ದುಡಿಯುವ ಜನತೆಯ ಪ್ರತಿರೋಧ, ಅಖಿಲ ಭಾರತ ಸಾರ್ವತ್ರಿಕ ಮುಷ್ಕರಕ್ಕೆ ಕರೆ

  • 26 ರಂದು ಕಾರ್ಮಿಕರ ಸಂಘಟನೆಗಳ ಜಂಟಿ ಸಮಿತಿಯಿಂದ ಪ್ರತಿಭಟನಾ ಮೆರವಣಿಗೆ 

ಬೆಂಗಳೂರು :ಕೊರೋನಾ ಸಾಂಕ್ರಾಮಿಕ ರೋಗದಿಂದ ದೇಶದಲ್ಲಿ ಅನಿರೀಕ್ಷಿತವಾಗಿ ಉಂಟಾದ ಲಾಕ್ ಡೌನ್ ಅನೇಕ ಸಂಕಷ್ಟಗಳನ್ನು ತಂದೊಡ್ಡಿದೆ. ಮೊದಲೇ ಸಂಕಷ್ಟದಲ್ಲಿದ್ದ  ಕಾರ್ಮಿಕರು, ರೈತರು,  ಇನ್ನಷ್ಟು ಸಂಕಷ್ಟಗಳನ್ನು ಎದುರಿಸುತ್ತಿದ್ದಾರೆ. ಇದರ ಬೆನ್ನಲ್ಲೆ ಸರಕಾರ  ಅಪಾಯಕಾರಿ  ಕೃಷಿ ಮಸೂದೆಗಳನ್ನು ಹಾಗೂ ಕಾರ್ಮಿಕ ಸಂಹಿತೆಗಳನ್ನು ತಂದ ಪರಿಣಾಮದಿಂದ ಕಾರ್ಮಿಕರ ಹಾಗೂ ರೈತರ ಗೋಳು ಹೇಳತೀರದಾಗಿದೆ ಎಂದು ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ  ಜೆಸಿಟಿಯು ಕೇಂದ್ರ ಮತ್ತು ರಾಜ್ಯ ಸರಕಾರಗಳ ವಿರುದ್ದ ಆಕ್ರೋಶವನ್ನು ಹೊರಹಾಕಿವೆ. 

ಭಾರತದ ಕಾರ್ಮಿಕರು ನವ ಉದಾರವಾದಿ ಧೋರಣೆಗಳ ವಿರುದ್ದ  ಇದೇ 26 ರಂದು ಸಾರ್ವತ್ರಿಕ ಮುಷ್ಠಕರದ ತಯಾರಿ ನಡೆಸಿದ್ದು ಇದರ ಭಾಗವಾಗಿ ಇಂದು ಬೆಂಗಳೂರಿನ ಗಾಂಧಿಭವನದಲ್ಲಿ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ (ಜೆಸಿಟಿಯು) ಬೃಹತ್ ಹೋರಾಟಕ್ಕೆ ಸಿದ್ದತೆ ಭಾಗವಾಗಿ ಪತ್ರಿಕಾ ಗೋಷ್ಠಿಯನ್ನು ನಡೆಸಿದರು.

ಕೆಂದ್ರ ಸರ್ಕಾರವು ಯಾವುದೇ ಕಾನೂನುಗಳನ್ನು ಜಾರಿಗೊಲಿಸುವ ಮೊದಲು ಅದಕ್ಕೆ ಸಂಬಂಧಪಟ್ಟ ಸಮುದಾಯದವರ ಜೊತೆ ಚರ್ಚಿಸಿ, ಸಮಾಲೋಚಿಸಿ ಅವರಿಂದ ಬರುವ ಸಲಹೆ ತಿದ್ದುಪಡಿ ಮತ್ತು ವಿಚಾರಗಳನ್ನು ಪರಿಗಣಿಸುವುದು ಪ್ರಜಾತಾಂತ್ರಿಕೆ ರೂಡಿ. ಈ ನೀತಿಯನ್ನು ಗಾಳಿಗೆ ತೂರಿ ಸರ್ವಾಧಿಕಾರ ಪ್ರವೃತ್ತಿಯನ್ನು ಪಾಲಿಸುತ್ತಿರುವ ಸರ್ಕಾರದ ನೀತಿಯನ್ನು ವಿರೋಧಿಸಿ ಕಾರ್ಮಿಕರ ಸಂಘಟನೆಗಳ ಜಂಟಿ ಸಮಿತಿ (ಜೆಸಿಟಿಯು) ನಗರದ ರೈಲ್ವೆ ನಿಲ್ದಾಣದಿಂದ ಪ್ರೀಡಂ ಪಾರ್ಕ್  ವರೆಗೆ ಸಾರ್ವತ್ರಿಕ ಮುಷ್ಕರ ಪ್ರತಿಭಟನಾ ಮೆರವಣಿಗೆ  ನಡೆಸಲಿದೆ ಎಂದು ಸಿಐಟಿಯುನ ರಾಜ್ಯಧ್ಯಕ್ಷರಾದ ಎಸ್ ವರಲಕ್ಷ್ಮಿ ಹೇಳಿದರು.

ಕೊರೋನಾ ಸಾಂಕ್ರಾಮಿಕ ರೋಗದಿಂದ ದೇಶದಲ್ಲಿ ಅನಿರೀಕ್ಷಿತವಾಗಿ ಲಾಕ್ಡೌನ್ ಮಾಡಲಾಯಿತು. ಮೊದಲೇ ಸಂಕಷ್ಟದಲ್ಲಿರುವ ಕಾರ್ಮಿಕರ ಹಿತವನ್ನು ಕಾಪಾಡುವ ಬದಲಿಗೆ ಮತ್ತಷ್ಟು ಸಂಕಷ್ಟ ಮಾತ್ರವಲ್ಲ ದೇಶದ ಆರ್ಥಿಕ ಸಾರ್ವಭೌಮತೆಗೆ ಧಕ್ಕೆ ತರುವ ಮತ್ತು ಅನ್ನದಾತ ರೈತ, ಸಂಪತ್ತನ್ನು ಸೃಷ್ಟಿಸುವ ಶ್ರಮಿಕನನ್ನು ಪೂರ್ಣ ಗುಲಾಮಗಿರಿಗೆ ತಳ್ಳುವ ಕೇಂದ್ರದ ಸರ್ವಾಧಿಕಾರಿ ವರ್ತನೆ ಮಾಡುತ್ತಿರುವ ಪ್ರಭುತ್ವದ ವಿರುದ್ದ ದೇಶದಲ್ಲಿರುವ ಎಲ್ಲ ದೇಶ ಪ್ರೇಮಿ ಕಾರ್ಮಿಕ ಸಂಘಟನೆಗಳು, ಸ್ವತಂತ್ರ ಸಂಘಟನೆಗಳು ಎಲ್ಐಸಿ, ಬ್ಯಾಂಕ್, ರಕ್ಷಣಾ ವಲಯ, ರೈಲ್ವೆ, ಬಿಎಸ್ಎನ್ಎಲ್, ರಾಜ್ಯ ಮತ್ತು ಕೇಂದ್ರ ಸೇವೆ ಮುಂತಾದ ಅಖಿಲ ಭಾರತ ಸಂಘಟನೆಗಳು,ಕಾರ್ಮಿಕರು, ನೌಕರರು ಅಸಂಘಟಿತ ಕ್ಷೇತ್ರದ ಕಾರ್ಮಿಕರಾದ ಕಟ್ಟಡ, ಹಮಾಲಿ, ಬೀಡಿ, ತೋಟಗಾರಿಕೆ, ಗುತ್ತಿಗೆ ಕಾರ್ಮಿಕರು, ಪಂಚಾಯ್ತಿ ನೌಕರರು, ಬೀದಿ ಬದಿ ವ್ಯಾಪಾರಸ್ಥರು, ಮನೆಕೆಲಸಗಾರರು, ಆಟೋ, ಟ್ಯಾಕ್ಸಿ, ಸಾರಿಗೆಯಲ್ಲಿ ಕಾರ್ಯನಿರ್ವಹಿಸುವ ನೌಕರರು, ಅಂಗನವಾಡಿ, ಬಿಸಿಯೂಟ, ಆಶಾ, ನೌಕರರು ಮತ್ತು ವಿದ್ಯಾರ್ಥಿ, ಯುವಜನ, ಮಹಿಳಾ, ರೈತ ಸಂಘಟನೆಗಳು ಜೊತೆಗೂಡಿ ಭಾರತದ ಸಂವಿಧಾನದ ಸಂಸ್ಥಾಪನ ದಿನವಾದ ನವೆಂಬರ್ 26 ರಂದು ಸಂವಿಧಾನಿಕ ಹಕ್ಕುಗಳಿಗಾಗಿ ಪ್ರತಿರೋಧವನ್ನು ವ್ಯಕ್ತ ಮಾಡಲಾಗುತ್ತಿದೆ ಎಂದು ಟಿಯುಸಿಸಿ ಮುಖಂಡರಾದ ಶಿವಶಂಕರ್ ತಿಳಿಸಿದ್ದಾರೆ. 

ಕೆಂದ್ರ ಕಾರ್ಮಿಕ ಸಂಘಗಳ ಜಂಟಿ ಸಮಿತಿಯು ಶ್ರೀ ನರೆಂದ್ರ ಮೋದಿ ನೇತ್ಋತ್ವದ ಬಿಜೆಪಿ ಸರ್ಕಾರದ ಕಾರ್ಮಿ-ವಿರೋಧಿ, ರೈತ-ವಿರೋಧಿ ಮತ್ತು ರಾಷ್ಟ್ರ ವಿರೋಧಿ ಎಂದು ಬಲವಾಗಿ ಖಂಡಿಸುತ್ತದೆ. ಕಾರ್ಮಿಕರ ಮತ್ತು ದುಡಿಯುವ ಜನರ ವಿವಿಧ ವಿಬಾಗಗಳು ತಮ್ಮ ಕಷ್ಟಾರ್ಜಿತ ಹಕ್ಕುಗಳು ಮತ್ತು ಸೌಲಭ್ಯಗಳ ಮೇಲೆ, ಅವರ ಜೀವನ ಮತ್ತು ಜೀವನ ಪರಿಸ್ಥಿತಿಗಳ ಮೇಲೆ ನಡೆಸುತ್ತಿರುವ ಈ ದಾಳಿಗಳ ವಿರುದ್ಧ ಇನ್ನೂ ಹೆಚ್ಚಿನ ಮಟ್ಟದಲ್ಲಿ ಹೋರಾಟಗಳನ್ನು ಸಂಘಟಿಸಿ ಮುನ್ನಡೆಸುವ ಅವಶ್ಯಕತೆ ಇದೆ ಎಂದು ಎಐಯುಟಿಯುಸಿ ಮುಖಂಡರಾದ ಕೆ.ವಿ.ಭಟ್ ಹೇಳಿದರು.

ದುಡಿಯುವ ಜನರು, ಕಾರ್ಮಿಕರು, ರೈತರು ಮತ್ತು ಕೃಷಿ ಕೂಲಿಕಾರರೆಲ್ಲರೂ ಒಗ್ಗಟ್ಟಾಗಿ ನವೆಂಬರ್ 26 ಅಖಿಲ ಭಾರತ ಮುಷ್ಕರವನ್ನು ಯಶಸ್ವಿಗೊಳಿಸಬೇಕೆಂದು ಕೇಂದ್ರ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿಯು ಕರೆಯನ್ನು ನೀಡಿದೆ.

ಈ ಪ್ರತಿಕಾ ಗೋಷ್ಠಿಯಲ್ಲಿ ಎಐಟಿಯುಸಿ ಯ ಮುಖಂಡರಾದ ವಿಜಯ ಭಾಸ್ಕರ್ , ಹೆಚ್‍ಎಮ್ ಎಸ್ ನ ನಾಗನಾಥ್, ಎಐಸಿಸಿಟಿಯು ಮುಖಂಡರಾದ ಅಪ್ಪಣ್ಣ, ಹೆಚ್ ಎಮ್ ಕೆಪಿ ಯ ಮುಖಂಡರಾದ ಎಲ್.ಕಾಳಪ್ಪ ಭಾಗವಹಿಸಿದ್ದರು.

Donate Janashakthi Media

Leave a Reply

Your email address will not be published. Required fields are marked *