ದಿವ್ಯಾ ಹಾಗರಗಿ ಜೈಲುಪಾಲು-ಸರ್ಕಾರಿ ಸ್ಥಾನಮಾನ ಹಿಂಪಡೆಯದ ರಾಜ್ಯ ಬಿಜೆಪಿ ಸರ್ಕಾರ

ಕಲಬುರಗಿ: ಪೊಲೀಸ್‌ ಸಬ್‌ ಇನ್ಸ್‌ಪೆಕ್ಟರ್‌ (ಪಿಎಸ್‌ಐ) ಅಕ್ರಮದಲ್ಲಿ ಬಂಧಿತರಾಗಿರುವ ಬಿಜೆಪಿ ಪಕ್ಷದ ಜಿಲ್ಲಾ ನಾಯಕಿ ದಿವ್ಯಾ ಹಾಗರಗಿ ಅಕ್ರಮದಲ್ಲಿ ಭಾಗಿಯಾಗಿ ಗೆ ನೀಡಲಾಗಿದ್ದ ಸರ್ಕಾರಿ ಹುದ್ದೆಗಳನ್ನು ಮಾತ್ರ ಸರ್ಕಾರ ರದ್ದುಪಡಿಸದೇ ಇರುವುದು ಸಾಕಷ್ಟು ಚರ್ಚೆ ಗ್ರಾಸವಾಗಿದೆ.

ಅಕ್ರಮದಲ್ಲಿ ಭಾಗಿಯಾದ ಸರ್ಕಾರಿ ಉದ್ಯೋಗಿಗಳು ಜೈಲುಪಾಲಾದರೆ ಅವರಿಗೆ ಅಮಾನತ್ತು ಮಾಡುಲಾಗುತ್ತದೆ. ಆದರೆ ಇದು ರಾಜಕೀಯ ಪಕ್ಷಗಳಿಗೆ ಅನ್ವಯವಾಗುತ್ತದಾ? ಅಥವಾ ರಾಜಕೀಯ ಪ್ರೇರಿತವಾಗಿ ನೇಮಕಗೊಂಡ ಹುದ್ದೆಗಳಿಗೂ ಅನ್ವಯವಾಗುತ್ತದಾ? ಎಂಬುದು ಪ್ರಶ್ನೆಯಾಗಿದೆ.

ಅಥವಾ ಆಕೆಗೆ ಕೊಟ್ಟಿರುವ ಸ್ಥಾನ-ಮಾನಗಳನ್ನು ಹಿಂಪಡೆದಲ್ಲಿ ಅಥವಾ ಬದಲಾವಣೆಗಳು ಕಂಡುಬಂದಲ್ಲಿ ರಾಜ್ಯ ಪ್ರಭಾವಿ ನಾಯಕರ ಹೆಸರುಗಳು ಹೊರ ಬರುತ್ತವೆಯೇ ಎಂಬ ಅನುಮಾನಗಳು ಕಾಡುತ್ತಿವೆ.

545 ಪಿಎಸ್​​ಐ ಹುದ್ದೆಗಳ ನೇಮಕಾತಿ ಅಕ್ರಮದಲ್ಲಿ ಪ್ರಮುಖ ಆರೋಪಿಯಾಗಿ ಬಂಧಿತರಾಗಿರುವ ಬಿಜೆಪಿ ನಾಯಕಿ ದಿವ್ಯಾ ಹಾಗರಗಿ ಅಕ್ರಮ ಬೆಳಕಿಗೆ ಬರುತ್ತಿದ್ದಂತೆಯೇ ನಾಪತ್ತೆಯಾಗಿದ್ದರು ಮತ್ತು ನಂತರದ ಕರ್ನಾಟಕ ಪೊಲೀಸರು ಅವರನ್ನು ಬಂಧಿಸಿ ಈಗಾಗಲೇ ಎರಡು ವಾರಗಳು ಕಳೆದಿದೆ.

ಆದರೆ, ದಿವ್ಯಾ ಹಾಗರಗಿ ಬಂಧವಾಗಿ ಎರಡು ವಾರ ಕಳೆಯುತ್ತಿದ್ದರೂ ಸಹ ಆಕಿಗೆ ನೀಡಿದ್ದ ಹುದ್ದೆಯನ್ನು ಹಿಂಪಡೆಯುವ ಮನಸು ರಾಜ್ಯ ಸರ್ಕಾರಕ್ಕೆ ಇದ್ದಂತಿಲ್ಲ. ದಿಶಾ ಸಮಿತಿ ಸಭೆ ಸದಸ್ಯೆಯಾಗಿ ದಿವ್ಯಾರನ್ನು ರಾಜ್ಯದ ಬಿಜೆಪಿ ಸರ್ಕಾರ ನೇಮಿಸಿತ್ತು. ರಾಜ್ಯ ನರ್ಸಿಂಗ್ ಕೌನ್ಸಿಲ್ ಸದಸ್ಯೆಯಾಗಿಯೂ ದಿವ್ಯಾರನ್ನು ನೇಮಿಸಿತ್ತು. ದಿವ್ಯಾಗೆ ಒಟ್ಟೊಟ್ಟಿಗೆ ನೀಡಿದ್ದ ಎರಡೂ ಸದಸ್ಯತ್ವವನ್ನು ಸರ್ಕಾರ ಹಿಂಪಡೆದಿಲ್ಲ.

ಸೋಜಿಗದ ವಿಷಯೆವೆಂದರೆ ಪ್ರಕರಣದಲ್ಲಿ ಬಂಧಿತರಾದ ಉನ್ನತಮಟ್ಟದ ಅಧಿಕಾರಿಗಳೂ ಸೇರಿದಂತೆ ಹಲವರು ಸರ್ಕಾರಿ ಸೇವೆಯಿಂದ ಅಮಾನತುಗೊಂಡು ಜೈಲಿನಲ್ಲಿ ಕಂಬಿ ಎಣಿಸುತ್ತಿದ್ದಾರೆ. ದಿವ್ಯಾ ಹಾಗರಗಿಗೆ ನೀಡಲಾಗಿರುವ ಸರ್ಕಾರಿ ಸ್ಥಾನಮಾನಗಳು ಮಾತ್ರ ಸುಭದ್ರವಾಗಿದೆ.

ಸಾಮಾನ್ಯವಾಗಿ ಯಾರೇ ಅಗಿದ್ದರೂ ಭ್ರಷ್ಟಾಚಾರದಂತಹ ಗಂಭೀರ ಪ್ರಕರಣಗಳಲ್ಲ ಬಂಧನಕ್ಕೆ ಒಳಗಾದ ಕೂಡಲೇ ಅವರಿಗೆ ಕೊಟ್ಟಿರುವ ಎಲ್ಲಾ ಸ್ಥಾನ- ಮಾನಗಳನ್ನು ರದ್ದು ಮಾಡಲಾಗುತ್ತದೆ. ಅಷ್ಟೇಕೆ ? ಪಿಎಸ್ಐ ಅಕ್ರಮದಲ್ಲಿ ಬಂಧನಕ್ಕೆ ಒಳಗಾಗಿರುವ ಪೊಲೀಸ್ ಅಧಿಕಾರಿಗಳನ್ನು ಸೇವೆಯಿಂದ ಅಮಾನತು ಮಾಡಿ ಇಲಾಖಾ ವಿಚಾರಣೆಗೆ ಆದೇಶಿಸಲಾಗಿದೆ. ಆದರೆ ದಿವ್ಯಾ ಹಾಗರಗಿ ವಿಚಾರದಲ್ಲಿ ಬೇರೆಯದ್ದೇ ಆಗಿದೆ. ಅಧಿಕಾರಿಗಳನ್ನು ಅಮಾನತು ಮಾಡಿರುವ ಸರ್ಕಾರ, ದಿವ್ಯಾ ಹಾಗರಗಿ ವಿಚಾರದಲ್ಲಿ ಮೌನವಾಗಿರುವುದು ಏಕೆ ಎಂದು ರಾಜ್ಯದ ಜನತೆ ಪ್ರಶ್ನಿಸುತ್ತಿದ್ದಾರೆ.

ಇದಲ್ಲದೆ, ಬಿಜೆಪಿ ಪಕ್ಷದ ಪ್ರಾಥಮಿಕ ಸದಸ್ಯತ್ವ ಸ್ಥಾನದಿಂದಲೂ ದಿವ್ಯಾ ಹಾಗರಗಿ ವಜಾಗೊಂಡಿಲ್ಲ.

ಪಿಎಸ್ಐ ನೇಮಕಾತಿ ಪರೀಕ್ಷಾ ಅಕ್ರಮದಲ್ಲಿ ದಿವ್ಯಾ ಹೆಸರು ಬಂದ ಕೂಡಲೇ ಆಕೆ ಬಿಜೆಪಿ ನಾಯಕಿ ಅಲ್ಲ ಎಂದು ಬಿಜೆಪಿ ಕರ್ನಾಟಕದಿಂದ ಪ್ರಕಟಣೆ ನೀಡಲಾಗಿತ್ತು. ಇದರ ಬೆನ್ನಲ್ಲೇ ಗೃಹ ಸಚಿವ ಆರಗ ಜ್ಞಾನೇಂದ್ರ, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಆರೋಗ್ಯ ಸಚಿವ ಸುಧಾಕರ್ ಅವರೊಂದಿಗೆ ದಿವ್ಯಾ ಇರುವ ಚಿತ್ರಗಳು ವೈರಲ್ ಆಗಿದ್ದವು. ಮಾತ್ರವಲ್ಲ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಜತೆಗಿನ ಚಿತ್ರವೂ ವೈರಲ್ ಆಗಿತ್ತು.

Donate Janashakthi Media

Leave a Reply

Your email address will not be published. Required fields are marked *