ಕುಗ್ರಾಮಗಳಿಗೆ ಲಸಿಕೆ, ಔಷಧ ತಲುಪಿಸಲು ಡ್ರೋನ್‌ ಬಳಕೆ-‘ಬಿಡ್‌‘ ಆಹ್ವಾನ

ನವದೆಹಲಿ: ಅತ್ಯಂತ ಕುಗ್ರಾಮವಾಗಿರುವ, ಶೀಘ್ರಗತಿಯಲ್ಲಿ ಲಸಿಕೆ ತಲುಪಲು ಸಾಧ್ಯವಾಗದಿರುವ ದುರ್ಗಮ ಪ್ರದೇಶಗಳಿರುವ ದೇಶದ ಪ್ರತಿ ಹಳ್ಳಿಗೂ ಕೋವಿಡ್‌ ಲಸಿಕೆ ಮತ್ತು ಔಷಧವನ್ನು ತಲುಪಿಸಲು ಡ್ರೋನ್‌ ಮೂಲಕ ವೈದ್ಯಕೀಯ ಪರಿಕರಗಳನ್ನು ತಲುಪಿಸುವುದಕ್ಕಾಗಿ ಸರಕಾರ ಆಸಕ್ತರಿಂದ ಅರ್ಜಿಯನ್ನು ಅಹ್ವಾನಿಸಿದೆ.

‘ಬಿಡ್‌‘ ದಾಖಲೆಯಲ್ಲಿ ತಿಳಿಸಿರುವಂತೆ ‘ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ(ಐಸಿಎಂಆರ್), ಕಾನ್ಪುರದ ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ–ಕಾನ್ಫುರ್‌) ಸಹಯೋಗದೊಂದಿಗೆ ‘ಮಾನವ ರಹಿತ ವೈಮಾನಿಕ ವಾಹನ(ಯುಎವಿ) ಬಳಸಿಕೊಂಡು, ಯಶಸ್ವಿಯಾಗಿ ಔಷಧ – ಲಸಿಕೆಗಳನ್ನು ತಲುಪಿಸಬಹುದಾಗಿದೆ. ಈ ವಿಷಯಕ್ಕೆ ಸಂಬಂಧಿಸಿದಂತೆ  ನೀತಿ ನಿಯಮಗಳನ್ನು (ಸ್ಟ್ಯಾಂಡರ್ಡ್‌ ಪ್ರೊಟೊಕಾಲ್‌‌) ಅಭಿವೃದ್ಧಿಪಡಿಸಿದೆ.

ಇದನ್ನು ಓದಿ: ಖಾಸಗಿ ಆಸ್ಪತ್ರೆಗಳು ಖರೀದಿಸಿದ್ದು 1.29 ಕೋಟಿ ಲಸಿಕೆ-ಬಳಸಿದ್ದು 22 ಲಕ್ಷ ಮಾತ್ರ

ಭಾರತೀಯ ಏಜೆನ್ಸಿಗಳಿಗೆ ಕೇಂದ್ರ ಸಾರ್ವಜನಿಕ ಸಂಗ್ರಹಣೆ ಪೋರ್ಟಲ್ ಮೂಲಕ ಆಸಕ್ತರು ಅರ್ಜಿ ಸಲ್ಲಿಸಲು ಕೋರಲಾಗಿದೆ. ಟೆಂಡರ್ ಮಾನದಂಡಗಳ ಪ್ರಕಾರ, ಐಸಿಎಂಆರ್ ಯುಎವಿ ನಿರ್ದೇಶನದಂತೆ ಕಾರ್ಯಚರಣೆ ಮಾಡಲು ಸಾಧ್ಯವಿದೆ.

ಐಸಿಎಂಆರ್‌ ಪರವಾಗಿ ಎಚ್‌ಎಲ್‌ಎಲ್‌ ಇನ್ಫ್ರಾ ಟೆಕ್ ಸರ್ವೀಸ್‌ ಲಿ(ಪ್ರೊಕ್ಯೂರ್‌ಮೆಂಟ್ ಸಪೋರ್ಟ್‌ ಏಜೆನ್ಸಿ) ಕಂಪನಿ, ಕೇಂದ್ರ ಸಾರ್ವಜನಿಕ ಸಂಗ್ರಹ ಪೋರ್ಟೆಲ್‌ ಮೂಲಕ ಈ ಅರ್ಜಿಗಳನ್ನು ಆಹ್ವಾನಿಸಿದೆ. ಯುಎವಿ ಮೂಲಕ ವೈದ್ಯಕೀಯ ಪರಿಕರಗಳನ್ನು ಪೂರೈಸುವಲ್ಲಿ (ಲಸಿಕೆ ಮತ್ತು ಔಷಧಗಳು) ಅನುಭವವಿರುವ ಕಂಪನಿಗಳು ಅರ್ಜಿ ಸಲ್ಲಿಸಬಹುದು ಎಂದು ಕಂಪನಿ ತಿಳಿಸಿದೆ.

ಡ್ರೋನ್‌ಗಳು ಕನಿಷ್ಟ 35 ಕಿ.ಮೀ ದೂರದಲ್ಲಿರುವ ವೈಮಾನಿಕ ದೂರವನ್ನು ಕ್ರಮಿಸಲು ಮತ್ತು ಕನಿಷ್ಠ 4 ಕೆಜಿಯಷ್ಟು ಸಾಮಗ್ರಿಯನ್ನು ಸಾಗಿಸಲು ಸಾಧ್ಯವಾಗಬೇಕು.  ಸಾಮಗ್ರಿಯನ್ನು ತಲುಪಿಸಿದ ನಂತರ ಮರಳಿ ವಾಪಸ್ಸಾಗುವ ಸಾಮರ್ಥ್ಯವನ್ನು ಹೊಂದಿರಬೇಕಾಗಿದೆ.

Donate Janashakthi Media

Leave a Reply

Your email address will not be published. Required fields are marked *