ಶಾಲಾ ಮಕ್ಕಳಿಗೆ ಕಳಪೆ ಶೂ ವಿತರಣೆ: ಕ್ರಮಕ್ಕೆ SFI ಒತ್ತಾಯ

ವಿಜಯನಗರ: 2026 – 27ನೇ ಸಾಲಿನ ಶಾಲಾ ಮಕ್ಕಳಿಗೆ ಕಳೆಪೆ ಶೂ ನೀಡಿದವರ ವಿರುದ್ಧ ಕ್ರಮ ಜರುಗಿಸಿ ಕೂಡಲೇ ಗುಣಮಟ್ಟದ ಶೂ ನೀಡಲು ಆಗ್ರಹಿಸಿ ಎಸ್‌ಎಫ್‌ಐ ವಿಜಯನಗರ ಜಿಲ್ಲಾ ಸಮಿತಿ ವತಿಯಿಂದ ಮಾನ್ಯ ಜಿಲ್ಲಾ ಉಪನಿರ್ದೇಶಕರಾದ ವೆಂಕಟೇಶ್ ರಾಮಚಂದ್ರಪ್ಪ ಅವರ ಮೂಲಕ ಮಾನ್ಯ ಮುಖ್ಯಮಂತ್ರಿಗಳಿಗೆ ಮನವಿ ಪತ್ರವನ್ನು ಕೊಡಲಾಯಿತು.

ಈ ಸಂದರ್ಭದಲ್ಲಿ ಎಸ್ ಎಫ್ ಐ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾದ ಶಿವರೆಡ್ಡಿ ಮಾತನಾಡಿ ಪ್ರತಿ ವರ್ಷ ಶಾಲಾ ಮಕ್ಕಳ ಶೂ ಮತ್ತು ಸಾಕ್ಸ್‌ಗಳು ಪ್ರತಿ ಶಾಲಾ ಎಸ್.ಡಿ.ಎಂ.ಸಿ ನೇತೃತ್ವದಲ್ಲಿ ವಿತರಣೆ ಮಾಡಲಾಗುತ್ತಿತ್ತು. ಆದರೆ 2026-27ನೇ ಸಾಲಿನ ವರ್ಷದಲ್ಲಿ ನೇರವಾಗಿ ಖಾಸಗಿ ಕಂಪನಿಗೆ ಜವಾಬ್ದಾರಿ ನೀಡಲಾಗಿದೆ.

ಖಾಸಗಿ ಅವರ ಯಾವುದೇ ಕಂಪನಿ ಹೆಸರು ಇಲ್ಲದೆ ಬರಿ ಖಾಲಿ ಬಾಕ್ಸ್‌ನಲ್ಲಿ ಈ ಬಾರಿ ಶೂ ನೀಡಿರುವುದನ್ನು ಗಮನಿಸಿದರೆ ಉತ್ತಮವಾದ ಶೂಗಳನ್ನು ಖರೀದಿ ಮಾಡಿಲ್ಲವೆಂದು ಬಹಳ ಸ್ಪಷ್ಟವಾಗಿ ಕಂಡುಬರುತ್ತದೆ. ಇದರ ಪರಿಣಾಮವಾಗಿ ಮಕ್ಕಳಿಗೆ ಅತ್ಯಂತ ಕಳೆಪೆ ಗುಣಮಟ್ಟದ ಶೂಗಳುನ್ನು ವಿತರಣೆ ಮಾಡಿರುವುದನ್ನು SFI ತೀವ್ರವಾಗಿ ಖಂಡಿಸುತ್ತದೆ.

ಇದನ್ನೂ ಓದಿ: “ವಾಂಗ್ಚುಕ್‌ ಬಲವಂತದ ಸ್ಥಳಾಂತರ-ಸರ್ವಾಧಿಕಾರಶಾಹಿಯ ಪ್ರದರ್ಶನ”-ಬೃಂದಾ ಕಾರಟ್

ವಿದ್ಯಾರ್ಥಿಗಳಿಗೆ ನೀಡುವ ಶೂಗಳು ಒಂದು ವರ್ಷ ಬಳಿಕೆ ಬರುವಂತಿರಬೇಕು. ಆದರೆ ಈ ಬಾರಿ ನೀಡಿರುವ ಶೂಗಳು ಒಂದು ತಿಂಗಳು ಕೂಡು ಬಳಕೆಗೆ ಬರಲ್ಲವೆಂದು ಕಾಣುತ್ತೆದೆ. ಈ ಕೂಡುಲೆ ಸರಕಾರ ನೀಡಿರುವ ಖಾಸಗಿ ಕಂಪನಿ ಅವರ ಮೇಲೆ ಕಾನೂನು ಕ್ರಮ ಜರಗಿಸಿಬೇಕು ಮತ್ತು ಶೂಗಳನ್ನು ಹಿಂಪಡೆಯಬೇಕು.

ಕಳೆಪೆ ಗುಣಮಟ್ಟ ಶೂ ನೀಡಲು ಕಾರಣದವರ ಅಧಿಕಾರಿ ಮತ್ತು ಕಂಪನಿಯ ದಲ್ಲಾಳಿ ಹಾಗೂ ಕಂಪನಿ ಮಾಲಿಕರ ಮೇಲೆ ಕಾನೂನು ರೀತಿ ಶಿಸ್ತು ಕ್ರಮ ಜರುಗಿಸಿ ಅವರ ಕಾಂಟ್ರಾಕ್ಟ್ ಲೈಸೆನ್ಸ್ ರದ್ದುಗೊಳಿಸಬೇಕು.

ಈ ಕೂಡಲೇ ಎಲ್ಲಾ ವಿದ್ಯಾರ್ಥಿಗಳಿಗೆ ಉತ್ತಮವಾದ ಶೂ ಗಳನ್ನು ನೀಡಲು ಭಾರತ ವಿದ್ಯಾರ್ಥಿ ಫೆಡರೇಷನ್ SFI ವಿಜಯನಗರ ಜಿಲ್ಲಾ ಸಮಿತಿ ಒತ್ತಾಯ ಮಾಡುತ್ತದೆ.

ಬೇಡಿಕೆಗಳು

1. ಶೂ ಸರಬರಾಜು ಒಪ್ಪಂದ ಮಾಡಿಕೊಂಡ ಕಂಪನಿಯ ಮೇಲೆ ಕಾನೂನು ಕ್ರಮಕ್ಕಾಗಿ ಕೇಸ್(ಸ್ಟಮರ್ ಕಂಜುಮರ್ ಕೇಸ್) ದಾಖಲಿಸಿ ನಷ್ಟು ಪರಿಹಾರ ನೀಡುವಂತೆ ಕ್ರಮವಹಿಸಬೇಕು.

2. ಕಳಪೆ ಶೂ ಸರಬರಾಜು ಮಾಡಲು ಸಹರಿಸಿದವರ ಪತ್ತೆಗೆ ತನಿಖೆ ಮಾಡಿ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು.

3 ಶೂ ಕಂಪನಿಯನ್ನು ಕಪ್ಪುಪಟ್ಟಿಗೆ ಸೇರಿಸಬೇಕು.

ಈ ಸಂದರ್ಭದಲ್ಲಿ ಎಸ್ ಎಫ್ ಐ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವರೆಡ್ಡಿ, DYFI ಜಿಲ್ಲಾ ಕಾರ್ಯದರ್ಶಿ ಈಡಿಗರ್ ಮಂಜುನಾಥ್, DYFI ಜಿಲ್ಲಾಧ್ಯಕ್ಷರಾದ ವಿ ಸ್ವಾಮಿ, SFI ಮುಖಂಡರಾದ ಭೀಮಪ್ಪ, ಸುರೇಶ್ ಉಪಸ್ಥಿತರಿದ್ದರು.

ಇದನ್ನೂ ನೋಡಿ: ಮಹಿಳಾ ಮೀಸಲಾತಿ ತಕ್ಷಣ ಜಾರಿಗೊಳಿಸಿ; ಜನಗಣತಿ–ಡಿಲಿಮಿಟೇಶನ್‌ ಹೆಸರಲ್ಲಿ ವಿಳಂಬ ಬೇಡ: ನಾಗಮೋಹನ ದಾಸ್

Donate Janashakthi Media

Leave a Reply

Your email address will not be published. Required fields are marked *