ಡಾ.ರಾಜ್‌ ರಸ್ತೆ ಅಡಿಗಲ್ಲಿಗೆ ಆಧಾರ ನೀಡಿ

ಬೆಂಗಳೂರು: ರಾಜಕುಮಾರ್‌ ಎಂದರೆ ಕನ್ನಡ, ಕನ್ನಡ ಎಂದರೆ ರಾಜಕುಮಾರ್‌ ಎಂಬುದರ ಮಟ್ಟಿಗೆ ಕರ್ನಾಟಕದ ರಾಜ್ಯದ ಜನಮಾನಸದಲ್ಲಿ ಸದಾಹಸಿರಾಗಿರುವ ಹೆಸರು ಡಾ.ರಾಜ್‌.

ನಟಸಾರ್ವಭೌಮ ಡಾ.ರಾಜಕುಮಾರ್‌ ಅವರಿಗೆ ನಾಳೆಗೆ  ೯೨ನೇ ಜನ್ಮದಿನ (ಜನನ ೧೯೨೯ -೦೪-೨೪). ೧೯೫೪ರಂದು ಆರಂಭವಾದ ಚಿತ್ರರಂಗ ಜೀವನ ಸತತ ೨೦೦೫ರವರೆಗೂ ರಾಜಕುಮಾರ್‌ ಅವರ ಅಭಿನಯವನ್ನು ಮುಂದುವರೆದಿತ್ತು.

೨೦೦ಕ್ಕೂ ಹೆಚ್ಚಿನ ಚಿತ್ರಗಳಲ್ಲಿ ನಟಿಸಿದ ರಾಜಕುಮಾರ್‌ ಅವರಿಗೆ ಹಲವಾರು ಪ್ರಶಸ್ತಿ ಬಿರುದುಗಳು ಬಂದಿವೆ. ೨೭.೦೧.೧೯೯೪ರಂದು ಅಂದಿನ ಕರ್ನಾಟಕ ರಾಜ್ಯ ಸರಕಾರವು ಈಗಿನ ಬೆಂಗಳೂರಿನಲ್ಲಿರುವ ಯಶವಂತಪುರ ಮೇಲ್ಸೇತುವೆಯಿಂದ ಮಾಗಡಿ ರಸ್ತೆಗೆ ಹೊಂದಿಕೊಂಡಿರುವ ಪ್ರಸನ್ನ ಚಿತ್ರಮಂದಿರದವರೆಗೂ ಪದ್ಮಭೂಷಣ ಡಾ. ರಾಜ್‌ಕುಮಾರ್‌ ರಸ್ತೆ ಎಂದು ನಾಮಕರಣ ಮಾಡಲಾಗಿದೆ.

ಪ್ರಸನ್ನ ಚಿತ್ರಮಂದಿರದ ಹತ್ತಿರ ಇರುವ ಟ್ರಾಫಿಕ್‌ ಸಿಗ್ನಲ್‌ ಬಳಿ ರಸ್ತೆ ನಾಮಕರಣದ ಅಡಿಗಲ್ಲು ಇಂದು ಯಾವುದೇ ಆಧಾರವಿಲ್ಲದೆ ಒರಗಿಕೊಂಡಿದೆ. ಈ ಬಗ್ಗೆ ಬಿಬಿಎಂಪಿಯಾಗಲಿ, ಸರಕಾರವಾಗಲಿ ಗಮನಹರಿಸದೆ ಇರುವುದು ಏಕೆ ಎಂಬುದು ಪ್ರಶ್ನೆಯಾಗಿದೆ.

೧೯೯೪ರಲ್ಲಿ ಅಧಿಕಾರದಲ್ಲಿದ್ದ ರಾಜ್ಯ ಸರಕಾರ ಹಾಗೂ ಬೆಂಗಳೂರು ಮಹಾನಗರ ಪಾಲಿಕೆ ವತಿಯಿಂದ ನಡೆದ ಕಾರ್ಯಕ್ರಮ ಅದಾಗಿತ್ತು.

ಅಂದಿನ ಕಾರ್ಯಕ್ರಮದಲ್ಲಿ ಕಾಂಗ್ರೆಸ್‌ನ ಹಿರಿಯ ನಾಯಕರು ಹಾಗೂ ಅಂದಿನ ಮುಖ್ಯಮಂತ್ರಿ ಎಂ. ವೀರಪ್ಪ ಮೊಯಿಲಿ ಉದ್ಘಾಟಿಸಿದ್ದರು. ಅಂದಿನ ಕಾರ್ಯಕ್ರಮದಲ್ಲಿ ನಗರಾಭಿವೃದ್ಧಿ ಸಚಿವರಾದ ಚೌಡಾರೆಡ್ಡಿ, ಬೃಹತ್‌ ಹಾಗೂ ಮಧ್ಯಮ ಕೈಗಾರಿಕೆ ರಾಜ್ಯ ಸಚಿವರಾದ ರಾಮಲಿಂಗರೆಡ್ಡಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಜಿ.ನಾರಾಯಣ, ಮಾಜಿ ಪ್ರಧಾನಿ ಹಾಗೂ ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷರು ಆದ ಅಂದಿನ ಲೋಕಸಭಾ ಸದಸ್ಯರು ಪ್ರದೇಶ ಜನತಾದಳದ ಅಧ್ಯಕ್ಷರಾದ ಹೆಚ್‌.ಡಿ.ದೇವೇಗೌಡ ಅವರು ಭಾಗವಹಿಸಿದ್ದರು. ಅಧ್ಯಕ್ಷತೆಯನ್ನು ಮಹಾಪೌರರಾಗಿದ್ದ ಬಿ.ಎಸ್.ಸುಧನ್ವ ವಹಿಸಿಕೊಂಡಿದ್ದರು.

೨೬ ವರ್ಷಗಳಿಂದಲೂ ಡಾ.ರಾಜಕುಮಾರ್‌ ರಸ್ತೆ ಎಂದಿಗೂ ಬದಲಾಗಿಲ್ಲ. ಬೆಂಗಳೂರಿನ ಕೇಂದ್ರ ಭಾಗಕ್ಕೆ ಹಾಗೂ ರಾಜಾಜಿನಗರ ಪ್ರದೇಶಕ್ಕೆ ಪ್ರವೇಶ ಈ ರಸ್ತೆ ಮೂಲಕವೇ ಆಗುತ್ತದೆ. ಅಲ್ಲದೆ, ಬೆಂಗಳೂರಿನಿಂದ ತುಮಕೂರು ಮೂಲಕ ಹಾಗೂ ತುಮಕೂರು ರಸ್ತೆಯ ಮೂಲಕ ಬೆಂಗಳೂರು ಕೇಂದ್ರ ಭಾಗಕ್ಕೆ ಪ್ರವೇಶ ಪಡೆಯುವವರೆಲ್ಲರೂ ಸಹ ರಾಜಕುಮಾರ್‌ ರಸ್ತೆಯಿಂದಲೇ ಸಂಚರಿಸಬೇಕಾಗಿದೆ.

ಡಾ.ರಾಜಕುಮಾರ್‌ ರಸ್ತೆ ಯಾವುದೆಂದು ಯಾರಿಗೆ ಕೇಳಿದರೂ ಸಹ ರಾಜಾಜಿನಗರದಲ್ಲಿರುವುದನ್ನು ಯಾರು ಬೇಕಾದರೂ ಹೇಳುವಂತಹ ಅತ್ಯಂತ ನೆನಪಿನಲ್ಲಿ ಉಳಿದುಕೊಂಡಿರುವ ಸ್ಥಳ ಇದಾಗಿದೆ.

ಕೆಲವು ವರ್ಷಗಳ ಹಿಂದೆ ʻರಸ್ತೆ ನಾಮಕರಣʼದ ನೆನಪಿನ ಅಡಿಗಲ್ಲು ರಸ್ತೆಯ ಪ್ರಮುಖ ಭಾಗದಲ್ಲಿ ಕನ್ನಡ ಬಾವುಟ ಸ್ತಂಭದಲ್ಲಿ ಭದ್ರವಾಗಿ ನೆಲೆಕಂಡುಕೊಂಡಿತ್ತು. ಆದರೆ, ವಾಹನಗಳ ಓಡಾಟಕ್ಕೆ ವ್ಯತ್ಯಯವಾಗದಂತೆ ಮಾಡುವುದು ಮತ್ತು ಧ್ವಜಸ್ತಂಭ ಮರುಸ್ಥಾಪನೆ ಮಾಡುವ ನಿಟ್ಟಿನಲ್ಲಿ ತೆರೆವುಗೊಳಿಸಿದ್ದರಿಂದ ಅಡಿಗಲ್ಲು ಮಾತ್ರ ಸಿಗ್ನಲ್‌ ಬಳಿ ಇರುವ ಕರ್ನಾಟಕ ಬ್ಯಾಂಕ್‌ ಎಟಿಎಂ ದ್ವಾರದ ಗೋಡೆಗೆ ಒರಗಿಸಲಾಗಿದೆ. ಆದರೆ, ಅದಕ್ಕೆ ಯಾವುದೂ ಆಧಾರವಿಲ್ಲ.

ಈ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಗಮನ ಹರಿಸಿ ಮತ್ತೆ ಮತ್ತೆ ಇತಿಹಾಸವನ್ನು ನೆನಪು ಮಾಡುವ ಪದ್ಮಭೂಷಣ ಡಾ.ರಾಜಕುಮಾರ್‌ ರಸ್ತೆಯ ಅಡಿಗಲ್ಲಿಗೆ ಆಧಾರವನ್ನು ಕಲ್ಪಿಸಬೇಕೆಂದು ಹಲವರು ಆಗ್ರಹಿಸಿದ್ದಾರೆ.

ವರದಿ: ವಿನೋದ ಶ್ರೀರಾಮಪುರ

  • ಛಾಯಾಚಿತ್ರ ಕೃಪೆ: ತಾಯಿ ಲೋಕೇಶ್‌
  • ಮಾಹಿತಿ ಕೃಪೆ: ವಿವಿಧ ಜಾಲತಾಣಗಳು
Donate Janashakthi Media

Leave a Reply

Your email address will not be published. Required fields are marked *