ಕುಣಿಗಲ್: ಡಿಸೆಂಬರ್ 14ರಂದು ಜಿಲ್ಲಾ ಮಟ್ಟದ ಸಂಘಟನಾ ಕಾರ್ಯಗಾರ

ಕುಣಿಗಲ್‌ :  ಡಿಸೆಂಬರ್ 14ರಂದು ತುಮಕೂರು ಜಿಲ್ಲೆಯ ಕುಣಿಗಲ್ ಪಟ್ಟಣದಲ್ಲಿ ಜಿಲ್ಲಾ ಮಟ್ಟದ ಮುಖಂಡರ ಮತ್ತು ಕಾರ್ಯಕರ್ತರ ಸಂಘಟನಾ ಕಾರ್ಯಗಾರವನ್ನು ಸಂಘಟಿಸಲಾಗಿದೆ ಎಂದು ಡಿಎಚ್‌ಎಸ್‌ನ ರಾಜ್ಯ ಕಾರ್ಯದರ್ಶಿ ಹಾಗೂ ಜಿಲ್ಲಾ ಅಧ್ಯಕ್ಷರು ಆದ ರಾಜು ವೆಂಕಟಪ್ಪ ತಿಳಿಸಿದ್ದಾರೆ.

ಈ ಕಾರ್ಯಗಾರದಲ್ಲಿ ಡಾಕ್ಟರ್ ಬಿ.ಆರ್ .ಅಂಬೇಡ್ಕರ್ ಅವರ ವೈಜ್ಞಾನಿಕ ಚಿಂತನೆಗಳು ದಲಿತರ ವಿಮೋಚನೆಯ ದಾರಿ ವಿಷಯದ ಮೇಲೆ ಡಿಎಚ್‌ಎಸ್‌ ರಾಜ್ಯ ಉಪಾಧ್ಯಕ್ಷ,  ನಾಗರಾಜ್ ನಂಜುಂಡಯ್ಯ ಉಪನ್ಯಾಸ ನೀಡಲಿದ್ದಾರೆ. ದಲಿತ ಹಕ್ಕುಗಳ ಸಮಿತಿಯ ಹೋರಾಟಗಳು ಮತ್ತು ನಾಯಕತ್ವ ಗುಣಗಳ ಬಗ್ಗೆ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್. ರಾಜಣ್ಣ  ಉಪನ್ಯಾಸ ನೀಡಲಿದ್ದಾರೆ.  ಪ.ಜಾತಿ ಮತ್ತು ಪ.ಪಂಗಡ ದೌರ್ಜನ್ಯ ತಡೆ ಕಾಯ್ದೆ, ಪಿ.ಟಿ.ಸಿ.ಎಲ್ ಕಾನೂನು ಅರಿವು ಬಗ್ಗೆ ವಕೀಲರಾದ ಅಶೋಕ್ ಹೆಚ್.ಸಿ ಉಪನ್ಯಾಸ ನೀಡಲಿದ್ದಾರೆ. ಜಿಲ್ಲೆಯಲ್ಲಿ ಸಂಘಟನೆಯನ್ನು ಬಲಿಷ್ಠ ಗೊಳಿಸುವ ಕಾರ್ಯಯೋಜನೆ ಹಾಗೂ ದಲಿತರ ಮೇಲಿನ ದೌರ್ಜನ್ಯ ತಡೆ ಕಾಯ್ದೆಗಳ ಕುರಿತು ಸಂಘಟನಾ ಮುಖಂಡರಲ್ಲಿ ಕಾನೂನು ಅರಿವು ಮೂಡಿಸುವುದು ಈ ಕಾರ್ಯಾಗಾರದ ಉದ್ದೇಶವಿದೆ ಎಂದು ಮುಖಂಡ ರಾಜು ವೆಂಕಟಪ್ಪ ತಿಳಿಸಿದ್ದಾರೆ.

ಇದನ್ನೂ ಓದಿ : ಹಾಲಿ ಬೆಳಗಾವಿ ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಶಾಲಾ ಶಿಕ್ಷಣದ ಸ್ಥಿತಿಗತಿ ಬಗ್ಗೆ ಚರ್ಚೆಗೆ ಒತ್ತಾಯ: ನಿರಂಜನಾರಾಧ್ಯ.ವಿ.ಪಿ

ದಲಿತ ಹಕ್ಕುಗಳ ಸಮಿತಿ ಕರ್ನಾಟಕ( ಡಿಎಚ್‌ಎಸ್) ನ ರಾಜ್ಯ 3 ನೇ ಸಮಾವೇಶದ ಸಂಘಟನಾ ಯೋಜನಾ ನಿರ್ಣಯದಂತೆ ರಾಜ್ಯದ 10 ಜಿಲ್ಲೆಗಳ ಕಾರ್ಯಾಗಾರಗಳು ಮುಕ್ತಾಯಗೊಂಡಿದ್ದು ಇದರ ಭಾಗವಾಗಿ ಕುಣಿಗಲ್ ನಲ್ಲಿ ಕಾರ್ಯಗಾರವನ್ನು ಸಂಘಟಿಸಲಾಗುತ್ತಿದೆ ಈ ಕಾರ್ಯದಲ್ಲಿ ಜಿಲ್ಲೆಯ ಎಲ್ಲಾ ತಾಲೂಕುಗಳ ಮುಖಂಡರು ಕಾರ್ಯಕರ್ತರು ಪಾಲ್ಗೊಳ್ಳುತ್ತಿದ್ದು ರಾಜ್ಯದ ಎಲ್ಲಾ ಜಿಲ್ಲೆ ತಾಲೂಕುಗಳ ಒಳಗೊಂಡ 1000 ಗ್ರಾಮ ಶಾಖೆಗಳನ್ನು ಸಂಘಟಿಸುವ ಯೋಜನೆಯ ಭಾಗವಾಗಿ ಈ ಕಾರ್ಯವನ್ನು ನಡೆಸಲಾಗುತ್ತಿದೆ ಎಂದು ರಾಜು ವೆಂಕಟಪ್ಪ ತಿಳಿಸಿದ್ದಾರೆ.

ಹತ್ತು ವರ್ಷದ ಕೇಂದ್ರದ ಮೋದಿ ಸರ್ಕಾರ ಹಾಗೂ ರಾಜ್ಯದ ಕಾಂಗ್ರೆಸ್ ಸರ್ಕಾರಗಳ ಆಡಳಿತದಲ್ಲಿ ದಲಿತರ ಮೇಲಿನ ಜಾತಿ ತಾರತಮ್ಯ ದೌರ್ಜನ್ಯಗಳು ಮಿತಿಮೀರಿದ್ದು ಮುಂಬರುವ ದಿನಗಳಲ್ಲಿ ರಾಜ್ಯದ ದಲಿತರನ್ನು ಜಾಗೃತಗೊಳಿಸಿ ದಲಿತ ವಿರೋಧಿ ಸರ್ಕಾರಗಳ ವಿರುದ್ಧ ಮುಂದಿನ ಬಜೆಟ್ ಅಧಿವೇಶನದ ಸಂದರ್ಭದಲ್ಲಿ ದಲಿತರ ಬೇಡಿಕೆಗಳಿಗೆ ಒತ್ತಾಯಿಸಿ ರಾಜ್ಯಮಟ್ಟದ ವಿಧಾನಸೌಧ ಛಲೋ ನಡೆಸಲು  ಈ ಕಾರ್ಯಾಗಾರದಲ್ಲಿ ಚರ್ಚಿಸಲಾಗುವುದು ಎಂದರು.

ಇದನ್ನೂ ನೋಡಿ : ಎಸ್‌ಎಂ ಕೃಷ್ಣ ನಿಧನಕ್ಕೆ ಸಿದ್ದರಾಮಯ್ಯ ಸಂತಾಪ | ಬೆಳಗಾವಿ ವಿಧಾನಸಭೆ ಅಧಿವೇಶನ Janashakthi Media

Donate Janashakthi Media

Leave a Reply

Your email address will not be published. Required fields are marked *