ಅಪೌಷ್ಟಿಕತೆ ನಿವಾರಣೆಗೆ ಜಾಗೃತಿ ಅಗತ್ಯ – ಡಾ. ಇಂಗಳೆ

ಮುಂಡಗೋಡ: ಅಪೌಷ್ಟಿಕ ಮಕ್ಕಳ ಆರೋಗ್ಯ ತಪಾಸಣೆ ಶಿಬಿರವನ್ನು  ಮುಂಡಗೋಡ ನಗರದ ಎಲ್ ವಿಕೆ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿತ್ತು. ಲೊಯೋಲ ವಿಕಾಸ ಕೇಂದ್ರ ತಾಲೂಕು ಸಾವ೯ಜನಿಕ ಆರೋಗ್ಯ ಇಲಾಖೆ , ಮಕ್ಕಳು ಹಾಗೂ ಮಹಿಳಾ ಅಭಿವೃದ್ಧಿ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಈ ಕಾರ್ಯಕ್ರಮ ನಡೆಯಿತು.

ಈ ಕಾಯ೯ಕ್ರಮ ಉದ್ಘಾಟಿಸಿ ತಾಲೂಕಾ ಸಾವ೯ಜನಿಕ ಆರೋಗ್ಯ ಇಲಾಖೆ ವೈದ್ಯಾಧಿಕಾರಿಗಳಾದ ಎಚ್ ಎಫ್ ಇಂಗಳೆ  ಮಾತನಾಡುತ್ತಾ, ಅಪೌಷ್ಟಿಕತೆ ಒಂದು ಕಾಯಿಲೆ ಅಲ್ಲ ಅದು ಒಂದು ಬಗೆಯ ಜನರಲ್ಲಿನ ನಿಲ೯ಕ್ಷ್ಯ, ಯಾಕಂದರೆ ನಮ್ಮ ಎಲ್ಲಾ ಕಾಯಿಲೆಗಳಿಗೆ ಔಷಧಿ ಇರುವುದು ನಾವು ಸೇವಿಸುವ ಆಹಾರದಲ್ಲಿ ಇರುತ್ತದೆ. ಉದಾಹರಣೆಗೆ ಮನೆಯಲ್ಲಿ ಸಾಕಿದ ಕೋಳಿಯ ಮೊಟ್ಟೆ, ಎಮ್ಮೆ, ಆಕಳಿನ ಹಾಲು ನಮ್ಮ ಹೊಲಗಳಲ್ಲಿ ಬೆಳೆದ ಹೆಸರುಕಾಳು, ತೊಗರಿ, ರಾಗಿ, ಜೋಳ, ಕಡಲೆ, ಶೇಂಗಾ ತರಕಾರಿ ಇವುಗಳನ್ನು ನಿಯಮಿತವಾಗಿ ಪ್ರಮಾಣ ಬದ್ದವಾಗಿ ಸೇವಿಸುವುದರಿಂದ ಅಪೌಷ್ಟಿಕತೆ ಹೋಗಲಾಡಿಸಬಹುದು. ಹಾಗೂ ಆಸ್ಪತ್ರೆ ಔಷಧ ಸೇವನೆಯಿಂದ ದೂರವಿರಲು ಸಾಧ್ಯವಾಗುತ್ತದೆ. ಹೀಗಾಗಿ  ನಿಮ್ಮ ಮಕ್ಕಳಿಗೆ ಮನೆಯಲ್ಲಿ ಯೇ ಆಹಾರ ತಯಾರಿ ಮಾಡಿ ತಿನ್ನಲು ನೀಡಿರಿ ಎಂದರು.

ಅಂಗನವಾಡಿ ಕಾಯ೯ಕತ೯ರಿಗೆ   ನಿಮ್ಮ ಅಂಗನವಾಡಿ ವ್ಯಾಪ್ತಿಯ ಮಕ್ಕಳಿಗೆ ಕಡ್ಡಾಯವಾಗಿ ಚುಚ್ಚುಮದ್ದು ಆಗುವಂತೆ ಕಾಳಜಿ ವಹಿಸುವಂತೆ ವೈದ್ಯಾಧಿಕಾರಿಗಳು ಕಿವಿ ಮಾತನ್ನು ಹೇಳಿದರು. ಲೊಯೋಲ ವಿಕಾಸ ಕೇಂದ್ರವು ಕೋವಿಡ್  ಸಂದರ್ಭದಲ್ಲಿ ತಾಲೂಕಿನ ಕಾಯ೯ಕತ೯ರು ಮತ್ತು ರೋಗಿಗಳಿಗೆ ನೆರವಾಗಲೆಂದು ಔಷಧಿ, ಆರೋಗ್ಯ ಕಿಟ್ ಉಚಿತವಾಗಿ ನೀಡಿ ಸಾವಿರಾರು ರೋಗಿಗಳ ಜೀವ ಉಳಿಯಲು ಸೇವೆ ಸಲ್ಲಿಸಿದ್ದು, ಆರೋಗ್ಯ ಇಲಾಖೆ ಮತ್ತು ತಾಲೂಕಿನ ಜನತೆ ಪರವಾಗಿ ವೈದ್ಯಾಧಿಕಾರಿಗಳು ಧನ್ಯವಾದಗಳನ್ನು ಅಪಿ೯ಸಿದರು.

ಪ್ರಭಾರಿ ಸಿಡಿಪಿಓ  ದೀಪಾ ಬಂಗೇರ ಮಾತನಾಡುತ್ತಾ ಅಪೌಷ್ಟಿಕತೆ ಕುರಿತು ಕಳವಳ ಪಡುವ ಅಗತ್ಯವಿಲ್ಲ ಯಾಕಂದರೆ ಪ್ರತಿ ಹಳ್ಳಿಯಲ್ಲೂ ಅಂಗನವಾಡಿಗಳಿದ್ದಾವೆ. ಗಭಿ೯ಣಿ ಬಾಣಂತಿ ಹಾಗೂ 5 ವಷ೯ದೊಳಗಿನ  ಮಕ್ಕಳ ವಿಶೇಷ ಕಾಳಜಿ ಅಲ್ಲಿನ ಆಶಾ  ಕಾರ್ಯಕರ್ತೆಯರು ಮತ್ತು ಅಂಗನವಾಡಿ ಕಾಯ೯ಕತ೯ರು ಮಾಡುತ್ತಾರೆ. ಪ್ರತಿ ತಿಂಗಳು ಆರೋಗ್ಯ ಶಿಬಿರ ಚುಚ್ಚುಮದ್ದು ಪೌಷ್ಟಿಕ ಆಹಾರ ವಿತರಣೆ ಮಾಡುತ್ತಾರೆ ಅಲ್ಲಿ ನಿಮಗೆ ಕುಂದು ಕೊರತೆಗಳು ಕಂಡುಬಂದಲ್ಲಿ  ಅಂಗನವಾಡಿ ಕಾಯ೯ಕತ೯ರು ಹಾಗೂ ಸಿಡಿಪಿಓ ಅಧಿಕಾರಿಗಳನ್ನು ಸಂಪಕಿ೯ಸಬಹುದು ಎಂದರು.

ಚಿಕ್ಕ ಮಕ್ಕಳ ವೈದ್ಯಾಧಿಕಾರಿಗಳಾದ  ಪ್ರವೀಣ್ ಕುಮಾರ್ ಡೊರಳ್ಳಿ ಮಾತನಾಡುತ್ತಾ ಅಪೌಷ್ಟಿಕತೆ ಅಥವಾ ಕುಪೋಷಣೆ ಆಹಾರ ಸೇವನೆಯಲ್ಲಿನ ವ್ಯತ್ಯಾಸಗಳಿಂದ ಉಂಟಾಗುವಂತಹದ್ದು.  ಇದು ಕಾಯಿಲೆಗಳಿಗೆ ದಾರಿ ಉಂಟು ಮಾಡುವಂತಹದ್ದು ಆದರೂ ಕಾಯಿಲೆಯಲ್ಲ. ಮಕ್ಕಳ ದೈಹಿಕ ಬೆಳವಣಿಗೆಯಲ್ಲಿನ ಕುಂಠಿತತೆ, ಎತ್ತರ, ತೂಕ, ಕಣ್ಣು,    ಚಮ೯, ಉಗುರು  ಪರಿಶೀಲಿಸುವುದರ ಮೂಲಕ ಪೌಷ್ಟಕತೆಯನ್ನು ಪ್ರಾಥಮಿಕ ಹಂತದಲ್ಲಿಯೇ ಗುರುತಿಸಿ ಸೂಕ್ತ ಚಿಕಿತ್ಸೆ ನೀಡಬಹುದು. ಸೇರಲ್ಯಾಕ್  ರೆಡಿಮೇಡ್ ಔಷಧಗಳು  ಅಂಗಡಿಗಳಲ್ಲಿ ದೊರೆಯುವ ಟಾನಿಕ್ ಇವುಗಳಲ್ಲಿರುವ  ಅಂಶಗಳು ನಮ್ಮ ಮನೆಯಲ್ಲಿರುವ ಶೇಂಗಾ, ಬೆಲ್ಲ ದ್ವಿದಳಧಾನ್ಯ, ಮೊಳಕೆ ಕಾಳು, ತರಕಾರಿ, ಹಣ್ಣುಗಳನ್ನು ಸರಿಯಾಗಿ ಸೇವಿಸುವುದರಿಂದಲೇ ಅಪೌಷ್ಟಿಕತೆ ನಿಮೂ೯ಲನೆ ಮಾಡಬಹುದು. ಗಭಿ೯ಣಿ ಬಾಣಂತಿಯರು ಸಮತೋಲನ ಆಹಾರ ಸೇವಿಸುವುದರಿಂದ ಹುಟ್ಟುವ ಹಾಗೂ ಹುಟ್ಟಿದ ಮಗುವಿನ ಬೆಳವಣಿಗೆಯಲ್ಲಿ ದಷ್ಟಪುಷ್ಟತೆ ಪರಿಣಾಮ ಕಾರಿಯಾಗಿ ಗಮನಿಸಬಹುದು. ಅಪೌಷ್ಟಿಕತೆ ನಿಮೂ೯ಲನೆ ರಾಷ್ಟ್ರೀಯ ಪೋಷಣಾ ಅಭಿಯಾನ ಕಾರ್ಯಕ್ರಮದಡಿಯಲ್ಲಿ ಸಕಾ೯ರವು ಕೈಗೊಂಡ ಮಹತ್ತರ ಕಾಯ೯ಕ್ರಮ ವಾಗಿದೆ. ಈ ದಿನ ತಪಾಸಣೆಗೆ ಒಳಪಟ್ಟವರಲ್ಲಿ ಗಂಭೀರ ಸಮಸ್ಯೆಗಳು ಕಂಡುಬಂದರೆ ತಾವು ತಾಲೂಕಿನ ಚಿಕ್ಕ ಮಕ್ಕಳ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆದು ಕೊಳ್ಳಬಹುದು .  ಲೊಯೋಲ ವಿಕಾಸ ಕೇಂದ್ರದ  ನಿದೇ೯ಶಕರಾದ ಫಾದರ ಅನಿಲ್ ಡಿಸೋಜಾ ಮಾತನಾಡುತ್ತಾ  ಸಕಾ೯ರವು ಅಂಗನವಾಡಿ ಮತ್ತು ಆರೋಗ್ಯ ಇಲಾಖೆ ಮೂಲಕ  ಆಶಾ ಕಾಯ೯ಕತೆ೯ ಅಂಗನವಾಡಿ ಕಾಯ೯ಕತ೯ರಿಂದ  ಪ್ರತಿ ಗ್ರಾಮದಲ್ಲಿ ಸೇವೆ ನೀಡುತ್ತಿದೆ  ಅದರ ಸದುಪಯೋಗ ಪಡೆದುಕೊಳ್ಳಿರೆಂದು ಹೇಳಿದರು.

ಮಂಗಳಾ ಮೊರೆರವರು ಮನೆಯಲ್ಲಿಯೆ ಮಾಲ್ಟ ಮತ್ತು ಪೌಷ್ಟಿಕ ಆಹಾರ ತಯಾರಿಸುವ ವಿಧಾನ ತಿಳಿಸಿ ಕೊಟ್ಟರು.  ಅಪೌಷ್ಟಿಕ ಮಕ್ಕಳ ಆರೋಗ್ಯ ತಪಾಸಣೆಯನ್ನು ಚಿಕ್ಕ ಮಕ್ಕಳ ವೈದ್ಯಾಧಿಕಾರಿ ಗಳಾದ ಪ್ರವೀಣ ಕುಮಾರ್ ಡೊರಳ್ಳಿ, ನಿದಾನಗತಿ ಬೆಳವಣಿಗೆ ತಜ್ಞ ವೈದ್ಯರಾದ ಸಂದೇಶ ಮತ್ತು ಸಿಸ್ಟರ್ ಆರುಂಧತಿ ಎಲ್ವಿಕೆ ಆರೋಗ್ಯ ಕಾಯ೯ಕತ೯ರಾದ ತೇಜಸ್ವಿನಿ ರವರು ಆರೋಗ್ಯ ತಪಾಸಿಸಿದರು.

ಲೊಯೋಲ ವಿಕಾಸ ಕೇಂದ್ರ ದಿಂದ ಮಲ್ಟಿ ವಿಟಾಮಿನ್ ವಿತ್ ಸಿರಪ್  ಮತ್ತು ಪ್ರೋಟಿನ್ ಪೌಡರ್  ಮಕ್ಕಳಿಗೆ  ಉಚಿತವಾಗಿ ವಿತರಿಸಲಾಯಿತು. ತರಕಾರಿ ಬೀಜಗಳನ್ನು 4 ಅಂಗನವಾಡಿ ಕೇಂದ್ರಗಳಿಗೆ ಸಾಂಕೇತಿಕವಾಗಿ ಅವಿತರಿಸಲಾಯಿತು. ಶಿಬಿರದಲ್ಲಿ ಒಟ್ಟು ತಾಲೂಕಿನ  87 ಮಕ್ಕಳು ಮತ್ತು 87 ಪೊಷಕರು, 18 ಅಂಗನವಾಡಿ ಕಾರ್ಯಕರ್ತೆಯರು, ಸಿಡಿಪಿಓ, ಆರೋಗ್ಯ ಇಲಾಖೆ ಹಾಗೂ ಲೊಯೋಲ ವಿಕಾಸ ಕೇಂದ್ರದ ಸಿಬ್ಬಂದಿಗಳು ಭಾಗವಹಿಸಿದ್ದರು.

ಕಾಯ೯ಕ್ರಮ ನಿರೂಪಣೆಯನ್ನು ತುಂಗಾ ನಾಯ್ಕ, ಸ್ವಾಗತ  ಮಲ್ಲಮ್ಮ ನೀರಲಗಿ, ವಂದನಾರ್ಪಣೆ, ಲಕ್ಷ್ಮಣ ಮಳೆ  ನೇರವೇರಿಸಿದರು. ಜಾಗೃತಿ ಹಾಡುಗಳು ಹಜರತ್ ಮುಲ್ಲಾ ಮತ್ತು ಸಂಗಡಿಗರು ಜಾಗೃತಗೀತೆ ಹಾಡಿದರು.

Donate Janashakthi Media

Leave a Reply

Your email address will not be published. Required fields are marked *