ದುಡಿವ ಜನರ ಫೋಟೋಗಳುಳ್ಳ ಕ್ಯಾಲೆಂಡರ್ ಬಿಡುಗಡೆ

ಬೆಂಗಳೂರು, ಜ03 :ಹೊಸ ವರ್ಷಕ್ಕೆ ಕ್ರಿಯಾ ಪ್ರಕಾಶನವು 12 ಪುಟಗಳ ಬಹುವರ್ಣದ, ಆಕರ್ಷಕ ವಿನ್ಯಾಸದ 2021 ರ ಕ್ಯಾಲೆಂಡರ್ ಬಿಡುಗಡೆ ಮಾಡುತ್ತಿದೆ.

KPRS ರಾಜ್ಯ ಮುಖಂಡ ಹೆಚ್.ಆರ್. ನವೀನ್ ಕುಮಾರ್ ತೆಗೆದ ದುಡಿಯುವ ಜನರ ಫೋಟೋಗಳನ್ನ ಈ ಕ್ಯಾಲೆಂಡರ್ ನಲ್ಲಿ ಬಳಸಲಾಗಿದೆ. 60 ರೂಪಾಯಿ ಬೆಲೆಯ ಕ್ಯಾಲೆಂಡರ್ 30 ರೂಪಾಯಿಗೆ ಅಂದರೆ 50% ಭಾರೀ ರಿಯಾಯಿತಿ ದರದಲ್ಲಿ ಸಿಗಲಿದೆ.

ಜನವರಿ 10 ರವರೆಗೆ ಈ ಆಫರ್ ಲಭ್ಯವಿದ್ದು, ಸಂಪಂಗಿರಾಮನಗರ ದಲ್ಲಿರುವ ಕ್ರೀಯಾ ಪ್ರಕಾಶನ, ಅಥವಾ ಮಹಾಲಕ್ಷ್ಮಿ ಬಡಾವಣೆಯಲ್ಲಿರುವ ಕ್ರೀಯಾ ಮಾಧ್ಯಮದಲ್ಲಿ ದೊರೆಯಲಿವೆ ಎಂದು ಕ್ರೀಯಾ ಚಂದ್ರಶೇಖರ್ ತಿಳಿಸಿದ್ದಾರೆ. ಹೆಚ್ಚಿನ‌ ಮಾಹಿತಿಗಾಗಿ 9916595916, 9036082005 ಸಂಪರ್ಕಿಸಬಹುದಾಗಿದೆ.

Donate Janashakthi Media

Leave a Reply

Your email address will not be published. Required fields are marked *