ಪ್ರಯಾಣಿಕರನ್ನು ಮಧ್ಯ ದಾರಿಯಲ್ಲೇ ಇಳಿಸಿದ ನಿರ್ವಾಹಕ

ಡಗೇರಾ: ಮಾರ್ಗ ಮಧ್ಯದಲ್ಲಿ ಇಳಿದ ವೃದ್ಧ ದಂಪತಿ ಎರಡೂವರೆ ಕಿ.ಮೀ. ನಡೆದುಕೊಂಡು ಹೋಗಿ ಕೃಷ್ಣಾ ನದಿ ತೀರದ ಸಂಗಮ ಗ್ರಾಮ ತಲುಪಿದ್ದಾರೆ. ವಡಗೇರಾ ತಾಲ್ಲೂಕಿನ ಸಂಗಮ ಗ್ರಾಮಕ್ಕೆ ತೆರಳುತ್ತಿದ್ದ ಬಸ್ ಹತ್ತಿದ್ದ ವೃದ್ಧ ದಂಪತಿಯನ್ನು ಕೆಕೆಆರ್‌ಟಿಸಿಯ ಬಸ್‌ ನಿರ್ವಾಹಕ ದಾರಿಯ ಮಧ್ಯದಲ್ಲಿ ಇಳಿಸಿದ ಆರೋಪ ಕೇಳಿಬಂದಿದೆ.

ಬಸ್ ನಿರ್ವಾಹಕನ ನಡೆಗೆ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿದೆ. ವಯೋಸಹಜ ಮೊಳಕಾಲು ನೋವು ಇರುವ ದಂಪತಿ ಕೈಯಲ್ಲಿ ಬ್ಯಾಗ್‌ ಹಿಡಿದು ನಿಧಾನವಾಗಿ ನಡೆದುಕೊಂಡು ಹೋಗುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.

ಯಾದಗಿರಿ- ಸಂಗಮ ನಾಮಫಲಕದ ಬಸ್ (ಕೆಎ 33 ಎಫ್ 365) ನೋಡಿದ ದಂಪತಿ, ಹತ್ತುವ ಮೊದಲು ಸಂಗಮಕ್ಕೆ ಹೋಗುವ ಬಗ್ಗೆ ನಿರ್ವಾಹಕನಿಗೆ ಕೇಳಿ ಖಚಿತಪಡಿಸಿಕೊಂಡ ಬಳಿಕ ಬಸ್‌ ಹತ್ತಿದರು. ಫೆಬ್ರುವರಿ 9ರಂದು ಕಲಬುರಗಿ ಮೂಲದ ಸಂಗಮೇಶ ಹಾಗೂ ಅನ್ನಪೂರ್ಣ ವೃದ್ಧ ದಂಪತಿ ಯಾದಗಿರಿ ನಗರದ ಹೊಸ ಬಸ್ ನಿಲ್ದಾಣದಲ್ಲಿ ಕೃಷ್ಣಾ ನದಿ ತೀರ ಗ್ರಾಮ ಸಂಗಮಗೆ ತೆರಳು ಕಾದು ಕುಳುತ್ತಿದ್ದರು.

ಇದನ್ನೂ ಓದಿ : ವಿಜಯಪುರ | ಸಾಹಿತ್ಯ ಸೇವೆಯಲ್ಲಿ ವಿಶಿಷ್ಟ ಹೆಜ್ಜೆ ಗುರುತು ಮೂಡಿಸಿದ ಸಿಂಪಿ ಲಿಂಗಣ್ಣ – ಮಲ್ಲಿಕಾರ್ಜುನ ಮೇತ್ರಿ

ಬಸ್ ನಿರ್ವಾಹಕ ನೇರವಾಗಿ ಸಂಗಮ ಗ್ರಾಮಕ್ಕೆ ಟಿಕೆಟ್ ನೀಡುವ ಬದಲು ಅದಕ್ಕೂ ಮುಂಚಿತವಾಗಿ ಬರುವ ಗೂಂಡ್ಲೂರ ಗ್ರಾಮದ ಟಿಕೆಟ್ ನೀಡಿದ್ದರು. ಮಾರ್ಗ ಮಧ್ಯದಲ್ಲಿ ಏಳೆಂಟು ಜನರು ಸಂಗಮಕ್ಕೆ ಹೋಗುವವರು ಹತ್ತಿದರೆ ನಮ್ಮಗೆ ಗುಂಡ್ಲೂರ ಗ್ರಾಮದಿಂದ ಸಂಗಮವರೆಗೆ ಮತ್ತೊಂದು ಟಿಕೆಟ್ ಕೊಡುವ ಉದ್ದೇಶ ಇರಿಸಿಕೊಂಡಿದ್ದರು. ಆದರೆ, ಬಸ್‌ನಲ್ಲಿ ನಾವು ಇಬ್ಬರೇ ಇದ್ದ ಕಾರಣ ಗುಂಡ್ಲೂರಿನಲ್ಲಿ ನಮ್ಮನ್ನು ಇಳಿಸಿದ್ದಾರೆ. ಸಹ ಪ್ರಯಾಣಿಕರ ಮನವಿಗೂ ನಿರ್ವಾಹಕ ಕಿವಿಗೊಡಲಿಲ್ಲ’ ಎಂದು ವೃದ್ಧ ದಂಪತಿ ದೂರಿದ್ದಾರೆ.

ನಾಲ್ಕೂದು ಪ್ರಯಾಣಿಕರು ಇದ್ದರೆ ಮಾತ್ರ ಬಸ್‌ ತೆಗೆದುಕೊಂಡು ಹೋಗುತ್ತೇವೆ’ ಎಂದು ನಿರ್ವಾಹಕ ಹೇಳಿದ. ಗುಂಡ್ಲೂರಿನಲ್ಲಿ ಬಸ್‌ನಿಂದ ಇಳಿಯಲು ನಿರ್ವಾಹಕ ಹೇಳುತ್ತಿದ್ದಂತೆ ಪ್ರಶ್ನಿಸಿದೆವು. ‘ನಿಮ್ಮಬ್ಬರಿಗಾಗಿ ಸಂಗಮವರೆಗೆ ಬಸ್‌ ತೆಗೆದುಕೊಂಡು ಹೋಗಲು ಆಗುವುದಿಲ್ಲ. ನನಗು, ನನ್ನ ಪತಿಗೆ ಮೋಳ ಕಾಲು ನೋವಿದೆ, ನಡೆಯಲು ಆಗುವುದಿಲ್ಲ ಎಂದರೂ ಕೇಳದೆ ಬಸ್‌ನಿಂದ ಇಳಿಸಿದರು’ ಎಂದು ವೃದ್ಧ ಮಹಿಳೆ ಅನ್ನಪೂರ್ಣ ಅಳಲು ತೋಡಿಕೊಂಡಿದ್ದಾರೆ.

ಬಸ್‌ನಲ್ಲಿ ಒಬ್ಬ ಪ್ರಯಾಣಿಕ ಇದ್ದರೂ ಅವರಿಗೆ ಟಿಕೆಟ್ ಕೊಟ್ಟು ನಿಗದಿತ ಸ್ಥಳಕ್ಕೆ ಕರೆದೊಯ್ಯುವುದು ಸಾರಿಗೆ ನಿಯಮವಿದೆ. ಬಸ್‌ ನಿರ್ವಾಹಕ ಸಾರಿಗೆ ನಿಯಮವನ್ನು ಗಾಳಿಗೆ ತೂರಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ’ ಎನ್ನುತ್ತಾರೆ ಸಾರ್ವಜನಿಕರು.

ಕೆಲಸದ ನಿಮಿತ್ತ ಬೆಂಗಳೂರಿಗೆ ಬಂದಿದ್ದೇನೆ. ಸೋಮವಾರ ಕಚೇರಿಗೆ ಹೋಗಿ ಸಂಪೂರ್ಣ ಮಾಹಿತಿಯನ್ನು ಪಡೆದು ವಿಚಾರಣೆ ನಡೆಸಿ ತಪ್ಪಿತಸ್ಥ ಸಿಬ್ಬಂದಿ ಮೇಲೆ ಕ್ರಮ ಕೈಗೊಳ್ಳಲಾಗುವುದು – ಮಂಜುನಾಥ್ ರೆಡ್ಡಿ, ಚೆನ್ನೂರು ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜ್ಯ ರೈತ ಸಂಘದವೃದ್ಧ ದಂಪತಿಗಳನ್ನು ಅವಮಾನಿಸಿ ಬಸ್ಸಿನಿಂದ ಇಳಿಸಿದ ತಪ್ಪಿತಸ್ಥ ಸಾರಿಗೆ ಇಲಾಖೆಯ ಚಾಲಕ ನಿರ್ವಾಹಕರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಂಡು ಸುಕ್ಷೇತ್ರ ಸಂಗಮಕ್ಕೆ ಪ್ರತಿನಿತ್ಯ ಬಸ್ ಸೌಲಭ್ಯ ಒದಗಿಸಬೇಕು

ಇದನ್ನೂ ನೋಡಿ : ಪಿಚ್ಚರ್ ಪಯಣ – 166 | ಸಿನೆಮಾ: ‘ನಮ್ಮ ಸಾಲಿ, ನಿರ್ದೇಶನ – ಅನಿಲ್ ರೇವೂರ ವಿಶ್ಲೇಷಣೆ : ಮೀನಾಕ್ಷಿ ಬಾಳಿ

Donate Janashakthi Media

Leave a Reply

Your email address will not be published. Required fields are marked *