ಕೊಲಾರ: ತಾಲೂಕು ಆರೋಗ್ಯಾಧಿಕಾರಿ ಡಾ. ಕವಿತಾ ದೊಡಮನಿ ನೇತೃತ್ವದ ಡತಂ ವಿವಿಧ ಗ್ರಾಮಗಳ ಕ್ಲಿನಿಕ್ಗಳ ಮೇಲೆ ದಾಳಿ ನಡೆಸಿ ಪರವಾನಗಿ ಇಲ್ಲದ ಆಸ್ಪತ್ರೆಗಳನ್ನು ಶುಕ್ರವಾರ ಬಂದ್ ಮಾಡಿಸಿತು.
ಕೊಲಾರದಲ್ಲಿ ಮೂರು, ಕೂಡಗಿಯಲ್ಲಿ ಎರಡು, ಮುತ್ತಗಿಯಲ್ಲಿ ಒಂದು ಕ್ಲಿನಿಕ್ ಮೇಲೆ ದಾಳಿ ನಡೆಸಿ ವೈದ್ಯಕಿಯ ಮಂಡಳಿ ನೀಡುವ ಪರವಾನಗಿ ಪತ್ರ ಇಲ್ಲದ ಕಾರಣ ಆಸ್ಪತ್ರೆಗಳಿಗೆ ಬೀಗ ಹಾಕಲಾಯಿತು.
ಸಾರ್ವಜನಿಕರು ನಕಲಿ ವೈದ್ಯರ ಬಗ್ಗೆ ದೂರು ನೀಡಿದಲ್ಲಿ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಡಾ.ಕವಿತಾ ದೊಡಮನಿ ಹೇಳಿದರು. ಎಸ್.ಎಸ್. ಮೇಟಿ, ತೌಸೀಫ್ ಬಾಗೇವಾಡಿ ಇತರರಿದ್ದರು.
ಇದನ್ನೂ ನೋಡಿ: ವಚನಾನುಭವ – 23 ಅನ್ನವ ನೀಡುವವರಿಂಗೆ ಧಾನ್ಯವೇ ಶಿವಲೋಕ | ಅಕ್ಕಮಹಾದೇವಿ ವಚನ Janashakthi Media