ಜಿಬಿಎ ವ್ಯಾಪ್ತಿಯ 5 ನಗರ ಪಾಲಿಕೆಗಳ 369 ವಾರ್ಡ್‌ಗಳಿಗೆ ಮೀಸಲಾತಿ ಕರಡು ಅಧಿಸೂಚನೆ ಪ್ರಕಟ

ಬೆಂಗಳೂರು: ರಾಜ್ಯ ಸರ್ಕಾರವು ಮೀಸಲಾತಿ ಕರಡು ಅಧಿಸೂಚನೆಯನ್ನು ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯ ಐದು ನಗರ ಪಾಲಿಕೆಗಳ 369 ವಾರ್ಡ್‌ಗಳಿಗೆ ಪ್ರಕಟಿಸಿದೆ. ಜಿಬಿಎ ವ್ಯಾಪ್ತಿಯ 20 ಕೆರೆಗಳಲ್ಲಿ ಪರಿಸರಸ್ನೇಹಿ ಬೋಟಿಂಗ್‌: ಮಹೇಶ್ವರ್‌ ರಾವ್‌ಬೆಂಗಳೂರು ಕೇಂದ್ರ ನಗರ ಪಾಲಿಕೆಯ 63, ಬೆಂಗಳೂರು ಉತ್ತರ ನಗರ ಪಾಲಿಕೆಯ 72, ಬೆಂಗಳೂರು ದಕ್ಷಿಣ ನಗರ ಪಾಲಿಕೆಯ 72, ಬೆಂಗಳೂರು ಪೂ ಪ್ರಕಟಿಸಿದ್ದಾರೆ.

ಬೆಂಗಳೂರು ಕೇಂದ್ರ ನಗರ ಪಾಲಿಕೆಯಲ್ಲಿ ಅನುಸೂಚಿತ ಜಾತಿಗೆ 11, ಅನುಸೂಚಿತ ಪಂಗಡಕ್ಕೆ 1, ಹಿಂದುಳಿದ ‘ಎ’ ವರ್ಗಕ್ಕೆ 15, ಹಿಂದುಳಿದ ‘ಬಿ’ ವರ್ಗಕ್ಕೆ 4 ಹಾಗೂ ಸಾಮಾನ್ಯ ವರ್ಗಕ್ಕೆ 32 ವಾರ್ಡುಗಳನ್ನು ಮೀಸಲಿರಿಸಲಾಗಿದೆ.

ಬೆಂಗಳೂರು ಉತ್ತರ ನಗರ ಪಾಲಿಕೆಯಲ್ಲಿ ಅನುಸೂಚಿತ ಜಾತಿಗೆ 9, ಅನುಸೂಚಿತ ಪಂಗಡಕ್ಕೆ 2, ಹಿಂದುಳಿದ ‘ಎ’ ವರ್ಗಕ್ಕೆ 19, ಹಿಂದುಳಿದ ‘ಬಿ’ ವರ್ಗಕ್ಕೆ 5 ಹಾಗೂ ಸಾಮಾನ್ಯ ವರ್ಗಕ್ಕೆ 37 ವಾರ್ಡುಗಳನ್ನು ಮೀಸಲಿರಿಸಲಾಗಿದೆ.

ಇದನ್ನೂ ಓದಿ: ಫೆಬ್ರುವರಿ 1, ಭಾನುವಾರವೇ ಕೇಂದ್ರ ಬಜೆಟ್‌ ಮಂಡನೆ ನಿಗದಿ

ಬೆಂಗಳೂರು ದಕ್ಷಿಣ ನಗರ ಪಾಲಿಕೆಯಲ್ಲಿ ಅನುಸೂಚಿತ ಜಾತಿಗೆ 7, ಅನುಸೂಚಿತ ಪಂಗಡಕ್ಕೆ 3, ಹಿಂದುಳಿದ ‘ಎ’ ವರ್ಗಕ್ಕೆ 19, ಹಿಂದುಳಿದ ‘ಬಿ’ ವರ್ಗಕ್ಕೆ 5 ಹಾಗೂ ಸಾಮಾನ್ಯ ವರ್ಗಕ್ಕೆ 40 ವಾರ್ಡುಗಳನ್ನು ಮೀಸಲಿರಿಸಲಾಗಿದೆ.

ಬೆಂಗಳೂರು ಪೂರ್ವ ನಗರ ಪಾಲಿಕೆಯಲ್ಲಿ ಅನುಸೂಚಿತ ಜಾತಿಗೆ 7, ಅನುಸೂಚಿತ ಪಂಗಡಕ್ಕೆ 1, ಹಿಂದುಳಿದ ‘ಎ’ ವರ್ಗಕ್ಕೆ 14, ಹಿಂದುಳಿದ ‘ಬಿ’ ವರ್ಗಕ್ಕೆ 3 ಹಾಗೂ ಸಾಮಾನ್ಯ ವರ್ಗಕ್ಕೆ 25 ವಾರ್ಡುಗಳನ್ನು ಮೀಸಲಿರಿಸಲಾಗಿದೆ.

ಬೆಂಗಳೂರು ಪಶ್ಚಿಮ ನಗರ ಪಾಲಿಕೆಯಲ್ಲಿ ಅನುಸೂಚಿತ ಜಾತಿಗೆ 9, ಅನುಸೂಚಿತ ಪಂಗಡಕ್ಕೆ 2, ಹಿಂದುಳಿದ ‘ಎ’ ವರ್ಗಕ್ಕೆ 30, ಹಿಂದುಳಿದ ‘ಬಿ’ ವರ್ಗಕ್ಕೆ 7 ಹಾಗೂ ಸಾಮಾನ್ಯ ವರ್ಗಕ್ಕೆ 64 ವಾರ್ಡುಗಳನ್ನು ಮೀಸಲಿರಿಸಲಾಗಿದೆ.

ಜನವರಿ 23, 2006ರ ಒಳಗಾಗಿ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಲಾಗಿದೆ.

ಇದನ್ನೂ ನೋಡಿ: ಕೋಗಿಲು ಪ್ರಕರಣ : ಬಡವರ ಕೂಗು ಕೇಳದಾಯಿತೆ ಸರಕಾರ Janashakthi Media

Donate Janashakthi Media

Leave a Reply

Your email address will not be published. Required fields are marked *