ಕೋಲ್ಕತ್ತಾ: ಬಿಜೆಪಿ ಅಭ್ಯರ್ಥಿ ಸುವೇಂದು ಅಧಿಕಾರಿ, ಪ್ರಚಾರದ ವೇಳೆ ಭಾಷಣ ಮಾಡುವಾಗ ದ್ವೇಷಪೂರಿತ ಮಾತುಗಳನ್ನು ಆಡಿದ್ದಾರೆ ಎಂಬ ದೂರಿನ ಮೇರೆಗೆ ಅವರಿಗೆ ಚುನಾವಣಾ ಆಯೋಗ ನೋಟಿಸ್ ನೀಡಿದೆ.
ಕಳೆದ ತಿಂಗಳು ಚುನಾವಣಾ ಪ್ರಚಾರದ ವೇಳೆ ಭಾಷಣ ಮಾಡುವಾಗ ಕೋಮು ಸೌಹಾರ್ದ ಕದಡುವ ಮಾತುಗಳನ್ನು ಆಡುವ ಮೂಲಕ, ನಿಯಮ ಉಲ್ಲಂಘನೆ ಮಾಡಿದ್ದಾರೆಂದು ಸಿಪಿಐ ಎಂಎಲ್ ಕೇಂದ್ರ ಸಮಿತಿಯ ಕವಿತಾ ಕೃಷ್ಣನ್ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದರು.
ದೂರಿನ ಹಿನ್ನೆಲೆಯಲ್ಲಿ ನಂದಿಗ್ರಾಮ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸುವೇಂದು ಅವರಿಗೆ ಚುನಾವಣಾ ಆಯೋಗ ನೋಟಿಸ್ ಜಾರಿಗೋಳಿಸಿದೆ. ಹಾಗೇಯೇ 24 ಗಂಟೆಯಲ್ಲಿ ನೋಟಿಸ್ಗೆ ಉತ್ತರ ನೀಡಲು ಚುನಾವಣಾ ಆಯೋಗ ಸೂಚನೆ ನೀಡಿದೆ.
ಚುನಾವಣಾ ಪ್ರಚಾರದಲ್ಲಿ ತೊಡಗಿರುವ ರಾಜಕೀಯ ಮುಖಂಡರು ಅವರ ಕೆಲಸ, ಯೋಜನೆ, ಹಳೆ ದಾಖಲೆಗಳನ್ನು ಆಧರಿಸಿ ಮಾತನಾಡಬೇಕು ಹೊರತು ದಾಖಲೆ ಇಲ್ಲದೆ ಕಾರ್ಯಕರ್ತರ ವಿರುದ್ಧ ಆರೋಪಮಾಡುವಂತಿಲ್ಲ. ಮತ್ತು ಸುವೇಂದು ಅಧಿಕಾರಿಯವರ ಭಾಷಣದಲ್ಲಿ ಸಾಬೀತಾಗದ ಅಪರಾಧವನ್ನು ಉಲ್ಲೇಖಿಸಿ ಮಾತನಾಡುವುದು ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ ಎಂದು ಆಯೋಗ ತಿಳಿಸಿದೆ.