-ಜಲಾಲುದ್ದೀನ್ ರೂಮಿ, ಕನ್ನಡಕ್ಕೆ : ಭಾವನ ಟಿ.
ಒಬ್ಬ ಪ್ರೇಮಿ ತನ್ನ ಪ್ರಿಯತಮೆಗೆ ಕೇಳಿದ,
ನೀನು ನನ್ನನ್ನು ಪ್ರೀತಿಸುವುದಕ್ಕಿಂತ ಹೆಚ್ಚಾಗಿ ನಿನ್ನನ್ನು ಪ್ರೀತಿಸುತ್ತಿಯಾ?
ಪ್ರೇಯಸಿ ಪ್ರತಿಕ್ರಿಯಿಸಿದಳು,
ನಾನು ನನಗಾಗಿ ಸತ್ತಿದ್ದೇನೆ ಮತ್ತು ನಿನಗಾಗಿಯೇ ಬದುಕುತ್ತಿದ್ದೇನೆ.
ನಾನು ನನ್ನಿಂದ ಕಣ್ಮರೆಯಾಗಿದ್ದೇನೆ
ಮತ್ತು ನನ್ನೆಲ್ಲಾ ಗುಣಲಕ್ಷಣಗಳಿಂದ ಅದೃಶ್ಯವಾಗಿದ್ದೇನೆ.
ನಾನು ಕೇವಲ ನಿನಗಾಗಿ ಮಾತ್ರವೇ ಹಾಜರಿದ್ದೇನೆ.
ನಾನು ನನ್ನೆಲ್ಲಾ ಕಲಿಕೆಗಳನ್ನು ಮರೆತಿದ್ದೇನೆ,
ಆದರೆ ನಿನ್ನನ್ನು ಅರಿತುಕೊಳ್ಳುವ ಮೂಲಕ ನಾನು ವಿದ್ವಾಂಸೆಯಾಗಿದ್ದೇನೆ.
ನಾನು ನನ್ನೆಲ್ಲಾ ಬಲವನ್ನು ಕಳೆದುಕೊಂಡಿದ್ದೇನೆ,
ಆದರೆ ನಿನ್ನೊಳಗಿನ ಶಕ್ತಿಯಿಂದಾಗಿ ನಾನು ಸಮರ್ಥಳಾಗಿದ್ದೇನೆ.
ನಾನು ನನ್ನನ್ನು ಪ್ರೀತಿಸಿದರೆ
ನಾನು ನಿನ್ನನ್ನು ಪ್ರೀತಿಸುತ್ತೇನೆ.
ನಾನು ನಿನ್ನನ್ನು ಪ್ರೀತಿಸಿದರೆ
ನಾನು ನನ್ನನ್ನೇ ಪ್ರೀತಿಸಿಕೊಳ್ಳುತ್ತೇನೆ.