ಬೆಂಗಳೂರು:ಕರ್ನಾಟಕಕ್ಕೆ ಬರ ಪರಿಹಾರವನ್ನುಕೇಂದ್ರ ಸರ್ಕಾರ ಬಿಡುಗಡೆ ಮಾಡಿದ್ದು, 3455 ಕೋಟಿ ರೂಪಾಯಿಗಳನ್ನು ಬರ ಪರಿಹಾರವಾಗಿ ನೀಡಿದೆ. ಬರಪರಿಹಾರ
ಹಣ ಬಿಡುಗಡೆ ಮಾಡುವ ಕುರಿತು ಭರವಸೆ ನೀಡಿದ ಕೆಲವೇ ದಿನಗಳಲ್ಲಿ ಪರಿಹಾರವನ್ನು ನೀಡಿದೆ. ರಾಜ್ಯ ಸರ್ಕಾರ ಬರ ಕುರಿತು ಪರಿಶೀಲನೆ ನಡೆಸಿ 18,174 ಕೋಟಿ ರೂಪಾಯಿ ಪರಿಹಾರ ನೀಡುವಂತೆ ಕೇಂದ್ರಕ್ಕೆ ಮನವಿ ಸಲ್ಲಿಕೆ ಮಾಡಿತ್ತು. ಈ ಕುರಿತಂತೆ ಪರಿಶೀಲನೆ ನಡೆಸಿದ್ದ ಬರ ಪರಿಹಾರ ತಂಡ ತನ್ನ ವರದಿಯನ್ನು ಸಲ್ಲಿಕೆ ಮಾಡಿತ್ತು. ಆದರೆ ಸದ್ಯ ಕೇಂದ್ರ ಸರ್ಕಾರ ಕರ್ನಾಟಕಕ್ಕೆ 3455 ಕೋಟಿ ರೂಪಾಯಿಗಳನ್ನು ಮಾತ್ರ ಬಿಡುಗಡೆ ಮಾಡಿದೆ. ಬರಪರಿಹಾರ
ಈ ಕುರಿತಂತೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಎಲ್ಲಾ ಭಾರತೀಯರ ಮಾನ ಪ್ರಾಣ ರಕ್ಷಣೆ ಮಾಡೋದು ಪ್ರಧಾನಿ ಜವಾಬ್ದಾರಿ. ಪ್ರಧಾನಿ ಸುಳ್ಳು ಹೇಳಿದ್ದು ಸರಿ ಅಲ್ಲ, ಮುಸ್ಲಿಮರನ್ನು ವಿಂಗಡನೆ ಮಾಡಿ ವೋಟಿಗಾಗಿ ಹೀಗೆ ಮಾಡೋದು ಸರಿಯಲ್ಲ. ಅಸಂವಿಧಾನಿಕ ಅಂತ ಹೇಳಿ ಕೋರ್ಟ್ ಗೆ ಬಿಜೆಪಿ ಅವರು ಹೋಗಿದ್ದರು. ಸುಪ್ರೀಂ ಕೋರ್ಟ್ ನಲ್ಲಿ ಚರ್ಚೆ ಆಗಿ ಇದನ್ನು ತಿರಸ್ಕಾರ ಮಾಡಿದೆ. ಮೋದಿ ಅವರು ಹತಾಶೆ ಇಂದ ಈ ರೀತಿ ಹೇಳ್ತಾ ಇದ್ದಾರೆ, ಪ್ರಧಾನಿ ಧೋರಣೆ ನಾನು ಖಂಡನ್ ಮಾಡ್ತೀನಿ. ಜನರಿಗೆ ತಪ್ಪು ಮಾಹಿತಿ ಕೊಡ್ತಿದ್ದಾರೆ ಅಂತ ಪಕ್ಷದಿಂದ ದೂರು ಕೊಡಲು ಹೇಳಿದ್ದೇನೆ ಎಂದರು.
ಇದನ್ನು ಓದಿ : ಮುಸ್ಲಿಮರ ಮೇಲಿನ ದ್ವೇಷ ಮೋದಿ ಮೊದಲ ಗ್ಯಾರಂಟಿ: ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ
ಅಲ್ಲದೇ, ಕೇಂದ್ರ ಸರ್ಕಾರ ಬರ ಪರಿಹಾರ ವಿಚಾರವಾಗಿ ಪ್ರತಿಕ್ರಿಯೆ ನೀಡಿ, ಕೇಂದ್ರ ಸರ್ಕಾರ ಬರ ಘೋಷಣೆ ಮಾಡಿದೆ. ನಾವು ಕೇಳಿದ್ದು 18,172 ಕೋಟಿ ರೂಪಾಯಿ, ರಾಜ್ಯದಲ್ಲಿ 35 ಸಾವಿರ ಕೋಟಿ ಬೆಳೆ ನಷ್ಟ ಆಗಿದೆ. 48 ಸಾವಿರ ಹೆಕ್ಟೇರ್ ಬೆಳೆ ನಷ್ಟ ಆಗಿದೆ. ಎನ್ಡಿಆರ್ ಎಫ್ ನರ್ಮ್ಸ್ ಪ್ರಕಾರ ಹಣ ಕೊಡಬೇಕು, ಆದರೆ ಕೇಂದ್ರ ಸರ್ಕಾರ ಹಣ ಬಿಡುಗಡೆ ಮಾಡಲಿಲ್ಲ.
ನಿರ್ಮಲಾ ಸೀತಾರಾಂ ಅಮಿತ್ ಷಾ ಹೇಳಿದರೂ ತಡ ಮಾಡಿ ಮನವಿ ಕೊಟ್ಟಿದ್ದಾರೆ ಅಂತ ಹೇಳಿದರು. ಚುನಾವಣೆ ಬಂದಿದೆ ಅಂತ ಬಿಡುಗಡೆ ಮಾಡಲು ಆಗಿಲ್ಲ ಅಂತ ಸುಳ್ಳು ಹೇಳಿದ್ದರು. ಆದರೆ ಈಗ 3000 ಕೋಟಿ ಹಣ ಬಿಡುಗಡೆ ಮಾಡಿದೆ. ಕೇಂದ್ರ ಸರ್ಕಾರ ಕಡಿಮೆ ಹಣ ಬಿಡುಗಡೆ ಮಾಡಿದ್ದಾರೆ. ಇದರ ಬಗ್ಗೆ ನಾನು ಅಧಿಕಾರಿಗಳ ಜೊತೆ ಮಾತನಾಡುತ್ತೇನೆ ಎಂದು ಸಿಎಂ ಸ್ಪಷ್ಟಪಡಿಸಿದ್ದಾರೆ.
ಮೋದಿ ಅವರು ಸುಳ್ಳನ್ನೇ ಮಾರುಕಟ್ಟೆ ಮಾಡಿದ್ದಾರೆ, ಮಂಗಳ ಸೂತ್ರ ಕರ್ನಾಟಕ ಘಟನೆ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ. ದೇಶದ ಪ್ರಧಾನಿ ಆಗಿ ಈ ರೀತಿ ಹೇಳಿಕೆ ಅವರಿಗೆ ಶೋಭೆ ತರಲ್ಲ, ಈಗಾಗಲೇ ಮೋದಿ ಅವರಿಗೆ ಆಯೋಗ ನೋಟಿಸ್ ಕೊಟ್ಟಿದೆ, ಚುನಾವಣಾ ಆಯೋಗ ಅದರ ಬಗೆ ಕ್ರಮ ಕೈಗೊಳ್ಳುತ್ತಾರೆ ಎಂದರು. ಬರಪರಿಹಾರ
ಇದನ್ನು ನೋಡಿ : ಚಿತ್ರದುರ್ಗ : ಒಳ ಏಟಿನ ಪೆಟ್ಟು ಬಿಜೆಪಿಗಾ? ಕಾಂಗ್ರೆಸ್‌ಗೆ Janashakthi Media