ವಿಶೇಷ ವರದಿ: ಸಂಧ್ಯಾಸೊರಬ
ಜನಶಕ್ತಿ ಮೀಡಿಯಾ ಈ ಹಿಂದೆಯೇ ಮಾಜಿ ಸಚಿವ ಜನಾರ್ಧನರೆಡ್ಡಿ ಬಿಜೆಪಿ ಮರುಸೇರ್ಪಡೆಯಾಗುತ್ತಿದ್ದಂತೆ ಈ ಕುರಿತು ವಿಶೇಷ ವರದಿಯೊಂದನ್ನು ಪ್ರಕಟಮಾಡಿತ್ತು. ಜನಾರ್ಧನರೆಡ್ಡಿ ಮತ್ತೆ ಕಮಲವನ್ನು ಹಿಡಿಯುವುದರಿಂದ ನಿಜಕ್ಕೂ ಯಾರಿಗೆ ಲಾಭ ಆಗಲಿದೆ ಅನ್ನೋದನ್ನ ನಿಖರವಾಗಿ ಹೇಳಿತ್ತು. ಅದರಂತೆ ಬಳ್ಳಾರಿಯ ಲೋಕಸಭಾ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಕಾಂಗ್ರೆಸ್‌ನ ತುಕಾರಾಮ್‌ರಿಂದ ಪರಾಜಿತಗೊಂಡಿರುವ ರೆಡ್ಡಿಯ ಒನ್ ಸಪಾನ್ ಎ ಟೈಮ್‌ನ ಗಳಸ್ಯಗಂಠಸ್ಯ ದೋಸ್ತ್ ಶ್ರೀರಾಮುಲು. ಶ್ರೀರಾಮುಲು
ಬಿಜೆಪಿಗೆ ಲಾಭವಾಗಲಿದೆ ಎಂಬ ಮೇಲ್ನೋಟದ ರೆಡ್ಡಿ ನೀಡಿದ್ದ ಕಾರಣಕ್ಕೆ ಅವರಿವರನ್ನೆಲ್ಲಾ ಎದುರುಹಾಕಿಕೊಂಡು ಕೊನೆಗೆ ಹೇಗೋ ಡ್ಯಾಮೇಜ್ ಕಂಟ್ರೋಲ್ ಮಾಡಿಕೊಂಡು ಬಿಜೆಪಿಯ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಜನಾರ್ಧನರೆಡ್ಡಿಯನ್ನು ಬಿಜೆಪಿಗೆ ಎಲ್ಲರ ಒಲ್ಲದ ಮನಸಿನ ನಡುವೆಯೇ ಅದುಹೇಗೋ ಕರೆದುಕೊಂಡು ಬಂದೇಬಿಟ್ಟಿದರು. ಪರಿಣಾಮ ಅತ್ತ ಕೊಪ್ಪಳವನ್ನು ಗೆಲ್ಲಿಸಿಕೊಡುತ್ತೇನೆ ಎಂದಿದ್ದ ರೆಡ್ಡಿಯ ಮಾತನ್ನು ಕೇಳಿದ್ದ ಬಿಜೆಪಿಯ ರಾಜ್ಯಾಧ್ಯಕ್ಷರಿಗೆ ಬಳ್ಳಾರಿಯೂ ಕೈತಪ್ಪುವಂತಾಯಿತು. ಶ್ರೀರಾಮುಲು
ಇದನ್ನೂ ಓದಿ: ಸುರಪುರ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಮತ್ತೆ ಕಾಂಗ್ರೆಸ್
ಅದಕ್ಕೆ ಹೇಳಿದ್ದು ಇದರಿಂದ ನಿಜಕ್ಕೂ ಯಾರಿಗೆ ಲಾಭವಾಗಲಿದೆ ಅಂತ. ಬಿಜೆಪಿ ಜೊತೆ ಜನಾರ್ಧನರೆಡ್ಡಿಯೇ ತನ್ನ ವೈಯಕ್ತಿಕ ರಾಜಕೀಯ ಭವಿಷ್ಯದ ಇತಿಹಾಸಕ್ಕಾಗಿ ಹುಟ್ಟಿಸಿಕೊಂಡಿದ್ದ ಕೆಆರ್‌ಪಿಪಿ ಪಕ್ಷವನ್ನು ಬಿಜೆಪಿ ಜೊತೆ ವಿಲೀನ ಮಾಡಿಕೊಂಡಿದ್ದೇ ಬಳ್ಳಾರಿ ಮತ್ತು ಕೊಪ್ಪಳದಲ್ಲಿ ಬಿಜೆಪಿಯ ಎಡವಿಗೆ ತಪ್ಪಾಯಿತು ಎನ್ನುತ್ತವೆ ಬಲ್ಲಮೂಲಗಳು.
ಕಲ್ಯಾಣ ಕರ್ನಾಟಕ ಭಾಗದಲ್ಲಿ ತಾನೊಬ್ಬ ದೊಡ್ಡ ನಾಯಕ ತನ್ನನ್ನು ಕೈಬಿಟ್ಟಲ್ಲಿ ಎಲ್ಲಾ ಪಕ್ಷಗಳು ಅಧೋಗತಿಗೆ ಹೋಗುತ್ತವೆ ಎಂದು ಹೇಳುತ್ತಲೇ ಬಂದಿದ್ದ ಜನಾರ್ಧನರೆಡ್ಡಿ .ರೆಡ್ಡಿ ಜೊತೆ ಬಿಜೆಪಿಗೆ ಬಂದಿದ್ದೇ ಬಂದಿದ್ದೇ ಸುಲಭವಾಗಿ ಬಿಜೆಪಿ ಗೆಲ್ಲಬಹುದಾಗಿದ್ದ ಕೊಪ್ಪಳ ಲೋಕಸಭಾವೂ ಕೈ ಪಾಲಾಗುವುದರ ಜೊತೆ ಬಳ್ಳಾರಿಯಲ್ಲೂ ಕಮಲ ಮುದುಡಿತು. ಇಲ್ಲಿ ರೆಡ್ಡಿ ಹೇಳಿದ್ದ ಭಾರೀಭಾರೀ ಸುಳ್ಳುಗಳ ಭರವಸೆಗಳೇ ಬಿಜೆಪಿಗೆ ಮುಳುವಾಯಿತು.
ದರ್ಗಾಕ್ಕೆ ದುಡ್ಡುಕೊಡುತ್ತೇನೆ. ರಾಮಮಂದಿರಕ್ಕೆ ಅಷ್ಟುಇಷ್ಟು ಕೋಟಿ ಕೊಡುತ್ತೇನೆ. ಜಾತಿವಾರು ಸಂಘ ಮಾಡಿಕೊಂಡಲ್ಲಿ ಸದಸ್ಯರಿಗೆಲ್ಲಾ ಜಮೀನು ಕೊಡುತ್ತೇನೆ ಎನ್ನುವುದೂ ಸೇರಿದಂತೆ ಸುಳ್ಳಿನ ಸರಮಾಲೆಯಲ್ಲಿ ಜನರನ್ನು ತೇಲುವಂತೆ ಮಾಡಿದ್ದು, ಅತ್ತ ಬಿಜೆಪಿಕಾರ್ಯಕರ್ತರೂ ಇಲ್ಲ, ಕೆಆರ್‌ಪಿಪಿ ಕಾರ್ಯಕರ್ತರೂ ಇಲ್ಲದೇ ಪುಂಖಾನುಪುಂಖವಾಗಿ ಪುಂಗಿದ್ದೇ ಬಂತು ನೋಡಿ, ಬಳ್ಳಾರಿ ಜೊತೆ ಕೊಪ್ಪಳವೂ ಕೈ ಪಾಲಾಯಿತು. ಅದಕ್ಕೆ ಈ ಹಿಂದೆಯೇ ಹೇಳಿದ್ದು, ಜನಾರ್ಧನರೆಡ್ಡಿ ಬಿಜೆಪಿ ಮರುಸೇರ್ಪಡೆ ನಿಜಕ್ಕೂ ಯಾರಿಗೆ ಲಾಭ ಅಂತ?
ಇದನ್ನೂ ನೋಡಿ: ಅಮ್ಮ ಎಂಬ ಭಾವಕ್ಕಿರುವ ಕಸುವು ಅನುಭವಿಸಿಯೇ ಅರಿಯಬೇಕು – ಪ್ರತಾಪ್ ಸಿಂಹJanashakthi Media