ಕಾರವಾರ: ತಿನ್ನೈಘಾಟ್ ನಲ್ಲಿ ಸರಣಿ ಅಪಘಾತ ಸಂಭವಿಸಿದ್ದು, ಜೊಯಿಡಾ ತಾಲೂಕಿನ ರಾಮನಗರ ಗೋವಾ ಸಂಪರ್ಕಿಸುವ ಹೆದ್ದಾರಿ ಪಿಕ್ ಅಪ್ ವಾಹನದ ಚಾಲಕ ಮೃತಪಟ್ಟಿದ್ದಾನೆ. ಕಾರವಾರ
ಇದನ್ನೂ ಓದಿ : ಹುಣಸೂರು |ಅತಿಥಿ ಉಪನ್ಯಾಸಕರ ನೇಮಕಾತಿ ಹಾಗೂ ಪರೀಕ್ಷಾ ಶುಲ್ಕ ಪಾವತಿ ದಿನಾಂಕ ಮತ್ತು ಪರೀಕ್ಷೆ ಮೂಂದುಡುವಂತೆ ಎಸ್ ಫ್ ಐ ಪ್ರತಿಭಟನೆ
ವಿಆರ್ ಎಲ್ ಬಸ್ ಒಂದು ಟ್ರಕ್ ಓವರ್ ಟೇಕ್ ಮಾಡಲು ಹೋಗಿ ಎದುರಿಗೆ ಬರುತ್ತಿದ್ದ ಪಿಕ್ ಅಪ್ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಈ ಅಪಘಾತದಲ್ಲಿ ಪಿಕ್ ವಾಹನದ ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾರೆಂದು ರಾಮನಗರ ಪೊಲೀಸರು ತಿಳಿಸಿದ್ದಾರೆ. ಪಿಕ್ ವಾಹನದ ಹಿಂದೆ ಬರುತ್ತಿದ್ದ ಲಾರಿ, ಬಸ್ ಹಾಗೂ ಬುಲೆಟ್ ಸಾಲಾಗಿ ಪಿಕ್ ಅಪ್ ವಾಹನಕ್ಕೆ ಡಿಕ್ಕಿಯಾಗಿವೆ. ಪರಿಣಾಮ ಬಸ್ ನಲ್ಲಿದ್ದ ಪ್ರಯಾಣಿಕರು ಗಾಯಗೊಂಡಿದ್ದಾರೆ. ಬೈಕ್ ಸವಾರ ಸಹ ಗಾಯಗೊಂಡ ಘಟನೆ ನಡೆದಿದೆ. ಗಾಯಾಳುಗಳನ್ನು ಖಾನಾಪುರ, ಬೆಳಗಾವಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಪೊಲೀಸರುಪ್ರಕರಣ ದಾಖಲಿಸಿದ್ದಾರೆ. ಅಪಘಾತ ವಾದ ಸ್ಥಳದಿಂದ ವಾಹನ ಸರಿಸಿ, ಇತರೆ ವಾಹನಗಳ ಓಡಾಟಕ್ಕೆ ದಾರಿ ಸುಗಮ ಮಾಡಿಕೊಟ್ಟಿದ್ದಾರೆ.
ಇದನ್ನೂ ನೋಡಿ : ನ್ಯಾಯ ನಮ್ಮೊಂದಿಗಿರುವಾಗ ಹೆದರಬೇಕಾಗಿಲ್ಲ – ಜಾಣಗೆರೆ ವೆಂಕಟರಾಮಯ್ಯ Janashakthi Media
