ಹುಟ್ಟಾಕಿ ಎಂದು ಹೇಳುವುದಿಲ್ಲ. ಆದರೆ ಇಂದು ನಾಡಿನಲ್ಲಿ ಕೆಲವರ ಸ್ವಾರ್ಥ ಹಿತಾಸಕ್ತಿಗಾಗಿ ಬಳಸಿಕೊಳ್ಳುತ್ತಿದ್ದಾರೆ. ಭಾರತದಲ್ಲಿ‌ ಪುರಾತನದಿಂದ ಹಿಡಿದು ಸ್ವಾತಂತ್ರ್ಯ ಹೋರಾಟದವರೆಗೂ ಸಹ ಎಂದಿಗೂ ಜಾತಿ-ಧರ್ಮದ ಹೆಸರಲ್ಲಿ ಸಂಘರ್ಷಗಳು ನಡೆದಿಲ್ಲ.

ದ್ವೇಷ ಬಿಟ್ಟು ದೇಶ ಕಟ್ಟಬೇಕು. ವಿವೇಕದಿಂದ ವರ್ತಿಸಿ ಅವಿವೇಕತನವನ್ನುತೊರೆಯಬೇಕು. ವಿಚಾರವಂತರಾಗಿ ವಿಕಾರತೆಯನ್ನು ತೊರೆಯಬೇಕೆಂದು ಎಂದು ಸಾಹಿತಿ ಬರಗೂರು ರಾಮಚಂದ್ರಪ್ಪ ಹೇಳಿದರು.

ಚಿತ್ರದುರ್ಗದ ಛಲವಾದಿ ಪೀಠಾಧ್ಯಕ್ಷ ಬಸವ ನಾಗಿದೇವ ಸ್ವಾಮೀಜಿ ಅವರು, ವಿಧಾನಸೌಧದಲ್ಲಿರುವ ಬಲ್ಬ್‌ಗಳು (ಜನಪ್ರತಿನಿಧಿಗಳು) ಸರಿಯಿಲ್ಲ. ಕೆಲವು ಪಕ ಪಕ ಅಂತಿದ್ದರೆ, ಇನ್ನೂ ಕೆಲವು ಉರಿಯುತ್ತಲೇ ಇಲ್ಲ. ಹಾಗಾಗಿ ವಿದ್ಯುಚ್ಛಕ್ತಿ ಹಾಯಿಸುವ ಮತದಾರ ಇವುಗಳನ್ನು ಬದಲಾಯಿಸಬೇಕಿದೆ ಎಂದು ಕುಟುಕಿದರು.

ಇದನ್ನು ಓದಿ: ಬಹುತ್ವ ಸಂಸ್ಕೃತಿ ಪರಂಪರೆ ಉಳಿವಿಗಾಗಿ ಸೌಹಾರ್ದ ಸಂಸ್ಕೃತಿ ಸಮಾವೇಶ

‘ನಮ್ಮ ಜನಪ್ರತಿನಿಧಿಗಳ ಆಯ್ಕೆಯಲ್ಲಿನ ದೋಷವೇ ಇವತ್ತಿನ ಇಷ್ಟೆಲ್ಲಾ ಅಶಾಂತಿಗಳಿಗೆ ಪ್ರಮುಖ ಕಾರಣವಾಗಿದೆ’ ಎಂದ ಅವರು, ‘ಇಂದು ಕೆಲವು ಮಠಾಧೀಶರು ಮತಬ್ಯಾಂಕ್‌ಗಳ ಶಾಖೆಗಳಂತಾಗಿದ್ದಾರೆ. ರಾಜಕಾರಣಿಗಳು ವಿಧಾನಸೌಧದ ಪಶ್ಚಿಮ ದ್ವಾರದಲ್ಲೇ ವ್ಯವಹರಿಸುವ ಮೂಲಕ ವಾಸ್ತವದಲ್ಲೂ ಹಿಂಬಾಗಿಲ ವ್ಯವಹಾರಗಳಲ್ಲಿ ಮುಳುಗಿದ್ದಾರೆ. ಈ ವ್ಯವಸ್ಥೆ ಸರಿಯಾಗಲು ಮತದಾರರು ಆಮಿಷಗಳಿಂದ ದೂರಾಗಿ ಉತ್ತಮರನ್ನು ಆಯ್ಕೆ ಮಾಡುವುದೇ ಸರಿಯಾದ ಮಾರ್ಗ’ ಎಂದರು.

ಅಂತರಂಗ ಹಾಗೂ ಬಹಿರಂಗದಲ್ಲಿ ಒಂದೆ ಮಾತು ಒಂದೆ ನಡವಳಿಕೆ ಇರಬೇಕು. ಕಾರ್ಯಕ್ರಮದ ಹೊರಗೆ ಒಳಗೆ ಒಂದೆ ಮಾತಿರಬೇಕು. ಮೊದಲು ನೀನು-ನಾನು ಎಂಬ ಭಾವನೆಗಳು ಬದಲಾಗಬೇಕೆಂದು ಹೇಳಿದರು. ಮರುಭೂಮಿಯಲ್ಲಿ ನೀರುಣಿಸುವ ಹಾಗೆ ಜಾತಿ, ಧರ್ಮ ದೇವರುಗಳ ತಾರತಮ್ಯಕ್ಕೆ ಬುದ್ಧನ ಮೌನವೇ ಮಾತಾಯಿತು ಎಂದರು.

ಸುಪ್ರೀಂ ಕೋರ್ಟ್‌ ವಿಶ್ರಾಂತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಸಮಾಜದಲ್ಲಿ ಮಾನವ ಹಕ್ಕುಗಳನ್ನು ಮೊದಲು ತುಂಬಬೇಕು. ಸಂವಿಧಾನದ ಕಾನೂನನ್ನು ನ್ಯಾಯಲಯದಲ್ಲಿ ತುಂಬಬೇಕು ಎಂದು ಹೇಳಿದರು.

ದೇಶದಲ್ಲಿ ಸೌಹಾರ್ದತೆಯನ್ನು ಕದಡಲಾಗುತ್ತಿದೆ: ಮೌಲಾನಾ ಶಾಫಿ ಸಅದಿ

ಕರ್ನಾಟಕ ರಾಜ್ಯ ವಕ್ಫ್ ಮಂಡಳಿ ಅಧ್ಯಕ್ಷ ಮೌಲನ್ ಶಾಫಿ ಸಅದಿ ಮಾತನಾಡಿ, ಎಲ್ಲಾ ಧರ್ಮವನ್ನು ಪ್ರೀತಿಸುವುದನ್ನ , ಗೌರವಿಸುವುದನ್ನ  ಕಲಿಯಬೇಕು  ಯಾರು ಧರ್ಮವನ್ನ  ಹೀಯಾಳಿಸಿಸುವ  ಕಾರ್ಯ ಮಾಡಬಾರದು  ಎಂದು ಹೇಳುತ್ತಾ ಇಂದು ದೇಶದಲ್ಲಿ  ಧರ್ಮಾದಂತೆ ತಾರಾಕ್ಕಕೆ ಏರುತ್ತಿದ್ದೂ, ದೇಶದ ಜನರ  ನಡುವಿನ ಸಾಮರಸ್ಯವನ್ನ ಕಡಡುವಂತೆ ಮಾಡುತ್ತಿದೆ. ಇದಕ್ಕೆ ನಾವೆಲ್ಲ ತಲೆದೂಗಬಾರದು. ಜಗತ್ತಿನಲ್ಲಿ ವಿವಿಧ ರೀತಿಯಲ್ಲಿ ಹೂಗಳು, ಹಣ್ಣುಗಳು, ಚಿಟ್ಟೆಗಳು ಇವೆಯೋ ಅದೇ ರೀತಿ ಈ ನಮ್ಮ  ಭಾರತದಲ್ಲಿ ಒಳ್ಳೆಯ ಧರ್ಮ, ಜಾತಿ, ಸಂಸ್ಕೃತಿಯ ಜನರಿದ್ದಾರೆ. ಹಾಗಾಗಿ ಕೆಲವು  ಕಿಡಿಗೇಡಿಗಳು ಧರ್ಮ ಜಾತಿ ಹೆಸರಲ್ಲಿ ನಮ್ಮ ಮನಸನ್ನ  ಏಕತೆಯನ್ನ ಕದಡುವಂತೆ ಮಾಡುತ್ತಿದ್ದಾರೆ. ಅದಕ್ಕೆ ನಾವು ಜಗ್ಗಬಾರದು, ರಾಜ್ಯದಲ್ಲಿ ಧರ್ಮದ ಹೆಸರಲ್ಲಿ ಬೆಂಕಿ ಹೊತ್ತಿ ಉರಿಯುತ್ತಿರುವ ಈ ಸಮಯದಲ್ಲಿ ಇಂತಹ ಸೌಹಾರ್ದತೆ ಮೂಡಿಸುವಂತಹ ಕಾರ್ಯಕ್ರಮ ಕೈಗೊಂಡಿದ್ದು ರಾಜ್ಯದ ಜನರಿಗೆ ಮಾದರಿಯಾಗಲಿದೆ ಎಂದು ತಿಳಿಸಿದರು.

ಸಾಣೇಹಳ್ಳಿಯ ಸಿರಿಗೆರೆ ತರಳಬಾಳು ಬೃಹನ್ನಠದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಚಿತ್ರದುರ್ಗ ಛಲವಾದಿ ಜಗದ್ಗುರು ಪೀಠದ ಬಸವನಾಗಿದೇವ ಶರಣರು, ಹೊಸದುರ್ಗ ಕಾಗಿನೆಲೆ ಕನಕ ಗುರುಪೀಠ ಶಾಖೆಯ ಈಶ್ವರಾನಂದಪುರಿ ಸ್ವಾಮೀಜಿ ಹಾಗೂ ಅಲ್ ಹಿದಾಯ ಮಸ್ಜಿದ್ ನ ಮೌಲಾನಾ ಶಾಹುಲ್ ಹಮೀದ್ ಮೌಲ್ವಿ ಇದ್ದರು.

ಕೂಡಲಿ ಶೃಂಗೇರಿ ಮಠದ ವಿದ್ಯಾಧರ ವಿದ್ಯಾರಣ್ಯ ಭಾರತೀ ಸ್ವಾಮೀಜಿ, ಬೆಂಗಳೂರಿನ ಆರ್ಚ್‌ ಬಿಷಪ್‌ ರೆ.ಫಾ.ಡಾ.ಪೀಟರ್‌ ಮಜಾದೊ, ಅಲ್‌ ಹಿದಾಯಿ ಮಸೀದಿಯ ಮೌಲಾನ ಶಾಹುಲ್‌ ಹಮೀದ್‌ ಮೌಲ್ವಿ, ರಾಜನ ಹಳ್ಳಿ ಮಹರ್ಷಿ ವಾಲ್ಮೀಕಿ ಗುರು ಪೀಠದ ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ, ಕಾಗಿನೆಲೆ ಗುರುಪೀಠದ ಹೊಸ ದುರ್ಗ ಶಾಖೆಯ ಈಶ್ವರಾನಂದಪುರಿ ಸ್ವಾಮೀಜಿ, ಹಿರಿಯೂರಿನ ಆದಿಜಾಂಬವ ಪೀಠದ ಷಡಕ್ಷರಿ ಮುನಿ ಸ್ವಾಮೀಜಿ, ಹೊಸದುರ್ಗ ಕುಂಚಟಿಗ ಪೀಠದ ಶಾಂತವೀರ ಸ್ವಾಮೀಜಿ ಅವರುಗಳು ಬುದ್ಧ, ಬಸವ, ಗಾಲಿಬ್, ಶಿವರುದ್ರಪ್ಪರಂತಹ ಹೆಸರಾಂತ ಮಹಾನೀಯರ ವಾಕ್ಯಗಳನ್ನು ಉಲ್ಲೇಖಿಸಿ ಮಾತನಾಡಿದರು.

ಸಮಾವೇಶಕ್ಕೆ ಸಾಹಿತಿಗಳು, ಪತ್ರಕರ್ತರು, ಬರಹಗಾರರು, ಸಂಘಟಕರು ಸೇರಿದಂತೆ ರಾಜ್ಯದ ವಿವಿದೆಡೆಗಳಿಂದ ಆಗಮಿಸಿದ್ದರು.

Donate Janashakthi Media

Leave a Reply

Your email address will not be published. Required fields are marked *