ಸಾರ್ವಜನಿಕ ಪಡಿತರ ವಿತರಣೆ: ಉತ್ತರ ಕನ್ನಡ 4 ನೇ ಸ್ಥಾನ

ತ್ತರ ಕನ್ನಡ: ಸಾರ್ವಜನಿಕ ಪಡಿತರ ವಿತರಣೆ ವ್ಯವಸ್ಥೆಯಲ್ಲಿ ಏಪ್ರಿಲ್ 2025 ರಲ್ಲಿ ಶೇ.90.34 ರಷ್ಟು ಸಾರ್ವಜನಿಕರಿಗೆ ಪಡಿತರವನ್ನು ವಿತರಿಸುವ ಮೂಲಕ ರಾಜ್ಯದಲ್ಲಿ 4 ನೇ ಸ್ಥಾನದಲ್ಲಿ ತ್ತರ ಕನ್ನಡ ಗುರುತಿಸಿಕೊಳ್ಳಲಾಗಿದೆ.

ಜಿಲ್ಲೆಯ ಒಟ್ಟು 410 ಪಡಿತರ ವಿತರಣಾ ಅಂಗಡಿಗಳಲ್ಲಿನ 3,08,351 ಪಡಿತರ ಕಾರ್ಡ್ಗಳ ಪೈಕಿ 2,78,578 ಪಡಿತರ ಚೀಟಿದಾರರು ತಮ್ಮ ಪಡಿತರವನ್ನು ಪಡೆದಿದ್ದು, ಒಟ್ಟು 53,094.55 ಕ್ವಿಂಟಾಲ್ ಪಡಿತರವನ್ನು ವಿತರಿಸಲಾಗಿದೆ. ಸಾರ್ವಜನಿಕ

ಭಟ್ಕಳದ 31 ಪಡಿತರ ವಿತರಣೆ ಅಂಗಡಿಗಳಲ್ಲಿ 29,752 ಪಡಿತರ ಚೀಟಿದಾರರಲ್ಲಿ 28,429 ಮಂದಿ 6063.7 ಕ್ವಿಂಟಾಲ್ ಪಡಿತರ ಪಡೆದು ಶೇ.95.55 ರೊಂದಿಗೆ ಮೊದಲನೇ ಸ್ಥಾನದಲ್ಲಿದ್ದು, ನಂತರದಲ್ಲಿ ಕ್ರಮವಾಗಿ ಕುಮಟಾದ 47 ಪಡಿತರ ವಿತರಣೆ ಅಂಗಡಿಗಳಲ್ಲಿ 34,264 ಪಡಿತರ ಚೀಟಿದಾರರಲ್ಲಿ 31,966 ಮಂದಿ, 6183.9 ಕ್ವಿಂಟಾಲ್, ಸಿದ್ದಾಪುರದ 37 ಪಡಿತರ ವಿತರಣೆ ಅಂಗಡಿಗಳಲ್ಲಿ 21,460 ಪಡಿತರ ಚೀಟಿದಾರರಲ್ಲಿ 20,000 ಮಂದಿ 3797.3 ಕ್ವಿಂಟಾಲ್, ಅಂಕೋಲಾದ 36 ಪಡಿತರ ವಿತರಣೆ ಅಂಗಡಿಗಳಲ್ಲಿ 25,481 ಪಡಿತರ ಚೀಟಿದಾರರಲ್ಲಿ 23,589 ಮಂದಿ 4311.65 ಕ್ವಿಂಟಾಲ್, ಮುಂಡಗೋಡನ 28 ಪಡಿತರ ವಿತರಣೆ ಅಂಗಡಿಗಳಲ್ಲಿ 23,485 ಪಡಿತರ ಚೀಟಿದಾರರಲ್ಲಿ 21,574 ಮಂದಿ 4322.35 ಕ್ವಿಂಟಾಲ್, ಸೂಪದ 20 ಪಡಿತರ ವಿತರಣೆ ಅಂಗಡಿಗಳಲ್ಲಿ 11,027 ಪಡಿತರ ಚೀಟಿದಾರರಲ್ಲಿ 10,055 ಮಂದಿ 2007.5 ಕ್ವಿಂಟಾಲ್ ಪಡಿತರವನ್ನು ವಿತರಿಸಲಾಗಿದೆ. ಸಾರ್ವಜನಿಕ

ಇದನ್ನೂ ಓದಿ: ಅಹಿಂಸೆ ಎಂದರೆ ಎಲ್ಲರನ್ನೂ ಪ್ರೀತಿಸುವುದು

ಹೊನ್ನಾವರದ 42 ಪಡಿತರ ವಿತರಣೆ ಅಂಗಡಿಗಳಲ್ಲಿ 37,622 ಪಡಿತರ ಚೀಟಿದಾರರಲ್ಲಿ 34,173 ಮಂದಿ 6832.2 ಕ್ವಿಂಟಾಲ್, ಯಲ್ಲಾಪುರದ 30 ಪಡಿತರ ವಿತರಣೆ ಅಂಗಡಿಗಳಲ್ಲಿ 16,449 ಪಡಿತರ ಚೀಟಿದಾರರಲ್ಲಿ 14,867 ಮಂದಿ 2780.65 ಕ್ವಿಂಟಾಲ್, ಹಳಿಯಾಳದ 35 ಪಡಿತರ ವಿತರಣೆ ಅಂಗಡಿಗಳಲ್ಲಿ 30,502 ಪಡಿತರ ಚೀಟಿದಾರರÀಲ್ಲಿ 37,385 ಮಂದಿ 4961.1 ಕ್ವಿಂಟಾಲ್, ಶಿರಸಿಯ 48 ಪಡಿತರ ವಿತರಣೆ ಅಂಗಡಿಗಳಲ್ಲಿ 37,388 ಪಡಿತರ ಚೀಟಿದಾರರಲ್ಲಿ 32,621 ಮಂದಿ 5991.05 ಕ್ವಿಂಟಾಲ್, ದಾಂಡೇಲಿಯ 17 ಪಡಿತರ ವಿತರಣೆ ಅಂಗಡಿಗಳಲ್ಲಿ 13,257 ಪಡಿತರ ಚೀಟಿದಾರರಲ್ಲಿ 11,073 ಮಂದಿ 1889.8 ಕ್ವಿಂಟಾಲ್, ಕಾರವಾರದ 43 ಪಡಿತರ ವಿತರಣೆ ಅಂಗಡಿಗಳಲ್ಲಿ 27,664 ಪಡಿತರ ಚೀಟಿದಾರರಲ್ಲಿ 22,846 ಮಂದಿ 3953.35 ಕ್ವಿಂಟಾಲ್ ಪಡಿತರವನ್ನು ವಿತರಿಸಲಾಗಿದೆ.

ಜಿಲ್ಲೆಯಲ್ಲಿ 2019 ರಿಂದ ಇದುವರೆಗೆ 228 ಸರ್ಕಾರಿ ನೌಕರರು, ನಿಗಧಿಗಿಂತ ಹೆಚ್ಚಿನ ಆದಾಯ ಹೊಂದಿರುವ 379 ಮಂದಿ, 3 ಹೆಕ್ಟೇರ್ಗಿಂತ ಹೆಚ್ಚು ಜಮೀನು ಹೊಂದಿರುವ 97 ಮಂದಿ, ಆದಾಯ ತೆರಿಗೆ ಪಾವತಿಸುವ 1,170 ಮಂದಿ ಮತ್ತು ಇತರೆ 2,216 ಸೇರಿದಂತೆ ಒಟ್ಟು 4,338 ಅನರ್ಹ ಪಡಿತರ ಚೀಟಿಗಳನ್ನು ಪತ್ತೆ ಹಚ್ಚಿ 46,29,100 ರೂಪಾಯಿ ದಂಡ ಸಂಗ್ರಹಿಸಲಾಗಿದೆ.

ಉತ್ತರ ಕನ್ನಡ ಜಿಲ್ಲೆಯ ಅತ್ಯಂತ ವಿಸ್ತಾರವಾದ ಜಿಲ್ಲೆಯಾಗಿದ್ದು ಗ್ರಾಮೀಣ ಜನಸಾಂದ್ರತೆಯು ಪಡಿತರ ವಿತರಣಾ ಅಂಗಡಿಗಳಿಂದ ಬಹಳ ದೂರ ಇದ್ದರೂ ಕೂಡಾ ಪಡಿತರ ವಿತರಣೆಯಲ್ಲಿ ರಾಜ್ಯದಲ್ಲೇ 4 ನೇ ಸ್ಥಾನ ಪಡೆಯುವ ಸಾಧನೆ ಮಾಡಲಾಗಿದೆ. ಪಡಿತರ ಪಡೆಯದೆ ಬಾಕಿ ಉಳಿದರವರಲ್ಲಿ ಬಹುತೇಕ ಮಂದಿ ಪೋರ್ಟಬಲಿಟಿ ಮೂಲಕ ಬೇರೆ ಜಿಲ್ಲೆಯಲ್ಲಿ ಅಥವಾ ರಾಜ್ಯದಲ್ಲಿ ಪಡಿತರ ಪಡದಿರುತ್ತಾರೆ, ವಲಸೆ ಕಾರ್ಮಿಕರು ವಲಸೆ ಹೋಗುವ ಕಾರಣ ಪಡಿತರ ಪಡೆಯಲು ಸಾಧ್ಯವಾಗಿರುವುದಿಲ್ಲ ಹಾಗೂ ಕೆಲವು ಮಂದಿ ವೈಯಕ್ತಿಕ ಕಾರಣಗಳಿಂದ ಪಡಿತರ ಪಡೆದಿರುವುದಿಲ್ಲ.

ಜಿಲ್ಲೆಯಲ್ಲಿನ ಒಟ್ಟು 410 ನ್ಯಾಯಬೆಲೆ ಅಂಗಡಿಗಳಲ್ಲಿ 402 ಅಂಗÀಡಿಗಳಿಗೆ ಪಾಯಿಂಟ್ ಆಫ್ ಸೇಲ್ (ಪಿಓಎಸ್) ಯಂತ್ರಗಳನ್ನು ಅಳವಡಿಸಿದ್ದು, ಇದರಿಂದಾಗಿ ಪಡಿತರ ಪಡೆದವರ ಸಂಪೂರ್ಣ ವಿವರ ಪಡೆಯಲು ಸಾಧ್ಯವಾಗಲಿದೆ ಎಂದು ಉತ್ತರ ಕನ್ನಡ ಜಿಲ್ಲೆಯ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯ ಉಪ ನಿರ್ದೇಶಕ ಮಂಜುನಾಥ ರೇವಣ್ಕರ್ ತಿಳಿಸಿದ್ದಾರೆ.

ಇದನ್ನೂ ನೋಡಿ: ಹಾವುಗಳ ವಿಸ್ಮಯಕಾರಿ ವಿಷಯಗಳು | ಡಾ : ಶ್ರೀಧರ Janashakthi Media

Donate Janashakthi Media

Leave a Reply

Your email address will not be published. Required fields are marked *