ನವದೆಹಲಿ; ಜ, 16 : ಇನ್ಮುಂದೆ ದ್ವಿಚಕ್ರ ವಾಹನದಲ್ಲಿ ಸೈಡ್ ಮಿರರ್ ಇರದಿದ್ರೆ ವಾಹನ ಸವಾರರು ₹500 ದಂಡ ತೆರಬೇಕಾಗುತ್ತದೆ ಎಂದು ನವದೆಹಲಿ ಸಂಚಾರ ಪೋಲಸರು ಅಧಿಕೃತ ಹೇಳಿಕೆ ನೀಡಿದ್ದಾರೆ.
ವಾಹನ ಸವಾರರ ಸುರಕ್ಷತೆ ದೃಷ್ಟಿಯಿಂದ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಈ ನಿಯಮ ಜಾರಿ ಮಾಡಲಾಗಿದ್ದು. ದ್ವಿಚಕ್ರ ವಾಹನಗಳಿಗೆ ಸೈಡ್ ಮಿರರ್ ಇರದಿದ್ದರೆ ₹500 ದಂಡ ಹಾಗೂ ಕಾರ್ನಲ್ಲಿ ಹಿಂಬದಿ ಕುಳಿತವರು ಸೀಟ್ ಬೆಲ್ಟ್ ಧರಿಸದಿದ್ದರೆ ₹1000 ದಂಡ ವಿಧಿಸಲಾಗುತ್ತದೆ ಎಂದು ತಿಳಿಸಿದ್ದಾರೆ. ಈ ನಿಯಮ ಹೊಸದಾಗಿ ರೂಪುಗೊಂಡಿಲ್ಲ. ಮೋಟಾರು ವಾಹನ ಕಾಯಿದೆ 1988 ಮತ್ತು ಕೇಂದ್ರೀಯ ಮೋಟಾರು ವಾಹನ ಕಾಯಿದೆ 1989 ಎರಡರಲ್ಲೂ ಈ ನಿಯಮಗಳನ್ನು ಉಲ್ಲೇಖಿಸಲಾಗಿದೆ ಆದರೆ ಅವುಗಳ ಪಾಲನೆಯಾಗುತ್ತಿಲ್ಲ ಇನ್ಮುಂದೆ ಇವುಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗುವುದು ಎಂದು ಪೋಲಿಸ್ ಅಧಿಕಾರಿಗಳು ತಿಳಿಸಿದ್ದಾರೆ.