ಬೆಂಗಳೂರು ನಗರ ವಿವಿ ಯ ಹೆಸರು ಡಾ.ಮನಮೋಹನ್ ಸಿಂಗ್ ವಿವಿ ಎಂದು ಮರು ನಾಮಕರಣ

ಬೆಂಗಳೂರು : ವಿಧಾನಸಭೆಯಲ್ಲಿ ವಿಧೇಯಕ ಅಂಗೀಕಾರವಾಗಿದ್ದು. ಬೆಂಗಳೂರು ನಗರ ವಿವಿ ಯ ಹೆಸರನ್ನೂ ಡಾ.ಮನಮೋಹನ್ ಸಿಂಗ್ ವಿವಿ ಎಂಬುದಾಗಿ ಮರುನಾಮಕರಣವಾಗಲಿದೆ.

ಬೆಂಗಳೂರು ನಗರ ವಿವಿಯ ಹೆಸರು ಮರುನಾಮಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ರಾಜ್ಯ ವಿವಿಗಳ ತಿದ್ದುಪಡಿ ವಿಧೇಯಕವನ್ನು ವಿಧಾನಸಭೆಯಲ್ಲಿ ಮಂಡಿಸಲಾಗಿತ್ತು. ಈ ವಿಧೇಯಕದ ಬಗ್ಗೆ ಚರ್ಚೆಯ ಬಳಿಕ ಅಂಗೀಕಾರವನ್ನು ನೀಡಲಾಗಿದೆ. ಹೀಗಾಗಿ ಬೆಂಗಳೂರು ನಗರ ವಿಶ್ವವಿದ್ಯಾಲಯದ ಹೆಸರು ಬದಲಾವಣೆಯಾಗಲಿದೆ.

ಇದನ್ನೂ ಓದಿ: ನವದೆಹಲಿ | ಕೂಡಲೇ ಲೋಕಸಭೆಯನ್ನು ವಿಸರ್ಜಿಸುವಂತೆ ವಿಪಕ್ಷಗಳು ಆಗ್ರಹ  

ವಿಧಾನಸಭೆ ಬಳಿಕ ವಿಧಾನ ಪರಿಷತ್ತಿನಲ್ಲೂ ಕರ್ನಾಟಕ ರಾಜ್ಯ ವಿವಿಗಳ ತಿದ್ದುಪಡಿ ವಿಧೇಯಕವು ಅಂಗೀಕಾರಗೊಂಡರೆ ಡಾ.ಮನಮೋಹನ್ ಸಿಂಗ್ ವಿವಿ ಎಂಬುದಾಗಿ ಮರು ನಾಮಕರಣವಾಗಲಿದೆ.

ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಅವರು ಸದನದಲ್ಲಿ ಬೆಂಗಳೂರು ವಿವಿ ಹೆಸರು ಬದಲಿಸುವ ಪ್ರಸ್ತಾಪ ಮಾಡಿದರು. ಸಚಿವರ ಪ್ರಸ್ತಾಪಕ್ಕೆ ವಿಪಕ್ಷ ನಾಯಕ ಅಶೋಕ್ ಸಲಹೆ ನೀಡಿದ್ದಾರೆ. ಮನಮೋಹನ್ ಸಿಂಗ್ ಹೆಸರಿಡಲು ತಕರಾರು ಇಲ್ಲ. ಹಳೆಯ ಇತಿಹಾಸವಿರುವ ವಿವಿ ಹೆಸರು ಏಕೆ ಬದಲು ಎಂದು ಪ್ರಶ್ನಿಸಿದರು.

ಯಾವುದಾದರೂ ಹೊಸ ವಿವಿ ಸ್ಥಾಪಿಸಿದಾಗ ಸಿಂಗ್ ಹೆಸರಿಡಿ. ಹಳೆಯದ್ದಕ್ಕೆ ಬಣ್ಣ ಹೊಡೆಯೋದೇ ನಿಮ್ಮ ಕೆಲಸನಾ ಎಂದು ಸಚಿವ ಸುಧಾಕರ್‌ಗೆ ವಿಪಕ್ಷ ನಾಯಕ ಅಶೋಕ ಲೇವಡಿ ಮಾಡಿದರು.

ಸದ್ಯಕ್ಕೆ ಹೆಸರು ವಿವಿ ಬದಲಾವಣೆಗೆ ಮಾತ್ರ ತೀರ್ಮಾನ ಮಾಡಲಾಗಿದ್ದು, ತುಮಕೂರು ವಿವಿಗೆ ಹೆಸರಿನ ಬಗ್ಗೆ ಸಿಎಂ ಜೊತೆ ಚರ್ಚೆ ಮಾಡಲಾಗುವುದು ಎಂದು ಸುಧಾಕರ್ ತಿಳಿಸಿದರು.

ಇದನ್ನೂ ನೋಡಿ: ಪಪ್ಪೆಟ್‌ ಜಾನು ಈಗ ಕಾಲೇಜ್‌ ಹುಡುಗಿ (ಲಿಂಗತ್ವ ಅಲ್ಪಸಂಖ್ಯಾತ) Janashakthi Media

Donate Janashakthi Media

Leave a Reply

Your email address will not be published. Required fields are marked *