ಬೆಂಗಳೂರು: ಬಾಬಾ ಸಹೇಬ್ ಡಾ. ಬಿ.ಆರ್ ಅಂಬೇಡ್ಕರ್ ಅವರ 134ನೇ ಜನ್ಮದಿನಾಚರಣೆಯನ್ನು ಸರ್ಕಾರಿ ಕಲಾ ಕಾಲೇಜು ಮತ್ತು ಎಸ್.ಎಫ್.ಐ ಕರ್ನಾಟಕ ಸಹಯೋಗದಲ್ಲಿ ಆಚರಿಸಲಾಯಿತು. ಸರ್ಕಾರಿ
ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆಯನ್ನು ಮಾಡಿದರು. ಕಾರ್ಯಕ್ರಮದ ಉಪನ್ಯಾಸಕರಾಗಿ ಆಗಮಿಸಿದ ಶ್ರೀಪಾದ ಭಟ್ ಅವರು ಶಿಕ್ಷಣ ತಜ್ಞರು ಮತ್ತು ಪ್ರಗತಿ ಪರ ಚಿಂತಕರು ಇವರು ಮಾತನಾಡಿ ಡಾ.ಬಿ.ಆರ್ ಅಂಬೇಡ್ಕರ್ ಅವರು ದೇಶ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿಯೂ ಅನೇಕ ಹೋರಾಟವನ್ನು ಮಾಡಿದ್ದಾರೆ ಇದು ಶ್ಲಾಘನೀಯವಾದ ಕೆಲಸ. ಇವರು ಘೋಷಿಸಿದ ಸಾಮಾಜಿಕ ನ್ಯಾಯ ಮತ್ತು ಸಮಾನತೆ ಎಲ್ಲಾ ವರ್ಗವನ್ನು ತಲುಪಿದೆ. ಸರ್ಕಾರಿ
ಆದರೆ ನಮಗೆ ಸಿಕ್ಕಿರುವ ರಾಜಕೀಯ ಸ್ವಾತಂತ್ರ್ಯ ಅಸಮಾನತೆಯ ಅಸಮಾನತೆಯಿಂದ ಕೂಡಿದೆ. ನಾಗರಿಕ ಹಕ್ಕುಗಳ ರಕ್ಷಣೆಯ ಸ್ವಾತಂತ್ರ್ಯವಾಗಿ ಸಿಕ್ಕಿಲ್ಲ ಅದಕ್ಕೆ ಸಮಾನತೆ ಇನ್ನೂ ಬಂದಿಲ್ಲ. ಆದರೆ ಇಂದು ನಾವೆಲ್ಲ ಜಾತಿಯ ನೆಲೆಯಲ್ಲಿ, ಧರ್ಮದ ನೆಲೆಯಲ್ಲಿ ಸಂವಿಧಾನದ ಆಶಯಗಳನ್ನು ಕೊಂಡೊಯ್ಯುವ ಪ್ರಯತ್ನವಾಗಬೇಕು. ಇಂತಹ ಪರಿಸ್ಥಿತಿ ವಿರೋಧಿಸುವ ಶಕ್ತಿಯಾಗಿ ನಾವು ಬೆಳೆಯಬೇಕಿದೆ. ಸರ್ಕಾರಿ
ಇದನ್ನೂ ಓದಿ: ನಮ್ಮೊಳಗಿನ ಅಂಬೇಡ್ಕರ್ ಆಳಕ್ಕಿಳಿಯುವುದು ಎಂದು?
ದೇಶದಲ್ಲಿ ಮಹಿಳೆಯರ ಸಮಾನತೆ ಅವರ ಮೇಲೆ ನಡೆಯುವ ದೌರ್ಜನ್ಯಗಳನ್ನು ತಡೆಯುವಲ್ಲಿ ಸಂವಿಧಾನದ ಹಕ್ಕುಗಳಾಗಿ ಪ್ರತಿಪಾದಿಸಿರುವ ಯಾರಾದರೂ ನಾಯಕರಿದ್ದರೆ ಅದು ಡಾ. ಬಿ.ಆರ್ ಅಂಬೇಡ್ಕರ್ ಒಬ್ಬರು ಮಾತ್ರ. ಇಂದು ನಾವೆಲ್ಲ ದೇಶದ ಮಹಾನ್ ನಾಯಕರ ಚರಿತ್ರೆಗಳನ್ನು ಓದಬೇಕಿದೆ. ಒಂದೇ ಕಾಲಘಟ್ಟದಲ್ಲಿ ಸಮಾಜ ಸುಧಾರಣೆಗಾಗಿ ಅನೇಕರು ಯಾಕೆ ಹುಟ್ಟಿ ಬಂದಿದ್ದಾರೆ? ಇವರುಗಳ ಚರಿತ್ರೆ ಓದದೆ ಇದ್ದರೆ ಭವಿಷ್ಯ ನಮ್ಮ ಮುಂದಿನ ಪೀಳಿಗೆಯನ್ನು ಉಳಿಸಿಕೊಳ್ಳಲು ನಾವು ಅಸಮರ್ತರಾಗುತ್ತೇವೆ. ಅಂಬೇಡ್ಕರ್ ಅವರ ವೈಚಾರಿಕ ಚಿಂತನೆಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ಹೇಳಿದರು. ಸರ್ಕಾರಿ
ಎಸ್ ಎಫ್ ಐ ರಾಷ್ಟ್ರೀಯ ಉಪಾಧ್ಯಕ್ಷರಾದ ಡಾ. ನಿತೀಶ್ ನಾರಾಯಣ್ ಅವರು ಡಾ. ಬಿ.ಆರ್ ಅಂಬೇಡ್ಕರ್ ಅವರು ಅಸಮಾನ್ಯ ಸಾಮಾಜಿಕ ಹೋರಾಟಗಳನ್ನು ರೂಪಿಸುವಲ್ಲಿ ಮತ್ತು ಕ್ರಾಂತಿಕಾರಿ ಚಿಂತನೆಗಳನ್ನ ಬಿತ್ತುವಲ್ಲಿ ದೇಶ ಕಂಡ ಧೀಮಂತ ನಾಯಕ. ಇಂದು ನಮ್ಮೆಲ್ಲ ಬದುಕಿನ ಪ್ರಶ್ನೆಗಳನ್ನು ಅವರು ಹುಟ್ಟು ಹಾಕಿದ್ದಾರೆ. ದೇಶದಲ್ಲಿರುವ ಕೋಮು ಶಕ್ತಿಗಳಿಗೆ ಸಂವಿಧಾನದ ಮೂಲಕ ಉತ್ತರವನ್ನು ನೀಡಿದ್ದಾರೆ. ಚರಿತ್ರೆ ಅವರನ್ನು ಎಂದೂ ಕೂಡ ಮರೆಯುವುದಿಲ್ಲ. ಹಾಗಾಗಿ ನಮ್ಮ ಸಂವಿಧಾನದ ಪ್ರಿಯಾಂಬಲ್ ನಲ್ಲಿ ‘ನಾವು’ ಎಂದು ಬರೆದುಕೊಂಡಿದ್ದೇವೆ. We are the people ಅಂದರೆ ‘ನಾವು’ ಎನ್ನುವುದು ಅರ್ಥಮಾಡಿಕೊಳ್ಳಬೇಕಿದೆ.
ಈ ಸಮಾಜದಲ್ಲಿ ನಾವು ಎನ್ನುವುದು ಕೇವಲ ರೈತನಾಗಿ ಅಲ್ಲ, ನಾವು ಎನ್ನುವುದು ಕೇವಲ ಬಂಡವಾಳಿಗನಾಗಿ ಅಲ್ಲ, ನಾವು ಎನ್ನುವುದು ಕೇವಲ ಕಾರ್ಪೊರೇಟ್ ವಲಯದ ಉದ್ಯಮಗಳಾಗಿ ಅಲ್ಲ, ನಾವು ಎನ್ನುವುದು ಕೇವಲ ವಿದ್ಯಾರ್ಥಿಯಾಗಿ, ಅಲ್ಲ ನಾವು ಎನ್ನುವುದು ಈ ದೇಶದ ಎಲ್ಲಾ ಪ್ರೆಜೆಗಳು. ಹಾಗಾಗಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಪ್ರತಿಪಾದಿಸಿದ ಚಿಂತನೆ ಎಲ್ಲರಿಗೂ ಸಮಾನವಾದ ಹಕ್ಕು ದೊರೆಯುವ, ಎಲ್ಲರಿಗೂ ಸಮಾನವಾದ ವೋಟಿನ ಹಕ್ಕನ್ನು ಸಂವಿಧಾನದ ಮೂಲಕ ನೀಡಿದ್ದಾರೆ. ಈ ದೇಶಕ್ಕೆ ಕ್ರಾಂತಿದಾಯಕ ಬದಲಾವಣೆಯನ್ನು ತಂದವರು ಅವರಾಗಿದ್ದು, ಈ ದೇಶದ ಭವಿಷ್ಯವನ್ನು ವಿದ್ಯಾರ್ಥಿಗಳು ಕಟ್ಟಬೇಕಿದೆ.
ಈ ದೇಶದಲ್ಲಿ ಎಲ್ಲರಿಗೂ ಕೂಡ ಸಮಾನ ಅವಕಾಶಗಳು ನಮ್ಮ ಸಂವಿಧಾನದ ಆಶಯ ಸಹೋದರತೆ, ಭ್ರಾತೃತ್ವ, ಸಮಾನತೆ, ನ್ಯಾಯ, ಆರ್ಥಿಕ, ಸಾಮಾಜಿಕ ಎಲ್ಲವನ್ನು ಕೂಡ ನಾವು ಪಡೆಯಬೇಕಿದೆ. ಮತ್ತು ಹೋರಾಟದ ಮೂಲಕ ಬದಲಾವಣೆಯನ್ನು ತರಬೇಕಿದೆ. ಸಮುದಾಯಗಳನ್ನು ಮುಂಚೂಣಿಗೆ ತರಬೇಕಾಗಿದೆ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಚಳವಳಿಗಳು ಬೆಳೆದು ಬರಬೇಕಾಗಿದೆ. ಭಾರತ ವಿದ್ಯಾರ್ಥಿ ಫೆಡರೇಶನ್ ಶೈಕ್ಷಣಿಕವಾಗಿ ಹೋರಾಟಗಳನ್ನು ಕೈಗೆತ್ತಿಕೊಳ್ಳುತ್ತಿದೆ.
ನಾವು ವಿದ್ಯಾರ್ಥಿಗಳನ್ನು ವೈಜ್ಞಾನಿಕ ದೃಷ್ಟಿಕೋನದಲ್ಲಿ ನಡೆಸುವುದೆಂದರೆ ದೇಶವನ್ನು ವೈಜ್ಞಾನಿಕ ದೃಷ್ಟಿಕೋನದಲ್ಲಿ ಬೆಳೆಸಿದಂತೆ ಸರಿ. ಅಂಬೇಡ್ಕರ್ ರವರು ಅಂದು ಯಾವುದೋ ಪುರಾಣಗಳನ್ನು ಆಧರಿಸಿ ಅಥವಾ ಮೌಡ್ಯತೆ ಆದರಿಸಿ, ಯಾರಿಗೂ ಕಾಣದ ನ್ಯಾಯ ನೀತಿಗಳನ್ನು ಹೇಳಿದವರಲ್ಲ. ನಮ್ಮ ನಿಮ್ಮಲ್ಲಿ ಇರುವ ಜನತೆಯ ಸಮಾನತೆಯನ್ನು ನಾವು ಕಂಡುಕೊಳ್ಳಬೇಕಾಗಿದೆ. ಹಾಗಾಗಿ ನಾವೆಲ್ಲರೂ ಸಮಾಜದ ಬದಲಾವಣೆಯನ್ನು ತರುವಲ್ಲಿ ಮುಂಚುಣಿಯಲ್ಲಿ ಇರಬೇಕಾಗುತ್ತದೆ. ಅಂಬೇಡ್ಕರ್ ಅವರು ಪ್ರತಿಪಾದಿಸಿ ಸಾಮಾಜಿಕ ಹೋರಾಟಗಳನ್ನು ಗಟ್ಟಿಗಳಿಸಬೇಕಿದೆ ಎಂದು ಹೇಳಿದರು.
ಇಂದು ಸರ್ಕಾರಿ ಕಲಾ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ನೀಡುವ ಅವಕಾಶ ನನಗೆ ಸಿಕ್ಕಿದೆ. ಪ್ರಜಾಪ್ರಭುತ್ವದ ಉಳಿವಿಗಾಗಿ ವಿದ್ಯಾರ್ಥಿಗಳ ಪಾತ್ರ ಎನ್ನುವ ಪ್ರಬಂಧ ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳು ವಿಜೇತರಗಿರುವುದು ಬಹಳ ಖುಷಿ ತಂದಿದೆ. ಹಾಗೆ ಭಾಷಣ ಸ್ಪರ್ಧೆ ಡಾ.ಬಿ.ಆರ್ ಅಂಬೇಡ್ಕರ್ ಅವರು ಪ್ರತಿಪಾದಿಸಿದ ಸಾಮಾಜಿಕ ನ್ಯಾಯ ವಿಷಯದಲ್ಲಿ ಭಾಷಣ ಮಾಡಿದ ವಿದ್ಯಾರ್ಥಿಗಳಿಗೆ ನಾವು ಇವತ್ತು ಬಹುಮಾನವನ್ನು ಕೊಡುತಿದ್ದೇವೆ ಅವರು ಮಂದಿನ ದಿನದಲ್ಲಿ ದೇಶ ಕಟ್ಟುವ ಕೆಲಸ ಮಾಡಬೇಕು.
ಕಾಲೇಜಿನ ಪ್ರಾಂಶುಪಾಲರಾದ ಡಾ.ಪಿ.ಟಿ ಶ್ರೀನಿವಾಸ್ ನಾಯಕ ಅವರು ನಮ್ಮ ಕಾಲೇಜು ಯಾವತ್ತೂ ಕೂಡ ಇಂತಹ ಚಳುವಳಿಗಳನ್ನು ಹುಟ್ಟುಹಾಕಿದೆ. ಬಾಬ ಸಾಹೇಬ್ ಅಂಬೇಡ್ಕರ್ ಅವರಂತಹ ಸಾಮಾಜಿಕ ನೆಲೆಯೇ ವಿದ್ಯಾರ್ಥಿಗಳನ್ನು ನಾವು ಕೊಂಡೊಯ್ಯತ್ತಿದ್ದೇವೆ. ಅದು ಯಾವತ್ತೂ ಕೂಡ ಹಿಂದೆ ನಿಲ್ಲಲಾರದು. ಹಾಗಾಗಿ ದೇಶದ ಐಕ್ಯತೆಯನ್ನು ಕಾಪಾಡಲು ನಾವು ವಿದ್ಯಾರ್ಥಿಗಳನ್ನು ಸಿದ್ಧಗೊಳಿಸಬೇಕಾಗಿದೆ.
ಈ ಎಲ್ಲಾ ಅಂಶಗಳು ನಮ್ಮ ಮಕ್ಕಳು ಅನುಸರಿಸುವ ಪ್ರಯತ್ನ ಮಾಡುತ್ತಾರೆ. ಡಾ. ಬಿ.ಆರ್ ಅಂಬೇಡ್ಕರ್ ಅವರು ಹಾಗೆ ಕೊಟ್ಟ ಸಾಮಾಜಿಕ ನ್ಯಾಯ, ಪ್ರಜಾಪ್ರಭುತ್ವದ ನೆಲೆಯಲ್ಲಿ ನಾವು ಸಂಘಟಿತರಾಗುವ ಪ್ರಯತ್ನ ಹಿಂದಿನಿಂದಲೂ ಮಾಡುತ್ತಿದ್ದೇವೆ. ಆದರೆ ಇಂದು ಸಾಂದ್ರಗೊಳ್ಳದೆ ದೃವೀಕರಣಗೊಳ್ಳುತ್ತಿದೆ. ಅದರ ಪ್ರಬಲತೆಯನ್ನು ನಾವು ಹೆಚ್ಚಿಸುವ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ. ಎಂದು ಹೇಳಿದರು.
ಕಾಲೇಜಿನ ಕನ್ನಡ ವಿಭಾಗದ ಪ್ರಾಧ್ಯಾಪಕರಾದ ಡಾ. ರುದ್ರೇಶ್ ಅದರಂಗಿ ಅವರು ಕಾರ್ಯಕ್ರಮವನ್ನು ನಿರ್ವಹಿಸಿದರು ಪ್ರಾಧ್ಯಾಪಕರಾದ ಡಾಕ್ಟರ್ ರಾಜೇಶ್ ಅವರು ಸ್ವಾಗತಿಸಿದರು. ಪ್ರಬಂಧ ಮತ್ತು ಭಾಷಣ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಎಸ್ಎಫ್ಐ ರಾಷ್ಟ್ರೀಯ ಉಪಾಧ್ಯಕ್ಷರಾದ ಡಾ. ನಿತೀಶ್ ನಾರಾಯಣ್ ಅವರು ಬಹುಮಾನ ಮತ್ತು ಪ್ರಶಸ್ತಿಗಳನ್ನು ನೀಡಿದರು.
ಎಸ್ ಎಫ್ ಐ ರಾಜ್ಯ ಕಾರ್ಯದರ್ಶಿ ವಿಜಯಕುಮಾರ್ ಎಸ್ ಎಫ್ ರಾಜ್ಯ ಉಪಾಧ್ಯಕ್ಷರಾದ ಡಾ.ದೊಡ್ಡಬಸವರಾಜ್, ಬೆಂಗಳೂರು ಎಸ್.ಎಫ್.ಐ ಮುಖಂಡರಾದ ಪ್ರಭು, ವೆಂಕಟೇಶ್ ಮತ್ತು ಕಾಲೇಜಿನ ವಿದ್ಯಾರ್ಥಿಯಾದ ವಿಷ್ಣು ಕಶಪ್ಪ, ಕೀರ್ತನ ಪ್ರೀತಿ ಸೇರಿದಂತೆ ಕಾಲೇಜಿನ ಎಲ್ಲಾ ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಇದನ್ನೂ ನೋಡಿ: ಅಂಬೇಡ್ಕರ್ ಜಯಂತಿ ಕಾರ್ಯಕ್ರಮದ ನೇರ ಪ್ರಸಾರ