ನವದೆಹಲಿ: ಬಿಜೆಪಿಯ ಸಂಸದರೊಬ್ಬರು ಮೂರು ವರ್ಷ ಶಿಕ್ಷೆಗೆ ಗುರಿಯಾಗಿದ್ದರೂ ಅವರನ್ನು ಇನ್ನೂ ಸಂಸತ್ ಕಲಾಪದಲ್ಲಿ ಭಾಗವಹಿಸಲು ಅವಕಾಶ ನೀಡಲಾಗುತ್ತಿದೆ ಆದರೆ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯಲ್ಲಿ ಎರಡು ವರ್ಷ ಶಿಕ್ಷೆಗೆ ಗುರಿಯಾಗಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಸಂಸತ್ ಸ್ಥಾನದಿಂದ ಅನರ್ಹಗೊಳಿಲಾಗಿದ್ದು ಇವರಿಗೆ ಅವಕಾಶ ನೀಡದಿರುವುದನ್ನು ರಾಜ್ಯಸಭೆ ವಿರೋಧ ಪಕ್ಷದ ನಾಯಕ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪರಿಶಿಷ್ಟ ಜಾತಿಗೆ ಸೇರಿದ ವೈದ್ಯರೊಬ್ಬರ ಮೇಲೆ ಹಲ್ಲೆ ನಡೆಸಿದ್ದ ಗುಜರಾತ್‍ನ ಸಂಸದರಿಗೆ ಅಲ್ಲಿನ ನ್ಯಾಯಾಲಯ 3 ವರ್ಷ ಶಿಕ್ಷೆ ವಿಧಿಸಿದೆ. ಸೆಷನ್ಸ್ ಕೋರ್ಟ್, ಹೈಕೋರ್ಟ್ ಸಂಸದರ ಮೇಲ್ಮನವಿ ತಿರಸ್ಕರಿಸಿವೆ. ಸುಪ್ರೀಂಕೋರ್ಟ್ ಸಂಸದರಿಗೆ ಐದು ಲಕ್ಷ ರೂಪಾಯಿ ದಂಡ ವಿಧಿಸಿತ್ತು. ಆದರೂ ಅವರನ್ನು ಇನ್ನೂ ಸಂಸತ್ ಕಲಾಪದಲ್ಲಿ ಭಾಗವಹಿಸಲು ಅವಕಾಶ ನೀಡಲಾಗಿದೆ ಎಂದು ಆಕ್ಷೇಪಿಸಿದರು.
ಇದನ್ನೂ ಓದಿ : ಲೋಕಸಭಾ ಸದಸ್ಯ ಸ್ಥಾನದಿಂದ ರಾಹುಲ್ ಗಾಂಧಿ ಅನರ್ಹಗೊಳಿಸಿ ಅಧಿಸೂಚನೆ
ಆದರೆ ರಾಹುಲ್ ಗಾಂಧಿಯನ್ನು ಮಿಂಚಿನ ವೇಗದಲ್ಲಿ ಅನರ್ಹಗೊಳಿಸಲಾಗಿದೆ. ಅದಾನಿ ಷೇರು ಮೌಲ್ಯ ಹೆಚ್ಚಳ ಹಗರಣದಲ್ಲಿ ಸತ್ಯ ಹೇಳಿದ ಹಾಗೂ ಪ್ರಧಾನಿಯನ್ನು ಪ್ರಶ್ನಿಸಿದ ಕಾರಣಕ್ಕೆ ರಾಹುಲ್‍ಗಾಂಧಿಯನ್ನು ಮಿಂಚಿನ ವೇಗದಲ್ಲಿ ಅನರ್ಹಗೊಳಿಸಲಾಗಿದೆ ಎಂದು ಆರೋಪಿಸಿದರು. ರಾಹುಲ್‍ಗಾಂಧಿಗೆ ಸೂರತ್ ನ್ಯಾಯಾಲಯ ಶಿಕ್ಷೆ ವಿಧಿಸಿದ 24 ಗಂಟೆಯಲ್ಲೇ ಅನರ್ಹತೆಯ ಅಧಿಸೂಚನೆ ಜಾರಿಯಾಗುತ್ತದೆ, ಸಂಸತ್ ಕಲಾಪದಿಂದ ಹೊರಗಿಡಲಾಗುತ್ತದೆ. ಇದನ್ನು ನೋಡಿದರೆ ಯಾರ ಮೇಲೆ ಒತ್ತಡವಿದೆ, ಯಾರಿಗೆ ವಿನಾಯಿತಿ ಸಿಗುತ್ತಿದೆ ಎಂಬುದು ಅರಿವಾಗುತ್ತದೆ ಎಂದರು.
ಇದನ್ನೂ ಓದಿ : ಸಿಎಂ ಖುರ್ಚಿಯ ಮೇಲೆ ಕಣ್ಣಿಟ್ಟವರಿಗೆ ಎಚ್ಚರಿಕೆ ನೀಡಿದ ಖರ್ಗೆ
ಅಮ್ರೇಲಿ ಕ್ಷೇತ್ರದ ಸಂಸದ ನರನ್ ಕಚ್ಚಡಿಯಾ ಅವರು 2013ರ ಜನವರಿ 1ರಂದು ನಾಗರೀಕ ಆಸ್ಪತ್ರೆಯ ಡಾ.ಧಂಜಿದಭಿ ಎಂಬುವರ ಮೇಲೆ ಹಲ್ಲೆ ನಡೆಸಿದ್ದರು ಎಂಬ ಆರೋಪದಡಿ ಪ್ರಕರಣ ದಾಖಲಾಗಿತ್ತು.ಇದಕ್ಕೂ ಮೊದಲು ಸರ್ಕಾರಿ ಆಸ್ಪತ್ರೆಯ ವೈದ್ಯರು ಬೇರೊಂದು ರೋಗಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ನಾವು ಹೇಳಿದವರಿಗೆ ಚಿಕಿತ್ಸೆ ನೀಡಲು ಸ್ಪಂದಿಸಲಿಲ್ಲ ಎಂಬ ಕಾರಣಕ್ಕೆ ಲೋಕಸಭಾ ಕ್ಷೇತ್ರದ ಮಹಿಳಾ ಘಟಕದ ಅಧ್ಯಕ್ಷ ಮಧುಬೇನ್ ಜೋಷಿ ಅವರ ಪುತ್ರ ರವಿ ವೈದ್ಯರ ಮೇಲೆ ಹಲ್ಲೆ ಮಾಡಿದ್ದರು. ಘಟನೆಯ ಬಳಿಕ ಮಧುಬೇನ್ ಸ್ಥಳಕ್ಕೆ ತೆರಳಿ ಮತ್ತಷ್ಟು ರಂಪಾಟ ಮಾಡಿದ್ದರು. ಅಲ್ಲಿಂದಲೇ ಸಂಸದರಿಗೆ ದೂರು ನೀಡಿದ್ದರು. ಸಂಸದರು ಕರೆ ಮಾಡಿದಾಗ ವೈದ್ಯರು ಮಾತನಾಡಲು ನಿರಾಕರಿಸಿದ್ದರು ಎನ್ನಲಾಗಿದೆ. ಇದರಿಂದ ಸ್ಥಳಕ್ಕೆ ಧಾವಿಸಿದ್ದ ಸಂಸದರು ವೈದ್ಯರ ಮೇಲೆ ಹಲ್ಲೆ ನಡೆಸಿದ್ದರು ಎಂಬ ಆರೋಪ ಇತ್ತು.ವಿಚಾರಣೆ ನಡೆಸಿದ ಅಮ್ರೇಲಿ ವಿಶೇಷ ನ್ಯಾಯಾಲಯ ಸಂಸದ ಕಚ್ಚಡಿಯಾ, ಅವರ ಚಾಲಕ ರಮೇಶ್ ಸೇರಿ ಇತರ ಮೂವರು, ಕಿರಿಟ್ ವಂಜಾ, ಮಧುಬೇನ್, ಆಕೆಯ ಮಗ ರವಿ ಅವರನ್ನು ದೋಷಿಗಳೆಂದು ಘೋಷಿಸಿತ್ತು. ಸಂಸದರಿಗೆ ಮೂರು ವರ್ಷಗಳ ಶಿಕ್ಷೆ ಮತ್ತು 35 ಸಾವಿರ ರೂಪಾಯಿ ದಂಡ ವಿಧಿಸಿತ್ತು, ಉಳಿದ ಆರೋಪಿಗಳಿಗೆ ಆರು ತಿಂಗಳ ಶಿಕ್ಷೆ ವಿಧಿಸಿ 2016ರ ಏಪ್ರಿಲ್‍ನಲ್ಲಿ ತೀರ್ಪು ಪ್ರಕಟಿಸಿತ್ತು.
ಬಳಿಕವೂ ಕಚ್ಚಡಿಯಾ 2014 ಮತ್ತು 2019ರ ಲೋಕಸಭೆ ಚುನಾವಣೆಯಲ್ಲಿ ಕ್ರಮವಾರಿ ಎರಡು ಮತ್ತು ಮೂರು ಬಾರಿ ಸಂಸದರಾಗಿದ್ದಾರೆ. ಪ್ರಸ್ತುತ 17ನೇ ಸಂಸತ್‍ನಲ್ಲಿ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸ್ಥಾಯಿ ಸಮಿತಿ, ಶಿಷ್ಠಚಾರ ಸಮಿತಿ, ರೈಲ್ವೆ ಸಂಸದೀಯ ಸಮಿತಿ ಸದಸ್ಯರಾಗಿ ಕೆಲಸ ಮಾಡುತ್ತಿದ್ದಾರೆ. ರಾಹುಲ್‍ಗಾಂಧಿಗೆ ಶಿಕ್ಷೆಯಾದ ತಕ್ಷಣ ಕ್ರಮ ಕೈಗೊಂಡಂತೆ, ಬಿಜೆಪಿ ಸಂಸದರ ವಿರುದ್ಧ ಕ್ರಮ ಏಕಿಲ್ಲ ಎಂಬ ಪ್ರಶ್ನೆಯನ್ನು ಕಾಂಗ್ರೆಸ್ ಮುಂದಿಟ್ಟಿದೆ.