“ಕೃಷಿ ಮಾರುಕಟ್ಟೆ ಕುರಿತ ಕರಡು ರಾಷ್ಟ್ರೀಯ ನೀತಿ ಚೌಕಟ್ಟು”: ಕರಾಳ ಕೃಷಿ ಕಾಯ್ದೆಗಳ ಅಂಶಗಳನ್ನು ಮರಳಿ ತರುವ ಪ್ರಯತ್ನ

ಸಿಪಿಐ(ಎಂ) ಕೇಂದ್ರ ಸಮಿತಿ ಖಂಡನೆ: ರೈತರ ಹೋರಾಟಕ್ಕೆ ಬೆಂಬಲ

ನವದೆಹಲಿ: ನರೇಂದ್ರ ಮೋದಿ ನೇತೃತ್ವದ ಸರಕಾರ ಈಗ ಕೃಷಿ ಮಾರುಕಟ್ಟೆ ಕುರಿತ ಕರಡು ರಾಷ್ಟ್ರೀಯ ನೀತಿ ಚೌಕಟ್ಟು ಎಂಬುದನ್ನು ಪ್ರಕಟಿಸಿದೆ. ಇದು ರೈತರ ಆಂದೋಲನದಿಂದಾಗಿ ಹಿಂತೆಗೆದುಕೊಳ್ಳಲಾದ ಮೂರು ಕೃಷಿ ಕಾನೂನುಗಳ ಅಂಶಗಳನ್ನು ಮರಳಿ ತರುವ ಪ್ರಯತ್ನವಾಗಿದೆ ಎಂದು ಸಿಪಿಐ(ಎಂ) ಕೇಂದ್ರ ಸಮಿತಿ ಖಂಡಿಸಿದೆ. ಕೃಷಿ

ಈ ಕರಡು ಖಾಸಗಿ ಸಗಟು ಮಾರುಕಟ್ಟೆಗಳ ಸ್ಥಾಪನೆ, ಕಾರ್ಪೊರೇಟ್ ಸಂಸ್ಕರಣಾಕಾರರು ಮತ್ತು ರಫ್ತುದಾರರಿಂದ ನೇರವಾಗಿ ಗದ್ದೆಗಳಿಂದಲೇ ಖರೀದಿಗಳು, ಸಾಂಪ್ರದಾಯಿಕ ಮಾರುಕಟ್ಟೆ ಯಾರ್ಡ್‌ಗಳನ್ನು ಕಾರ್ಪೊರೇಟ್ ನಿಯಂತ್ರಣದೊಂದಿಗೆ ಬದಲಾಯಿಸುವುದು, ಗೋದಾಮು ಮತ್ತು ಅಗೇವುಗಳು ಮತ್ತು ಏಕೀಕೃತ ರಾಜ್ಯವ್ಯಾಪಿ ಮಾರುಕಟ್ಟೆ ಶುಲ್ಕ ಮತ್ತು ವ್ಯಾಪಾರ ಪರವಾನಗಿ ವ್ಯವಸ್ಥೆಯನ್ನು ಪರಿಚಯಿಸುವ ಬಗ್ಗೆ ಪ್ರಸ್ತಾಪಿಸುತ್ತದೆ. ದೊಡ್ಡ ಕಾರ್ಪೊರೇಟ್‌ಗಳು ಎಪಿಎಂಸಿ ಮಾರುಕಟ್ಟೆ ಯಾರ್ಡ್‌ಗಳನ್ನುಬದಿಗೊತ್ತಿ ರೈತರಿಂದ ನೇರವಾಗಿ ಉತ್ಪನ್ನಗಳನ್ನು ಖರೀದಿಸಬಹುದು ಎಂದು ಪ್ರಸ್ತಾಪಿಸುತ್ತದೆ. ಕೃಷಿ

ಜನವರಿ 17-19, 2025 ರಂದು ಕೋಲ್ಕತ್ತಾದಲ್ಲಿ ತನ್ನ ಸಭೆ ಸೇರಿದ ಸಿಪಿಐ(ಎಂ) ಕೇಂದ್ರ ಸಮಿತಿ ಈ ಕರಡು ನೀತಿಯ ವಿರುದ್ಧ ಕಿಸಾನ್ ಸಭಾ ಮತ್ತು ಸಂಯುಕ್ತ ಕಿಸಾನ್ ಮೋರ್ಚಾ ಪ್ರಾರಂಭಿಸಿರುವ ಆಂದೋಲನಕ್ಕೆ ತನ್ನ ಸಂಪೂರ್ಣ ಬೆಂಬಲವನ್ನು ನೀಡಿದೆ. ಈ ನೀತಿಯ ವಿರುದ್ಧ ಪ್ರತಿಭಟನೆಗೆ ಜನರನ್ನು ಸಜ್ಜುಗೊಳಿಸಲು ಅದು ತನ್ನ ಎಲ್ಲಾ ಪಕ್ಷದ ಘಟಕಗಳಿಗೆ ಕರೆ ನೀಡಿದೆ. ಕೃಷಿ

ಇದನ್ನೂ ಓದಿ: ವಿಜಯಪುರ| ಮಾಲೀಕನಿಂದ ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ

ಸಿಪಿಐ(ಎಂ) ಕೇಂದ್ರ ಸಮಿತಿಯ ಈ ಸಭೆಯು ದೇಶ-ವಿದೇಶಗಳ ಇತ್ತೀಚಿನ ಬೆಳವಣಿಗೆಗಳ ಬಗೆ ಚರ್ಚೆ-ವಿಮರ್ಶೆಗಳ ನಂತರ ಪ್ರಕಟಿಸಿರುವ ಹೇಳಿಕೆಯಲ್ಲಿ ಈ ಕರೆಯನ್ನು ನೀಡಿದೆ. ಕೃಷಿ

ಕೇಂದ್ರ ಸಮಿತಿಯು ಗಾಜಾದಲ್ಲಿ ಕದನ ವಿರಾಮ, ಏಕಕಾಲಿಕ ಚುನಾವಣೆಗಳಿಗೆ ಮಸೂದೆಗಳು, ಮಸೀದಿ-ದೇವಾಲಯ ವಿವಾದಗಳು, ಯುಜಿಸಿ ಕರಡು ನಿಬಂಧನೆಗಳು ಮತ್ತು ಚುನಾವಣಾ ಆಯೋಗ ಪ್ರಕಟಿಸಿರುವ ನಿಯಮಗಳಲ್ಲಿ ಬದಲಾಣೆಗಳನ್ನೂ ಚರ್ಚಿಸಿತು. ಈ ಬಗ್ಗೆ ಅದರ ಹೇಳಿಕೆಯ ಇತರ ಅಂಶಗಳನ್ನು ಈ ಮುಂದೆ ಕೊಡಲಾಗಿದೆ: ಕೃಷಿ

“ಗಾಜಾದಲ್ಲಿ ಕದನ ವಿರಾಮ-ಶಾಂತಿ ಸ್ಥಾಪನೆಯಾಗುವುದನ್ನು ಖಚಿತಗೊಳಿಸಬೇಕು”

ಜನವರಿ 19 ರಿಂದ ಜಾರಿಗೆ ಬರುತ್ತಿರುವ ಇಸ್ರೇಲ್ ಮತ್ತು ಹಮಾಸ್ ನಡುವಿನ ಕದನ ವಿರಾಮ ಒಪ್ಪಂದವನ್ನು ಕೇಂದ್ರ ಸಮಿತಿಯು ಸ್ವಾಗತಿಸಿತು. ಹದಿನೈದು ತಿಂಗಳಿಗೂ ಹೆಚ್ಚು ಕಾಲ, ಗಾಜಾದ ಪ್ಯಾಲೆಸ್ಟೀನಿಯನ್ ಜನರ ವಿರುದ್ಧ ಇಸ್ರೇಲ್ ನಡೆಸಿದ ನರಮೇಧದ ಯುದ್ಧವು 46,000 ಕ್ಕೂ ಹೆಚ್ಚು ಜನರ ಸಾವಿಗೆ ಕಾರಣವಾಗಿದೆ ಮತ್ತು 1,20,000 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಕೃಷಿ

ಆರು ವಾರಗಳ ಕಾಲ ನಡೆದ ಮೊದಲ ಹಂತದ ಕದನ ವಿರಾಮದ ನಂತರ, ಶಾಂತಿ ಮತ್ತು ರಾಜಕೀಯ ಇತ್ಯರ್ಥವನ್ನು ಪುನಃಸ್ಥಾಪಿಸುವವರೆಗೆ ಕದನ ವಿರಾಮವನ್ನು ವಿಸ್ತರಿಸುವುದನ್ನು ಖಚಿತಗೊಳಿಸುವುದು ಈಗ ಮುಖ್ಯವಾಗಿದೆ ಎಂದಿರುವ ಸಿಪಿಐ(ಎಂ) ಕೇಂದ್ರ ಸಮಿತಿ ಶಾಂತಿ ಸ್ಥಾಪನೆಯಾಗುವುದನ್ನು ಖಚಿತಗೊಳಿಸಲು ಮತ್ತು ಒಂದು ಸ್ವತಂತ್ರ ಪ್ಯಾಲೆಸ್ಟೀನಿಯನ್ ಪ್ರಭುತ್ವದ ರಚನೆಗೆ ಕ್ರಮಗಳನ್ನು ತೆಗೆದುಕೊಳ್ಳುವುದನ್ನು ಖಚಿತಗೊಳಿಸಲು ಭಾರತ ಸರ್ಕಾರ ರಾಜತಾಂತ್ರಿಕವಾಗಿ ಕೆಲಸ ಮಾಡಬೇಕು ಎಂದು ಹೇಳಿದೆ. ಕೃಷಿ

“ಏಕಕಾಲಿಕ ಚುನಾವಣೆಗಳಿಗೆ ಮಸೂದೆಗಳು- ಪ್ರಜಾಪ್ರಭುತ್ವ ಮತ್ತು ಒಕ್ಕೂಟ ವ್ಯವಸ್ಥೆಯನ್ನು ಗೌರವಿಸುವ ಎಲ್ಲರೂ ವಿರೋಧಿಸಬೇಕು”

ಲೋಕಸಭೆ ಮತ್ತು ರಾಜ್ಯ ಶಾಸಕಾಂಗಗಳಿಗೆ ಏಕಕಾಲದಲ್ಲಿ ಚುನಾವಣೆಗಳನ್ನು ನಡೆಸಲು ಮೋದಿ ಸರ್ಕಾರ ಸಂಸತ್ತಿನಲ್ಲಿ ಪರಿಚಯಿಸಿದ ಎರಡು ಶಾಸನಗಳನ್ನು ಕೇಂದ್ರ ಸಮಿತಿಯು ಗಮನಿಸಿತು. ಮೊದಲನೆಯದು ಸಂವಿಧಾನ (129ನೇ ತಿದ್ದುಪಡಿ) ಮಸೂದೆ, ಇದು ಅಸ್ತಿತ್ವದಲ್ಲಿರುವ ಮೂರು ಅನುಚ್ಛೇದಗಳಿಗೆ ತಿದ್ದುಪಡಿಗಳನ್ನು ಮಾಡುವ ಮತ್ತು ಸಂವಿಧಾನದಲ್ಲಿ ಹೊಸ ಅನುಚ್ಛೇದವನ್ನುಸೇರಿಸುವ ಪ್ರಸ್ತಾಪವನ್ನು ಮಾಡುತ್ತದೆ. ಕೃಷಿ

ಒಂದು ತಿದ್ದುಪಡಿಯಲ್ಲಿ ಲೋಕಸಭೆಯು ಅದರ ಪೂರ್ಣ ಅವಧಿ ಮುಗಿಯುವ ಮೊದಲು ವಿಸರ್ಜಿಸಲ್ಪಟ್ಟರೆ, ಮುಂದಿನ ಲೋಕಸಭೆಗೆ ಮುಗಿಯದ ಅವಧಿಗೆ ಮಾತ್ರ ಚುನಾವಣೆಗಳನ್ನು ನಡೆಸಲಾಗುತ್ತದೆ ಎಂದು ಹೇಳುತ್ತದೆ. ಇದರರ್ಥ ಲೋಕಸಭೆಯು ಅದರ ಅವಧಿಯಲ್ಲಿ ಮೂರು ವರ್ಷಗಳ ನಂತರ ವಿಸರ್ಜಿಸಲ್ಪಟ್ಟರೆ, ಮುಂದಿನ ಚುನಾವಣೆಯು ಉಳಿದ ಎರಡು ವರ್ಷಗಳ ಅವಧಿಗೆ ಮಾತ್ರ ಇರುತ್ತದೆ.

ರಾಜ್ಯ ಶಾಸಕಾಂಗಗಳ ಅವಧಿಗೆ ಸಂಬಂಧಿಸಿದಂತೆ ಇದೇ ರೀತಿಯ ತಿದ್ದುಪಡಿಯನ್ನು ಪ್ರಸ್ತಾಪಿಸಲಾಗಿದೆ. ರಾಜ್ಯ ವಿಧಾನಸಭೆಯನ್ನು ಮಧ್ಯಂತರದಲ್ಲಿ ವಿಸರ್ಜಿಸಿದರೆ, ನಂತರ ಉಳಿದ ಅವಧಿಗೆ ಮಾತ್ರ ಚುನಾವಣೆಗಳನ್ನು ನಡೆಸಲಾಗುತ್ತದೆ. ಇದು ಸಂವಿಧಾನದಲ್ಲಿ ನಿಗದಿಪಡಿಸಿದ ಸಂಸದೀಯ ಪ್ರಜಾಪ್ರಭುತ್ವದ ಮೂಲ ಯೋಜನೆಗೆ ವಿರುದ್ಧವಾಗಿದೆ. ರಾಜ್ಯ ವಿಧಾನಸಭೆಯ ಅಧಿಕಾರಾವಧಿಯನ್ನು ಹೀಗೆ ಮೊಟಕುಗೊಳಿಸುವುದು ಒಕ್ಕೂಟ ವ್ಯವಸ್ಥೆ ಮತ್ತು ಚುನಾಯಿತ ರಾಜ್ಯ ಶಾಸಕರ ಹಕ್ಕುಗಳ ಮೇಲೆ ಗಂಭೀರ ಪರಿಣಾಮಗಳನ್ನು ಬೀರುತ್ತದೆ ಎಂದು ಕೇಂದ್ರ ಸಮಿತಿ ಅಭಿಪ್ರಾಯ ಪಟ್ಟಿದೆ.

ಈ ಎರಡು ಮಸೂದೆಗಳನ್ನು ಹೆಚ್ಚಿನ ಪರಿಶೀಲನೆ ಮತ್ತು ಪರಿಗಣನೆಗಾಗಿ ಜಂಟಿ ಸಂಸದೀಯ ಸಮಿತಿಗೆ ವಹಿಸಲಾಗಿದೆ.

ಸಿಪಿಐ(ಎಂ) ಈಗಾಗಲೇ `ಒಂದು ರಾಷ್ಟ್ರ, ಒಂದು ಚುನಾವಣೆ' ವ್ಯವಸ್ಥೆಯ ವಿರುದ್ಧ ಪ್ರಚಾರಾಂದೋಲನ ನಡೆಸಿದೆ ಮಾಡಿದೆ ಎಂದಿಉ ನೆನಪಿಸಿರುವ ಕೇಂದ್ರ ಸಮಿತಿ ಈ ಸಂವಿಧಾನ ತಿದ್ದುಪಡಿ ಮಸೂದೆಯನ್ನು ಪ್ರಜಾಪ್ರಭುತ್ವ ಮತ್ತು ಒಕ್ಕೂಟ ವ್ಯವಸ್ಥೆಯನ್ನು ಗೌರವಿಸುವ ಎಲ್ಲರೂ ವಿರೋಧಿಸಬೇಕು ಎಂದು ಕರೆ ನೀಡಿದೆ.

“ಮಸೀದಿ-ದೇವಾಲಯ ವಿವಾದಗಳು- ಪೂಜಾ ಸ್ಥಳಗಳ ಕಾಯ್ದೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು”

1991 ರ ಪೂಜಾ ಸ್ಥಳಗಳ ಕಾಯ್ದೆಯನ್ನು ಉಲ್ಲಂಘಿಸಿ, ವಿವಿಧ ಮಸೀದಿಗಳ ಸ್ವರೂಪವನ್ನು ಪ್ರಶ್ನಿಸಿ ಮತ್ತು ಅವುಗಳ ಅಡಿಯಲ್ಲಿ ದೇವಾಲಯಗಳು ಅಸ್ತಿತ್ವದಲ್ಲಿವೆ ಎಂಬ ಆರೋಪದೊಂದಿಗೆ ಸ್ಥಳೀಯ ನ್ಯಾಯಾಲಯಗಳಲ್ಲಿ ಅರ್ಜಿಗಳನ್ನು ಸಲ್ಲಿಸಲಾಗಿದೆ ಮತ್ತು ಸಮೀಕ್ಷೆಗಳನ್ನು ನಡೆಸಬೇಕೆಂದು ಕೋರಲಾಗಿದೆ. ಪಶ್ಚಿಮ ಉತ್ತರ ಪ್ರದೇಶದ ಸಂಭಾಲ್‌ನಲ್ಲಿ ಇದು ಸಂಭವಿಸಿದೆ, ಅಲ್ಲಿ ನ್ಯಾಯಾಲಯವು ಅರ್ಜಿಯನ್ನು ಸಲ್ಲಿಸಿದ ದಿನವೇ ಸಮೀಕ್ಷೆಗೆ ಆದೇಶಿಸಿತು.

ಇದು ಪ್ರತಿಭಟನೆಗಳಿಗೆ ಕಾರಣವಾದ ನಂತರದ ಘಟನೆಗಳು ಮತ್ತು ಐದು ಯುವ ಮುಸ್ಲಿಂ ಪುರುಷರ ಸಾವು ರಾಜ್ಯ ಸರ್ಕಾರ ಮತ್ತು ಜಿಲ್ಲಾ ಅಧಿಕಾರಿಗಳು ಹಿಂದುತ್ವ ಶಕ್ತಿಗಳ ಕಾರ್ಯಸೂಚಿಯನ್ನು ಹೇಗೆ ಮುಂದೊಯ್ಯುತ್ತಿದ್ದಾರೆ ಎಂಬುದನ್ನು ತೋರಿಸಿದೆ ಎಂದು ಆತಂಕ ವ್ಯಕ್ತಪಡಿಸಿರುವ ಸಿಪಿಐ(ಎಂ) ಕೇಂದ್ರ ಸಮಿತಿ ತರುವಾಯ, ಅಜ್ಮೀರ್‌ನಲ್ಲಿ, ಅಜ್ಮೀರ್ ಷರೀಫ್ ದರ್ಗಾದ ಸಮೀಕ್ಷೆಗಾಗಿ ಸ್ಥಳೀಯ ನ್ಯಾಯಾಲಯವು ಅರ್ಜಿಯನ್ನು ಸ್ವೀಕರಿಸಿತು ಎಂಬ ಸಂಗತಿಯತ್ತ ಗಮನ ಸೆಳೆದಿದೆ.

1991 ರ ಪೂಜಾ ಸ್ಥಳಗಳ (ವಿಶೇಷ ನಿಬಂಧನೆಗಳು) ಕಾಯ್ದೆಗೆ ಹಿಂದೂ ಸಂಘಟನೆಗಳ ಕೆಲವು ಅರ್ಜಿದಾರರು ಸವಾಲನ್ನು ಆಲಿಸಿದ ಸುಪ್ರೀಂ ಕೋರ್ಟ್, ಕೆಳ ನ್ಯಾಯಾಲಯಗಳಲ್ಲಿ ನಡೆಯುತ್ತಿರುವ ಎಲ್ಲಾ ಮೊಕದ್ದಮೆಗಳು ಮತ್ತು ಸಮೀಕ್ಷೆಗಳಿಗೆ ತಡೆ ಹಾಕಿದೆ. ಪೂಜಾ ಸ್ಥಳಗಳ ಕಾಯ್ದೆಯ ಸಿಂಧುತ್ವವನ್ನು ಎತ್ತಿಹಿಡಿಯಬೇಕು ಮತ್ತು ಧಾರ್ಮಿಕ ಪೂಜಾ ಸ್ಥಳಗಳ ಮೇಲೆ ವಿವಾದಗಳನ್ನು ಎತ್ತುವ ಯಾವುದೇ ಪ್ರಯತ್ನಗಳ ಮೇಲೆ ಯಾವುದೇ ಸಡಿಲತೆಯಿಲ್ಲದೆ ಅದನ್ನು ಜಾರಿಗೊಳಿಸುವಂತೆ ನಿರ್ದೇಶಿಸಬೇಕು ಎಂದು ಕೇಂದ್ರ ಸಮಿತಿಯು ಸುಪ್ರೀಂ ಕೋರ್ಟ್ ಅನ್ನು ಒತ್ತಾಯಿಸಿದೆ.

“ಯುಜಿಸಿ ಕರಡು ನಿಬಂಧನೆಗಳು-ಅಪಾಯಕಾರೀ ಕ್ರಮ”

ಕೇಂದ್ರ ಸಮಿತಿಯು ಕರಡು ವಿಶ್ವವಿದ್ಯಾಲಯ ಅನುದಾನ ಆಯೋಗದ ನಿಭಂದನೆಗಳು 2025 ಅನ್ನು ಬಲವಾಗಿ ವಿರೋಧಿಸಿದೆ, ಇದು ರಾಜ್ಯನಡೆಸುವ ವಿಶ್ವವಿದ್ಯಾಲಯಗಳಲ್ಲಿ ಉಪಕುಲಪತಿಗಳನ್ನು ಆಯ್ಕೆ ಮಾಡುವ ಪ್ರಶ್ನೆಯಲ್ಲಿ ರಾಜ್ಯಗಳ ಹಕ್ಕುಗಳ ಮೇಲಿನ ನೇರ ದಾಳಿಯಾಗಿದೆ ಎಂದು ಅದು ಹೇಳಿದೆ. ಮಾರ್ಗಸೂಚಿಗಳು ರಾಜ್ಯಪಾಲರು ಮತ್ತು ಕುಲಪತಿಗಳಿಗೆ ಮೂರು ಸದಸ್ಯರ ಆಯ್ಕೆ ಸಮಿತಿಯನ್ನು ನೇಮಿಸುವ ಅಧಿಕಾರವನ್ನು ನೀಡುತ್ತದೆ, ಇದರಲ್ಲಿ ಕುಲಪತಿಗಳ ನಾಮನಿರ್ದೇಶಿತರು ಅಧ್ಯಕ್ಷರು ಸಹ ಆಗಿರುತ್ತಾರೆ.

ಆಯ್ಕೆ ಸಮಿತಿಯಲ್ಲಿ ಯಾರನ್ನು ನೇಮಿಸಲಾಗುತ್ತಿದೆ ಎಂಬುದರಲ್ಲಿ ರಾಜ್ಯ ಸರ್ಕಾರಕ್ಕೆ ಯಾವುದೇ ಪಾತ್ರವಿರುವುದಿಲ್ಲ. ಒಂದೇ ಏಟಿಗೆ, ಈ ಮಾರ್ಗಸೂಚಿಗಳ ಮೂಲಕ, ಕೇಂದ್ರವು ರಾಜ್ಯಗಳ ಎಲ್ಲಾ ವಿಶ್ವವಿದ್ಯಾಲಯಗಳಲ್ಲಿ ತನ್ನ ಆಯ್ಕೆಯ ಉಪಕುಲಪತಿಗಳನ್ನು ಕುಲಪತಿಗಳೂ ಆಗಿರುವ ರಾಜ್ಯಪಾಲರ ಮೂಲಕ ನೇಮಿಸಬಹುದು. ಈಗಾಗಲೇ ಎಲ್ಲಾ ವಿಧಿ-ವಿಧಾನಗಳನ್ನು ಮೀರಿ ಬಿಜೆಪಿ-ಆರ್‌ಎಸ್‌ಎಸ್ ಶಿಬಿರದೊಂದಿಗೆ ನಂಟು ಹೊಂದಿರುವ ಉಪಕುಲಪತಿಗಳನ್ನು ಹೇರಲು ರಾಜ್ಯಪಾಲರು ಹೇಗೆ ನಿರಂಕುಶವಾಗಿ ಕುಲಪತಿ ಸ್ಥಾನವನ್ನು ಬಳಸುತ್ತಿದ್ದಾರೆ ಎಂಬುದನ್ನು ನಾವು ನೋಡಿದ್ದೇವೆ.

ಇದು ಒಂದು ಅಪಾಯಕಾರಿ ನಿಬಂಧನೆಯಾಗಿದ್ದು, ಇದನ್ನು ವಿರೋಧಿಸಲೇಬೇಕಾಗಿದೆ ಎಂದಿರುವ ಕೇಂದ್ರ ಸಮಿತಿ, ಈ ಕರಡಿಗೆ ಅಂತಿಮ ರೂಪ ನೀಡಿದರೆ, ಸಂಬಂಧಪಟ್ಟ ಬಿಜೆಪಿಯೇತರ ರಾಜ್ಯ ಸರ್ಕಾರಗಳು ಈ ನಿಬಂಧನೆಗಳನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸುವುದು ಅಗತ್ಯವಾಗುತ್ತದೆ ಎಂದು ಹೇಳಿದೆ.

“ಚುನಾವಣಾ ಆಯೋಗದ ನಿಯಮಗಳು-ಮತ್ತೊಂದು ದಾಳಿ”

ಚುನಾವಣಾ ಆಯೋಗವು ಚುನಾವಣಾ ನಿಯಮಗಳಲ್ಲಿ ಏಕಪಕ್ಷೀಯವಾಗಿ ಬದಲಾವಣೆಗಳನ್ನು ಘೋಷಿಸಿದೆ, ಇದು ರಾಜಕೀಯ ಪಕ್ಷಗಳು, ಅಭ್ಯರ್ಥಿಗಳು ಮತ್ತು ಕಾಳಜಿಯಿರುವ ನಾಗರಿಕರಿಗೆ ವೀಡಿಯೊ ಮತ್ತು ಇತರ ಡಿಜಿಟಲ್ ಹಾದಿಗಳು ಸೇರಿದಂತೆ ಎಲೆಕ್ಟ್ರಾನಿಕ್ ದಾಖಲೆಗಳು ಲಭ್ಯವಾಗದಂತೆ ಕಸಿದುಕೊಳ್ಳುತ್ತದೆ. ಚುನಾವಣಾ ಆಯೋಗದ ಈ ಪ್ರತಿಗಾಮಿ ಹೆಜ್ಜೆ ಚುನಾವಣಾ ಪ್ರಕ್ರಿಯೆಯ ನ್ಯಾಯಸಮ್ಮತತೆಯ ಮೇಲೆ ಮತ್ತೊಂದು ದಾಳಿಯಾಗಿದೆ ಎಂದು ಕೇಂದ್ರ ಸಮಿತಿ ಖಂಡಿಸಿದೆ. ಈ ವಿಷಯವನ್ನು ಚರ್ಚಿಸಲು ಮತ್ತು ಸರಿಪಡಿಸುವ ಕ್ರಮಗಳನ್ನು ತೆಗೆದುಕೊಳ್ಳಲು ಎಲ್ಲಾ ರಾಜಕೀಯ ಪಕ್ಷಗಳ ಸಭೆಯನ್ನು ಕರೆಯುವಂತೆ ಕೇಂದ್ರ ಸಮಿತಿಯು ಚುನಾವಣಾ ಆಯೋಗಕ್ಕೆ ಕರೆ ನೀಡಿದೆ.

ಫೆಬ್ರುವರಿ 1:24ನೇ ಮಹಾಧಿವೇಶನದ ಕರಡು ರಾಜಕೀಯ ನಿರ್ಣಯ ಚರ್ಚೆಗಾಗಿ ಬಿಡುಗಡೆ

ಸಿಪಿಐ(ಎಂ) ಕೇಂದ್ರ ಸಮಿತಿಯ ಈ ಸಭೆ ಏಪ್ರಿಲ್ 2 ರಿಂದ 6 ರವರೆಗೆ ಮಧುರೈನಲ್ಲಿ ನಡೆಯಲಿರುವ ಪಕ್ಷದ 24 ನೇ ಮಹಾಧಿವೇಶನದಲ್ಲಿ ಮಂಡಿಸಬೇಕಾದ ಕರಡು ರಾಜಕೀಯ ನಿರ್ಣಯವನ್ನು ಅಂತಿಮಗೊಳಿಸಿತು. ಇದನ್ನು ಫೆಬ್ರವರಿ 1, 2025 ರಂದು ಎಲ್ಲಾ ಹಂತಗಳಲ್ಲಿ ಪಕ್ಷದ ಚರ್ಚೆಗಾಗಿ ಬಿಡುಗಡೆ ಮಾಡಲಾಗುತ್ತದೆ ಎಂದು ಅದು ಹೇಳಿದೆ. ಮಹಾಧಿವೇಶನದ “ಕರಡು ಸಂಘಟನಾ ವರದಿ” ಯನ್ನು ಅಂತಿಮಗೊಳಿಸಲು ಕೇಂದ್ರ ಸಮಿತಿಯು ಮಾರ್ಚ್ 22-23 ರಂದು ಸಭೆ ಸೇರಲು ನಿರ್ಧರಿಸಿತು.

ಇದನ್ನೂ ನೋಡಿ: ಕಲಬುರಗಿ | ಬಹುತ್ವ ಸಂಸ್ಕತಿ ಭಾರತೋತ್ಸವ-2025 Janashakthi Media

Donate Janashakthi Media

Leave a Reply

Your email address will not be published. Required fields are marked *