ಸಂಕಷ್ಟದ ಸ್ಥಿತಿಯಲ್ಲಿ 6ನೇ ವೇತನ ಜಾರಿ ಸಾಧ್ಯವಲ್ಲ – ಸಿಎಂ ಯಡಿಯೂರಪ್ಪ

6ನೇ  ವೇತನ ಜಾರಿ ವಿಚಾರ ಸಧ್ಯಕ್ಕೆ ಕೈ ಬಿಡಿ, ಬೇಡಿಕೆಗಳನ್ನು ಈಡೇರಿಸುತ್ತೇವೆ,  ನಿಮ್ಮ ಕಷ್ಟಕ್ಕೆ ಸ್ಪಂದಿಸುತ್ತೇವೆ,  ಸಾರ್ವಜನಿಕರ ಕಷ್ಟಕ್ಕೆ ಸ್ಪಂದಿಸಿ ಬಸ್‌ ಓಡಿಸಲು ಆರಂಭಿಸಿ – ಸಿಎಂ ಮನವಿ 

ಬೆಂಗಳೂರು: ಈಗಿರುವ ಪರಿಸ್ಥಿತಿಯಲ್ಲಿ ಯಾವುದೇ ಕಾರಣಕ್ಕೂ ಆರನೇ ವೇತನ ಆಯೋಗ ಶಿಫಾರಸು ಜಾರಿ ಸಾಧ್ಯವೇ ಇಲ್ಲ ಅಂತಾ ಸಿಎಂ ಬಿಎಸ್​ ಯಡಿಯೂರಪ್ಪ ಮತ್ತೆ ಪುನರುಚ್ಚರಿಸಿದ್ದಾರೆ.

ಈ ಕುರಿತು ಸರಣಿ ಟ್ವೀಟ್‌ ಮಾಡಿರುವ ಸಿಎಂ ಯಾರದ್ದೋ ಮಾತು ಕೇಳಿ ನೀವು ಹಠಕ್ಕೆ ಬೀಳಬೇಡಿ. ಕಳೆದ ಒಂದು ವರ್ಷದಿಂದ ಕೊರೊನಾ ಸಮಸ್ಯೆ ಇರುವಾಗ ನಿಮ್ಮ ಇಲಾಖೆಯಲ್ಲಿ ಹಣ ಇಲ್ಲದಿದ್ದರೂ 2,300 ಕೋಟಿಯನ್ನ ಸರ್ಕಾರದ ಬೊಕ್ಕಸಿದಿಂದ ನಿಮ್ಮ ಸಂಬಳಕ್ಕಾಗಿ ನೀಡಿದ್ದೇವೆ. ಶೇಕಡಾ ಆದಾಯದಲ್ಲಿ 85 ಭಾಗ ಸರ್ಕಾರಿ ನೌಕರರ ಸಂಬಳಕ್ಕಾಗಿ, ಪೆನ್ಷನ್​​ಗಾಗಿ ಹಾಗೂ ಇತರೆ ವೆಚ್ಚಗಳಿಗೆ ಬಳಸಲಾಗುತ್ತಿದೆ ಎಂದಿದ್ದಾರೆ.

ಇಂತಹ ಸಂದರ್ಭದಲ್ಲಿ ಸಾರಿಗೆ ನೌಕರರು ಯಾವುದೇ ಕಾರಣಕ್ಕೂ ಹಠಕ್ಕೆ ಬೀಳಬಾರು. 9 ಬೇಡಿಕೆಯಲ್ಲಿ 8 ಬೇಡಿಕೆಯನ್ನ ಈಡೇರಿಸಿದ್ದೇನೆ. ನಿಮ್ಮೆಲ್ಲಾ ಬೇಡಿಕೆಯನ್ನ ಈಡೇರಿಸೋದು ನಮ್ಮ ಕರ್ತವ್ಯ.
ಇವತ್ತಿನಿಂದ ನಿಮ್ಮ ಬಸ್​ಗಳನ್ನ ಓಡಿಸಬೇಕು. ಸಾರಿಗೆ ಇಲಾಖೆ ಇರೋದು ಸಾರ್ವಜನಿಕರ ಸೇವೆ ಮಾಡೋಕೆ. ಸಾರ್ವಜನಿಕರು ಸಂಕಷ್ಟದಲ್ಲಿರುವ ಸಂದರ್ಭದಲ್ಲಿ ನೀವೇ ಅರ್ಥ ಮಾಡಿಕೊಳ್ಳಬೇಕು.

ನಮ್ಮ ಸರ್ಕಾರದ ಹಣಕಾಸು ಪರಿಸ್ಥಿತಿಯನ್ನ ಅರ್ಥ ಮಾಡಿಕೊಳ್ಳಬೇಕು. ಯಾವ ಕಾರಣಕ್ಕೂ 6ನೇ ವೇತನ ಆಯೋಗ ಕೊಡಲು ಇವತ್ತಿನ ಪರಿಸ್ಥಿತಿಯಲ್ಲಿ ಸಾಧ್ಯವೇ ಇಲ್ಲ. ಈ ಬಗ್ಗೆ ನಾನು ಮತ್ತೊಮ್ಮೆ ಸ್ಪಷ್ಟಪಡಿಸುತ್ತೇನೆ. ಇದನ್ನ ನೀವು ಅರ್ಥ ಮಾಡಿಕೊಳ್ಳಬೇಕು. ಹೀಗೇ ಹೇಳಿದ್ದರೂ ನೀವು ಮತ್ತೆ ಮತ್ತೆ ಹಠಕ್ಕೆ ಬೀಳಬಾರದು ಎಂದು ಮನವಿ ಮಾಡಿಕೊಂಡರು.

Donate Janashakthi Media

Leave a Reply

Your email address will not be published. Required fields are marked *