87 ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ವೈದ್ಯ – 14 ವರ್ಷದಿಂದ 67 ವರ್ಷಗಳ ವಯಸ್ಸಿನವರ ಮೇಲೂ ಅತ್ಯಾಚಾರ

ನಾರ್ವೆ : ವೈದ್ಯನೊಬ್ಬ 87 ಮಹಿಳೆಯರ ಮೇಲೆ ಅತ್ಯಾಚಾರ ಎಸಗಿ ಅವರ ವೀಡಿಯೊಗಳನ್ನು ಮಾಡಿರುವಂತ ಅಮಾನವೀಯ ಕೃತ್ಯವೊಂದು, ನಾರ್ವೆಯ ಸಣ್ಣ ಹಳ್ಳಿಯೊಂದರಲ್ಲಿ ನಡೆದಿದೆ. ದೌರ್ಜನ್ಯ 

55 ವರ್ಷದ ಅರ್ನಬ್, ಮಾಜಿ ವೈದ್ಯನ ಮೇಲೆ 87 ಮಹಿಳೆಯರ ಮೇಲೆ ಅತ್ಯಾಚಾರ ಎಸಗಿ ಅವರ ವೀಡಿಯೊಗಳನ್ನು ಮಾಡಿದ ಆರೋಪ ಕೇಳಿಬಂದಿದೆ. ಈ ಪ್ರಕರಣವು ನಾರ್ವೆಯ ಇತಿಹಾಸದಲ್ಲಿ ಅತಿ ದೊಡ್ಡ ಲೈಂಗಿಕ ದೌರ್ಜನ್ಯ ಹಗರಣ ಎಂದು ಹೇಳಲಾಗುತ್ತದೆ.

14 ವರ್ಷದಿಂದ 67 ವರ್ಷಗಳ ವಯಸ್ಸಿನವರ ಮೇಲೂ ಅತ್ಯಾಚಾರ ಎಸಗಿರುವುದಾಗಿ ತಿಳಿದುಬಂದಿದೆ. 20 ವರ್ಷಗಳಿಂದ ವೈದ್ಯ ಈ ಹೇಯ ಕೃತ್ಯಗಳನ್ನು ನಡೆಸುತ್ತಾ ಬಂದಿದ್ದಾನೆ. ಪ್ರಾಸಿಕ್ಯೂಷನ್ ಪ್ರಕಾರ,  87 ಮಹಿಳೆಯರಲ್ಲಿ ಇಬ್ಬರು ಅಪ್ರಾಪ್ತರಾಗಿದ್ದರು ಎನ್ನಲಾಗಿದೆ.

ಇದನ್ನೂ ಓದಿ : ಉತ್ತರ ಪ್ರದೇಶ| ಹಿಂಸಾಚಾರದಲ್ಲಿ ಮೃತಪಟ್ಟವರ ಸಂಖ್ಯೆ ನಾಲ್ಕಕ್ಕೆ ಏರಿಕೆ; ಇಂಟರ್ನೆಟ್ ಸ್ಥಗಿತ

ವೈದ್ಯರು ತಮ್ಮ ಸ್ಥಾನವನ್ನು ದುರುಪಯೋಗಪಡಿಸಿಕೊಂಡು ಇದೆಲ್ಲವನ್ನೂ ಮಾಡಿದ್ದಾರೆ.ತನಿಖೆ ವೇಳೆ ಮೂರು ದುರ್ನಡತೆ ಮತ್ತು 35 ಕಚೇರಿ ದುರುಪಯೋಗ ಪ್ರಕರಣಗಳಲ್ಲಿ  ಬೇಯ್ ತಪ್ಪೋಪ್ಪಿಕೊಂಡಿದ್ದಾರೆ. ಪೊಲೀಸರು ವೈದ್ಯರಿಂದ 6000 ಗಂಟೆಗಳ ವೀಡಿಯೊ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಪ್ರಕರಣ ನಾರ್ವೆಯನ್ನು ಬೆಚ್ಚಿ ಬೀಳಿಸಿದೆ.

ಯಾವುದೇ ವೈದ್ಯಕೀಯ ಕಾರಣವಿಲ್ಲದೆ ವೈದ್ಯರು ಸಂತ್ರಸ್ತರ ಖಾಸಗಿ ಭಾಗಗಳಲ್ಲಿ ‘ಡಿಯೋಡರೆಂಟ್’, ‘ಬಾಟಲ್’ ಮತ್ತು ಇತರ ಸಿಲಿಂಡರ್ ಆಕಾರದ ವಸ್ತುಗಳನ್ನು ಇರಿಸಿ ಕ್ರೌಯ್ರ ಮೆರೆದಿದ್ದಾರೆ ಎಂದು ತನಿಖೆ ವೇಳೆ ತಿಳಿದು ಬಂದಿದೆ. ಇದರಿಂದ ನಾನು ನೋವನ್ನು ಅನುಭವಿಸಿದೆ ಅಂತ ಮಹಿಳೆಯೊಬ್ಬರು ಹೇಳಿಕೊಂಡಿದ್ದಾರೆ. ಫ್ರಾಸ್ಮಾ ಎಂಬ ಸಣ್ಣ ಹಳ್ಳಿಯಲ್ಲಿ ಬಾಯಿ ಗೌರವಾನ್ವಿತ ವೈದ್ಯರೆಂದು ಹೆಸರಾಗಿದ್ದ ಈತನ ಹೇಯ ಕೃತ್ಯ ಕೇಳಿ ಗ್ರಾಮಸ್ಥರು ಬೆಚ್ಚಿಬಿದ್ದಿದ್ದಾರೆ.

ಆಗಸ್ಟ್ 2022 ರಲ್ಲಿ, ಆರೋಗ್ಯ ಅಧಿಕಾರಿಗಳ ದೂರಿನ ಮೇರೆಗೆ ಪೊಲೀಸರು ತನಿಖೆಯನ್ನು ಪ್ರಾರಂಭಿಸಿದರು. ಬೇಯ್ ಔಪಚಾರಿಕವಾಗಿ 2023 ರಲ್ಲಿ ಆರೋಪ ಹೊರಿಸಲಾಯಿತು ಆದರೆ ಬಂಧಿಸಲಾಗಿಲ್ಲ. ವಿಷಯದ ಗಂಭೀರತೆಯ ಹೊರತಾಗಿಯೂ, ಬಂಧಿಸಲು ಯಾವುದೇ ಕಾರಣವಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ನೋಡಿ : ಮರಕುಂಬಿ ಪ್ರಕರಣ ; 97 ಮಂದಿಗೆ ಜಾಮೀನು | ಜಾಮೀನನ್ನು ಸಂಭ್ರಮಸಲು ಸಿದ್ದತೆ ನಡೆದಿತ್ತು – ಮರಕುಂಬಿ ಬಸವರಾಜ

Donate Janashakthi Media

Leave a Reply

Your email address will not be published. Required fields are marked *