ಉತ್ಪಾದನೆಯ ಚದುರಿಕೆ ಮತ್ತು ಸಾಮ್ರಾಜ್ಯ ಶಾಹಿಯ ಪರಿಕಲ್ಪನೆ

-ಪ್ರೊ. ಪ್ರಭಾತ್ಪಟ್ನಾಯಕ್

-ಅನು: ಕೆ.ವಿ.

ಬಂಡವಾಳ ಶಾಹಿ ಜಗತ್ತಿನಲ್ಲಿ ಅಭಿವೃದ್ಧಿ ಹೊಂದಿರುವ ಮತ್ತು ಅಭಿವೃದ್ಧಿಯ ಪರಿಧಿಯಲ್ಲಿರುವ ದೇಶಗಳ ನಡುವೆ ಇದ್ದ ವಿಭಜನಾ ರೇಖೆಯು ಈಗ ಭೌಗೋಳಿಕವಾಗಿ, ಪರಿಧಿಯಲ್ಲಿರುವ ದೇಶಗಳ ಒಳಗಿರುವ ವಿಭಜನೆಯಾಗಿ ಪಲ್ಲಟಗೊಂಡಿದೆ ಎಂದು ಹೇಳಬಹುದು. ಅಂದರೆ, ಈ ದೇಶಗಳ ಹಿರಿಬೂರ್ಜ್ವಾ ಮತ್ತು ಉಚ್ಚ ವರ್ಗಗಳ ಮಂದಿತಮ್ಮನ್ನು ಈಗ ಈ ವಿಭಜನಾ ರೇಖೆಯ ಆಚೆಯ ಮುಂದುವರೆದ ದೇಶಗಳ ಉಚ್ಚ ವರ್ಗಗಳ ಮಂದಿಯೊಂದಿಗೆ ಗುರುತಿಸಿ ಕೊಳ್ಳುತ್ತಿದ್ದಾರೆ. ವಸಾಹತು ಶಾಹಿ-ವಿರೋಧಿ ಹೋರಾಟದ ಸಮಯದಲ್ಲಿ ಸಾಮಾನ್ಯವಾಗಿ ಇದ್ದಂತೆ ತಮ್ಮ ದೇಶಗಳ ಜನರ ಜೊತೆಗೆ ಇಲ್ಲ. ಸಾಮ್ರಾಜ್ಯ ಶಾಹಿ ಎಂಬ ಪದವು ಭೌಗೋಳಿಕ ವಿಭಜನೆಯನ್ನು ಸೂಚಿಸುವಂತದ್ದಲ್ಲ, ಬದಲಾಗಿ ತನ್ನ ಸುತ್ತ ಮುತ್ತಲಿನ ಮೇಲೆ ಬಂಡವಾಳ ಶಾಹಿ ಉತ್ಪಾದನಾ ವಿಧಾನವನ್ನು ಚಲಾಯಿಸುವ ಬಲವಂತವನ್ನು ಸೂಚಿಸುತ್ತದೆಯಾದ್ದರಿಂದ ಉತ್ಪಾದನೆಯ ಚದುರಿಕೆಯು ಸಾಮ್ರಾಜ್ಯ ಶಾಹಿ ಎಂಬ  ವಿದ್ಯಮಾನವನ್ನು ಯಾವುದೇ ರೀತಿಯಲ್ಲಿ ತೊಡೆದು ಹಾಕುವುದಿಲ್ಲ. ಉತ್ಪಾದನೆ

ವಿಶ್ವ ಆರ್ಥ ವ್ಯವಸ್ಥೆಯಲ್ಲಿ ಉತ್ಪಾದನೆಯು ಗಮನಾರ್ಹವಾಗಿ ಚದುರಿಹೋಗಿದೆ. ಅನೇಕರು ಈ ವಿದ್ಯಮಾನವನ್ನುಅಮೆರಿಕ ಸಂಯುಕ್ತ ಸಂಸ್ಥಾನಗಳ(ಯು.ಎಸ್.) ನೇತೃತ್ವದ ವಿಶ್ವ ಆರ್ಥ ವ್ಯವಸ್ಥೆಯಿಂದ “ಬಹುಧ್ರವೀಯ ವಿಶ್ವ ಆರ್ಥ ವ್ಯವಸ್ಥೆ”ಯತ್ತ ಪಲ್ಲಟ ಎಂದು ಕರೆಯುತ್ತಾರೆ, ಆದರೆ ಈ ವಿವರಣೆಯ ಬಗ್ಗೆ ಯಾರು ಏನು ಯೋಚಿಸಿದರೂ, ಚದುರಿ ಹೋಗಿದೆ ಎಂಬ ಸತ್ಯವಂತೂ ನಿರ್ವಿವಾದ. ಉದಾಹರಣೆಗೆ 1994 ರಲ್ಲಿ ಜಿ-7 ದೇಶಗಳು (ಯು.ಎಸ್‍, ಯು.ಕೆ., ಜರ್ಮನಿ, ಫ್ರಾನ್ಸ್, ಜಪಾನ್, ಇಟಲಿ ಮತ್ತು ಕೆನಡಾ) ವಿಶ್ವದ ಉತ್ಪನ್ನಗಳ 45.3 ವನ್ನು ಉತ್ಪಾದಿಸಿದರೆ ,ಬ್ರಿಕ್ಸ್( BRICS)ದೇಶಗಳು (ಬ್ರೆಜಿಲ್, ರಷ್ಯಾ, ಭಾರತ, ಚೀನಾ ಮತ್ತು ದಕ್ಷಿಣ ಆಫ್ರಿಕಾ, ಜತೆಗೆ ಹೊಸದಾಗಿ ಸದಸ್ಯರಾದ ಇರಾನ್, ಯುಎಇ, ಈಜಿಪ್ಟ್ ಮತ್ತು ಇಥಿಯೋಪಿಯಾ) ಶೇ.18.9 ಉತ್ಪಾದಿಸಿದ್ದವು. 2022 ರ ವೇಳೆಗೆಈ ಅನುಪಾತಗಳು ಅನುಕ್ರಮವಾಗಿ 29.3 ಮತ್ತು 35.2 ಶೇ. ಆಯಿತು (ಇವು ಅರ್ಥಶಾಸ್ತ್ರಜ್ಞ ಜೆಫ್ರಿಸ್ಯಾಕ್ಸ್ ಉಲ್ಲೇಖಿಸಿರುವ ವಿಶ್ವ ಬ್ಯಾಂಕ್ ಅಂಕಿ ಅಂಶಗಳು). ಉತ್ಪಾದನೆ

ಇದನ್ನೂ ಓದಿ: ಮೂರು ಹೊಸ ಮಾರ್ಗದಲ್ಲಿ ಬಿಎಂಟಿಸಿ ಬಸ್ ಸಂಚಾರ; ಇಲ್ಲದೆ ಪೂರ್ಣ ಮಾಹಿತಿ

ಯು.ಎಸ್, ಯು.ಕೆ, ಕೆನಡಾ, ಯುರೋಪಿಯನ್‍ ಒಕ್ಕೂಟ, ಜಪಾನ್, ದಕ್ಷಿಣ ಕೊರಿಯಾ, ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ಎಂಬ ಕೊಂಚ ದೊಡ್ಡ ಗುಂಪನ್ನು ನಾವು ತೆಗೆದು ಕೊಂಡ ರೂ ಸಹ, ವಿಶ್ವ ಉತ್ಪಾದನೆಯಲ್ಲಿ ಅದರ ಪಾಲು 1994 ರಲ್ಲಿ ಶೇ. 56 ರಿಂದ 2022 ರಲ್ಲಿ ಶೇ. 39.5 ಕ್ಕೆ ಕುಸಿದಿದೆ. ಈ ಚದುರಿಕೆಯ ಹರಹನ್ನು ಗುರುತಿಸಲು ಯು.ಎಸ್‍ ನನಿರಾಕರಣೆ, ಮತ್ತು ಹಳೆಯ ದಿನಗಳಲ್ಲಿ ಪ್ರಪಂಚದಾದ್ಯಂತ ಅನುಭವಿಸಿದ ಅಧಿಕಾರವನ್ನು ಉಳಿಸಿಕೊಳ್ಳಲು ಅದ ರಪ್ರಯತ್ನವು ರಷ್ಯಾ, ಚೀನಾ, ಇರಾನ್ ಮತ್ತು ಇತರರ ವಿರುದ್ಧ ಅದು ಅತ್ಯಂತ ಆಕ್ರಮಣಕಾರಿ ಯಾಗುವಂತೆ ಮಾಡಿದೆ. ಎಷ್ಟೆಂದರೆ, ಅದರ ಆಕ್ರಾಮ ಕತೆ ಜಗತ್ತನ್ನು ಅಪಾಯಕಾರಿ ಮಿಲಿಟರಿ ಸಂಘರ್ಷಗಳತ್ತ ತಳ್ಳುತ್ತಿದೆ.

ಉತ್ಪಾದನೆಯ ಈ ಚದುರಿಕೆಗೆ ನಿಸ್ಸಂ ದೇಹವಾಗಿ ಸಮಾಜವಾದ ಮೂಡಿ ಬಂದದ್ದು ವ್ಯಾಪಕವಾಗಿ ನೆರವಾಯಿತು. ಸ್ವತಃ ನಿರ್ವ ಸಾಹತೀಕರಣಕ್ಕೇ ಸಮಾಜವಾದದ ಅಸ್ತಿತ್ವದಿಂದ ನೆರವು ಸಿಕ್ಕಿತು ಎಂಬ ಸಂಗತಿ ಮಾತ್ರವಲ್ಲದೆ, ವಸಾಹತು ಶಾಹಿಯಿಂದ ಹೊರಬಂದ ಈ ಸಮಾಜಗಳಲ್ಲಿ ಆಂತರಿಕ ಕೌಶಲ್ಯಗಳು, ತಾಂತ್ರಿಕ ಸಾಮರ್ಥ್ಯಗಳು, ಮೂಲ ಸೌಕರ್ಯ ಮತ್ತು ಉತ್ಪಾದನಾ ಸಾಮರ್ಥ್ಯಗಳ ನಿರ್ಮಾಣವು ಆರಂಭದಲ್ಲಿ ನಿಯಂತ್ರಿತ ಅರ್ಥವ್ಯ ವಸ್ಥೆಯ ಅಡಿಯಲ್ಲಿ ನಡೆಯಿತು.

ಅಗ ಈ ದೇಶಗಳು ಪಾಶ್ಚಿಮಾತ್ಯಹಗೆತನವನ್ನು* ಎದುರಿಸುವಲ್ಲಿ ಸಹಾಯಕವಾದದ್ದು ಗಮನಾರ್ಹ ಸೋವಿಯತ್ ನೆರವಿವು. ನಂತರ ಸಹಜವಾಗಿ, ಸೋವಿಯತ್ ಒಕ್ಕೂಟ ಮತ್ತು ಪೂರ್ವ ಯುರೋಪಿನಲ್ಲಿ ಸಮಾಜವಾದದ ಪತನದ ನಂತರ, ಮತ್ತು ಮೂರನೇ ಪ್ರಪಂಚದ ನಿಯಂತ್ರಿತ ಬೆಳವಣಿಗೆಯ ಆಳ್ವಿಕೆಗಳು ಅಂತ್ಯಗೊಂಡ ನಂತರ, ಚದುರಿಕೆಯ ಈ ಪ್ರಕ್ರಿಯೆಯನ್ನು ನವ ಉದಾರವಾದಿ ಜಾಗತಿಕ ವ್ಯವಸ್ಥೆಯು ಸುಗಮಗೊಳಿಸಿದ ಉತ್ಪಾದನೆಯಲ್ಲಿನ ಬಂಡವಾಳದ ಅಂತರರಾಷ್ಟ್ರೀಯ ಹರಿವುಗಳು ಮುಂದಕ್ಕೆ ಒಯ್ದವು. ಆದರೆ ಅಂತಹ ಹರಿವುಗಳಿಗೆ ಆಧಾರ ಕಲ್ಪಿಸಿದ್ದುಅನೇಕ ಪ್ರಮುಖ ನಿದರ್ಶನಗಳಲ್ಲಿ ನಿಯಂತ್ರಿತ ಅರ್ಥ ವ್ಯವಸ್ಥೆಯ ಆಳ್ವಿಕೆಗಳ ಅಡಿಯಲ್ಲಿಯೇ. ಪ್ರಸ್ತುತ, ಯು.ಎ ಸ್ನೇತೃತ್ವದ ಬಣದ ಹೊರಗಿರುವ ದೇಶಗಳಲ್ಲಿ ಉತ್ಪಾದನೆಯ ಚದುರಿಕೆ ಬಂಡವಾಳ ಶಾಹಿಯ ಆಶ್ರಯದಲ್ಲಿ ನಡೆಯುತ್ತಿದೆ (ಚೀನಾದ್ದು ಸಹಜವಾಗಿ ಒಂದು ಪ್ರತ್ಯೇಕ ಪ್ರಕರಣ).

ಬಂಡವಾಳ ಶಾಹಿ ಅಪರಾಧಿಯಾಗಿ ಕಾಣಿಸುತ್ತಿಲ್ಲ

ಇದರಿಂದ ಉದ್ಭವಿಸುವಪ್ರಶ್ನೆಯೆಂದರೆ, ಪ್ರಸ್ತುತ ಸಂದರ್ಭದಲ್ಲಿ ನಾವು ಸಾಮ್ರಾಜ್ಯ ಶಾಹಿಯ ಬಗ್ಗೆ ಯಾವ ಅರ್ಥದಲ್ಲಿ ಮಾತನಾಡ ಬಹುದು ಎಂಬುದು. ಸಾಮ್ರಾಜ್ಯ ಶಾಹಿ ಎಂಬ ಪದವು ವಿಶ್ವ ಆರ್ಥವ್ಯವಸ್ಥೆಯಲ್ಲಿ ಅಭಿವೃದ್ಧಿ ಹೊಂದಿದ ಬಂಡವಾಳ ಶಾಹೀ (ಮೆಟ್ರೋಪಾಲಿಟನ್) ದೇಶಗಳು ಮತ್ತು ಅಭಿವೃದ್ಧಿಯಾಗದ ಪರಿಧಿಯಲ್ಲಿದ್ದ ದೇಶಗಳ ನಡುವಣ ವ್ಯತ್ಯಾಸಕ್ಕೆ ಸಂಬಂಧಿಸಿರುವಂತದ್ದು.  ಈ ವ್ಯತ್ಯಾಸ ಈಗ ಅಳಿಸಿ ಹೋಗುತ್ತಿರುವಾಗ, ಪರಿಧಿಗೆ ಸೇರಿದ ದೇಶಗಳು ಈಗ ಮೆಟ್ರೋಪಾಲಿಟನ್ ದೇಶಗಳಿಗಿಂತಲೂ ವೇಗವಾಗಿ ಉತ್ಪಾದನೆಯ ಬೆಳವಣಿಗೆಯ ದರವನ್ನು ಕಾಣುತ್ತಿದ್ದರೆ, ಈಗಲೂ ನಾವು ಸಾಮ್ರಾಜ್ಯ ಶಾಹಿ ಎಂದು ಮಾತನಾಡಲು ಸಾಧ್ಯವೇ? ತದ್ವಿರುದ್ಧವಾಗಿ, ಈಗ ಜಾಗತಿಕ ದಕ್ಷಿಣಕ್ಕೆ ಸೇರಿದ ದೇಶಗಳು ಜಾಗತಿಕ ಉತ್ತರದ ದೇಶಗಳೊಂದಿಗೆ, ಅದೂ ಬಂಡವಾಳ ಶಾಹಿಯ ಅಡಿಯಲ್ಲಿಯೇ (ಇಲ್ಲಿಯೂ ಚೀನವನ್ನು ಬಿಟ್ಟು) ಸ್ಪರ್ಧಿಸುತ್ತಿರುವಾಗ ವಾಸ್ತವತೆಯು ಪರಸ್ಪರ ಮಿಳನಗೊಂಡು “ಒಮ್ಮುಖ” ಗೊಂಡಿರುವಂತೆ ತೋರುತ್ತದೆ, ಬಂಡವಾಳ ಶಾಹಿಯು ಈಗ ಪ್ರಪಂಚವನ್ನು ಅಭಿವೃದ್ಧಿ ಹೊಂದಿದ ಮತ್ತು ಅಭಿವೃದ್ಧಿ ಹೊಂದದ ದೇಶಗಳು ಎಂಬ ವಿಭಜನೆಯನ್ನು ಶಾಶ್ವತಗೊಳಿಸುತ್ತಿರುವ ಅಪರಾಧಿಯಾಗಿ ಕಾಣಿಸುತ್ತಿಲ್ಲ. ಇದು ನಿಜವೇ ಎಂಬುದೇ ನಮ್ಮ ಮುಂದಿರುವ ಪ್ರಶ‍್ನೆ.

ಮೊದಲನೆಯದಾಗಿ, ಚದುರಿಕೆ ಖಂಡಿತವಾಗಿಯೂ ಅಗಿದೆ .ಆದರೆ “ಒಮ್ಮುಖ” ವಾಗಿದೆ ಎನ್ನುವುದು ಯಾವುದೇ ರೀತಿಯಲ್ಲಿ ಸರಿಯಲ್ಲ.  ಇದಕ್ಕೆ ಕಾರಣ ಭಾಗಶಃ, ಏಕೆಂದರೆ ಚದುರಿಕೆಯ ವಿದ್ಯಮಾನವನ್ನೇ ಉತ್ಪ್ರೇಕ್ಷೆ ಮಾಡಲಾಗಿದೆ ಎಂಬ ಸಂಗತಿ. ಅಂತಹ ಚದುರಿಕೆಯನ್ನು ಕಂಡ ದೇಶಗಳು ಈಗಲೂ ಕೆಲವು ಮಾತ್ರ ಮತ್ತು ಅವುಗಳಲ್ಲಿಯೂ ಹಲವು ಮುಂದಿನ ದಿನಗಳಲ್ಲಿ ಹಿನ್ನಡೆಗಳನ್ನು ಕಾಣಬಹುದು; ನವ ಉದಾರವಾದದ ಬಿಕ್ಕಟ್ಟು ಅವರನ್ನು “ಹಣಕಾಸಿನ ಮಿತವ್ಯಯ”,ಆಂತರಿಕ ಹಣದಿಳಿಕೆ ಮತ್ತು ಆದ್ದರಿಂದ ಆರ್ಥಿಕ ಸ್ಥಗಿತತೆ ಮತ್ತು ಹಿಂಜರಿತವನ್ನು ಉಂಟು ಮಾಡುವ ಸಾಲದ ಬಲೆಗಳಲ್ಲಿ ಸಿಲುಕಿಸುವುದರಿಂದ ಇದು ಸಂಭವಿಸಲಿದೆ. ಇತಿಹಾಸದಲ್ಲಿ ಇಂತಹ ಹಿನ್ನಡೆಗಳಿಗೆ ಸಾಕಷ್ಟು ಸಾಕ್ಷ್ಯವಿದೆ, ವಿಶೇಷವಾಗಿ ಖನಿಜ-ಸಮೃದ್ಧ ದೇಶಗಳಲ್ಲಿ ಬಹಳ ಹೆಚ್ಚಾಗಿ ಕಂಡಿದೆ. ಮ್ಯಾನ್ಮಾರ್ ಇದಕ್ಕೆ ಒಂದು ಅತ್ಯುತ್ತಮ ಉದಾಹರಣೆಯಾಗಿದೆ, ಇದನ್ನು ಒಮ್ಮೆ ಸಮೃದ್ಧಿಯ ಹೊಸ್ತಿಲಲ್ಲಿದೆ ಎಂದು ಪರಿಗಣಿಸಲಾಗಿತ್ತು, ಆದರೆ ಈಗಅದು”ಕಡಿಮೆ ಅಭಿವೃದ್ಧಿ ಹೊಂದಿದ ದೇಶ”ಗಳ ಪಟ್ಟಿಯಲ್ಲಿದೆ. ನಮ್ಮ ನೆರೆಹೊರೆಯಲ್ಲಿಯೇ ಹೊರಸಾಲಗಳ ಹೊರೆಯಿಂದಾಗಿ ದೇಶಗಳು ಹಿಂದಕ್ಕೆ ಹೋಗುತ್ತಿರುವುದನ್ನು ನಾವು ಕಾಣುತ್ತಿದ್ದೇವೆ.

ಎರಡನೆಯ ಕಾರಣವೆಂದರೆ, “ಒಮ್ಮುಖ” ಗೊಂಡಿದೆ ಎಂಬ ಪ್ರಶ್ನೆಯೇ ನಿಖರವಾಗಿ ಸಾಮ್ರಾಜ್ಯ ಶಾಹಿಯಲ್ಲೇ ಇದೆ. ಇದನ್ನು ನೋಡಲು ನಾವು ವಿಶ್ವ ಅರ್ಥವ್ಯ ವಸ್ಥೆಯನ್ನು ನಿರೂಪಿಸುವ ಎರಡನೆಯ ವಿದ್ಯಮಾನವನ್ನು ಸಹಜವಾಗಿಯೇ ಗಮನಿ ಸಬೇಕಾಗಿದೆ. ಅದರ ಬದಲು, ವಿಶ್ವಬ್ಯಾಂಕ್‌ನಂತಹ ಸಂಸ್ಥೆಗಳು ಅದನ್ನು ಮರೆಮಾಚುವ ಪ್ರಯತ್ನದಲ್ಲಿ ಅವು ಚದುರಿಕೆಯ ಸಂಗತಿಯನ್ನು ಮಾತ್ರ ಒತ್ತಿ ಹೇಳುತ್ತವೆ. ನವ ಉದಾರವಾದಿಯುಗದಲ್ಲಿ ಬಂಡವಾಳ ಶಾಹಿಯ ಆಶ್ರಯದಲ್ಲಿ ಜಾಗತಿಕ ಉತ್ತರದಿಂದ ಜಾಗತಿಕದಕ್ಷಿಣಕ್ಕೆ ಆರ್ಥಿಕ ಚಟುವಟಿಕೆಗಳ ಚದುರಿಕೆ ನಡೆದಾಗ ಈ ದಕ್ಷಿಣ ದದೇಶಗಳಲ್ಲಿ ಉತ್ತರಕ್ಕೆ ಹೋಲಿಸಿದರೆ ಸರಾಸರಿ ಜಿಡಿಪಿಯ ಬೆಳವಣಿಗೆಯ ದರ ಹೆಚ್ಚಾಗಿರುವುದು ಕಾಣುತ್ತದೆಯಾದರೂ, ಅದರೊಂದಿಗೇ ಈ ದೇಶಗಳಲ್ಲಿ ಪೌಷ್ಟಿಕಾಂಶದ ಕೊರತೆಯ ಪ್ರಮಾಣದಲ್ಲಿಯೂ ಹೆಚ್ಚಳ ಕಂಡುಬಂದಿದೆ.

ಮತ್ತು ಪೌಷ್ಠಿಕಾಂಶದ ಕೊರತೆ ಒಟ್ಟಾರೆ ಅಭಾವದ ಪ್ರತಿ ಬಿಂಬವೆಂದು ಪರಿಗಣಿಸಿದರೆ, ಜಾಗತಿಕ ದಕ್ಷಿಣದ ದೇಶಗಳಲ್ಲಿ ಆದಾಯದ ಮಟ್ಟದಲ್ಲಿ ಬಹಳಷ್ಟು ಇಳಿಕೆಯಾಗಿರುವ ಪುರಾವೆಗಳಿವೆ, ಅಂದರೆ ಒಟ್ಟು ಬಡತನದ ಪ್ರಮಾಣದಲ್ಲಿ ಹೆಚ್ಚಳ ಕಂಡು ಬಂದಿದೆ. ನಿಜ, ಈ ದೇಶಗಳು ಉತ್ತಮ ರಸ್ತೆಗಳು, ವಿದ್ಯುತ್ ಮತ್ತು ಇತರ ಮೂಲ ಸೌಕರ್ಯಗಳ ಬೆಳವಣಿಗೆಯನ್ನು ಕಂಡಿವೆ, ಜನಗಳು ಅದರ ಪ್ರಯೋಜನವನ್ನು ಪಡೆದಿದ್ದಾರೆ ಎಂಬುದರಲ್ಲಿ ಸಂದೇಹವಿಲ್ಲ; ಆದರೆ ಜನಗಳ ಖಾಸಗೀ ಬಳಕೆಯ ಪ್ರಮಾಣ ಇಳಿದಿರುವುದು ಸಮಾಜವಾದ ಮತ್ತು ಸಮಾಜವಾದ-ಬೆಂಬಲಿತ, ತುಲನಾತ್ಮಕವಾಗಿ ಹೆಚ್ಚು ಸ್ವಾಯತ್ತ ನಿಯಂತ್ರಿತ ಆಡಳಿತ ವ್ಯವಸ್ಥೆ ಕುಸಿದು ಬಿದ್ದ ಮತ್ತು ವಿಶ್ವ ಅರ್ಥ ವ್ಯವಸ್ಥೆಯ ಮೇಲೆ ನವ ಉದಾರವಾದಿ ಬಂಡವಾಳ ಶಾಹಿಯು ಪ್ರಾಬಲ್ಯವನ್ನು ಸ್ಥಾಪಿಸಿದ ಅವಧಿಯಲ್ಲಿಯೇ ಎಂಬುದನ್ನು ಗಮನಿಸಬೇಕು.

ವಿಭಜನೆಯ ಪಲ್ಲಟ

ಆದ್ದರಿಂದ”ಒಮ್ಮುಖತೆ” ಎಂದೆಲ್ಲ ಪ್ರತಿ ಪಾದಿಸುವುದು ಪರಿಸ್ಥಿಯನ್ನು ತಪ್ಪಾಗಿ ಅರ್ಥೈಸಿಕೊಂಡದ್ದರಿಂದಲೇ ಆಗಿದೆ. ಬಂಡವಾಳ ಶಾಹಿ ಜಗತ್ತಿನಲ್ಲಿ ಅಭಿವೃದ್ಧಿ ಹೊಂದಿರುವ ಮತ್ತು ಅಭಿವೃದ್ಧಿಯ ಪರಿಧಿಯ ದೇಶಗಳ ನಡುವೆ ಇದ್ದ ವಿಭಜನಾ ರೇಖೆಯು, ಈಗ ಭೌಗೋಳಿಕವಾಗಿ, ಪರಿಧಿಯಲ್ಲಿರುವ ದೇಶಗಳ ಒಳಗಿರುವ ವಿಭಜನೆಯಾಗಿ ಪಲ್ಲಟಗೊಂಡಿದೆ ಎಂದು ಹೇಳಬಹುದು. ಅಂದರೆ, ಈ ದೇಶಗಳ ಹಿರಿಬೂರ್ಜ್ವಾ ಮತ್ತು ಉಚ್ಚವರ್ಗಗಳ ಮಂದಿ ತಮ್ಮನ್ನು ಈಗ ಈ ವಿಭಜನಾ ರೇಖೆಯ ಆಚೆಯ ಮುಂದುವರೆದ ದೇಶಗಳ ಉಚ್ಚವರ್ಗಗಳ ಮಂದಿಯೊಂದಿಗೆ ತಮ್ಮನ್ನು ಗುರುತಿಸಿಕೊಳ್ಳುತ್ತಿದ್ದಾರೆ. ವಸಾಹತು ಶಾಹಿ-ವಿರೋಧಿ ಹೋರಾಟದ ಸಮಯದಲ್ಲಿ ಸಾಮಾನ್ಯವಾಗಿ ಇದ್ದಂತೆ ತಮ್ಮ ದೇಶಗಳ ಜನರ ಜೊತೆಗೆ ಇಲ್ಲ.

ಸಾಮ್ರಾಜ್ಯ ಶಾಹಿ ಎಂಬ ಪದವು ಎಂದೂ ಭೌಗೋಳಿಕ ವಿಭಜನೆಯನ್ನು ಸೂಚಿಸುವಂತದ್ದು ಆಗಿರಲಿಲ್ಲ. ಅದು ತನ್ನ ಸುತ್ತಮುತ್ತಲಿನ ಮೇಲೆ ಬಂಡವಾಳ ಶಾಹಿ ಉತ್ಪಾದನಾ ವಿಧಾನವನ್ನು ಚಲಾಯಿಸುವ ಬಲವಂತವನ್ನು ಸೂಚಿಸುತ್ತದೆ. ಬೇರೆ ರೀತಿಯಲ್ಲಿ ಹೇಳುವುದಾದರೆ ಅದನ್ನು ಭಿನ್ನವಾಗಿಸಿರುವುದು ರಾಜಕೀಯ ಅರ್ಥಶಾಸ್ತ್ರವೇ ಹೊರತು, ಭೌಗೋಳಿಕ ಗಡಿಗಳಲ್ಲ. ಈ ರಾಜಕೀಯ ಅರ್ಥ ಶಾಸ್ತ್ರದ ಕೆಲವು ಅಂಶಗಳನ್ನು ಮತ್ತೆ ನೆನಪಿಸಿಕೊಳ್ಳುವುದು ಸೂಕ್ತ.

ಬಂಡವಾಳ ಶಾಹಿಯ ದಬ್ಬಾಳಿಕೆ

ಬ್ರಿಟನ್  ನಲ್ಲಿ ಹತ್ತಿ ಜವಳಿ ಉದ್ಯಮದಲ್ಲಿ ಸಂಭವಿಸಿದ ಕೈಗಾರಿಕಾ ಕ್ರಾಂತಿಯೊಂದಿಗೆ ಬಂಡವಾಳ ಶಾಹಿ ಉತ್ಪಾದನಾ ವಿಧಾನವು ಪ್ರವರ್ಧಮಾನಕ್ಕೆ ಬಂದಿತು. ಆದರೆ ಬ್ರಿಟನ್ ಯಾವುದೇ ಕಚ್ಚಾ ಹತ್ತಿಯನ್ನು ಬೆಳೆಯಲು ಸಾಧ್ಯವಿಲ್ಲ. ಆದರೆ ತನ್ನ ನೆಲದಲ್ಲೇ ಬೆಳೆಸಲಾರದ ಅಥವಾ ಸಾಕಷ್ಟು ಪ್ರಮಾಣದಲ್ಲಿ ಅಥವಾ ವರ್ಷ ಪೂರ್ತಿ ಬೆಳೆಯಲು ಸಾಧ್ಯವಾಗದ ಈ ಎಲ್ಲ ಪ್ರಾಥಮಿಕ ಸರಕುಗಳನ್ನು ಅದು ಲಭ್ಯವಾಗಿಸಿಕೊಳ್ಳ ಬೇಕಾಗಿತ್ತು. ಅವುಗಳು ಸಾಮಾನ್ಯವಾಗಿ ಪ್ರಪಂಚದ ಉಷ್ಣವಲಯದ ಮತ್ತು ಅರೆ-ಉಷ್ಣ ವಲಯದ ಪ್ರದೇಶಗಳಲ್ಲಿ ಲಕ್ಷಾಂತರ ರೈತರು ಮತ್ತು ಸಣ್ಣ ಉತ್ಪಾದಕರು ಬೆಳೆಯುವಂತದ್ದು, ಐತಿಹಾಸಿಕವಾಗಿ ಇವು ಜನನಿ ಬಿಡ ಪ್ರದೇಶಗಳು, ಬಹುಮಟ್ಟಿಗೆ ಮೇಲೆ ಉಲ್ಲೇಖಿಸಿರುವ ಪರಿಧಿಯಲ್ಲಿನ ಪ್ರದೇಶಗಳೂ ಕೂಡ ಇವೇ ಆಗಿದ್ದವು. ಬಂಡವಾಳ ಶಾಹಿ ಈ ಪ್ರದೇಶಗಳಿಗೆ ಹರಡಿದಾಗಲೂ ಸಹ, ಇವು ಈ ಸ್ಥಳೀಯ ಬಂಡವಾಳ ಶಾಹಿ ಮತ್ತು ಮುಂದುವೆ ವರೆದ ದೇಶಗಳ ಬಂಡವಾ ಳಶಾಹಿಗಳೂ ಈ ಕೋಟ್ಯಂತರ ಬಂಡವಾಳ ಶಾಹಿಯಲ್ಲದ ಉತ್ಪಾದಕರನ್ನೇ ಅವಲಂಬಿಸ ಬೇಕು. ಇವನ್ನು ಅವರು ಪಡೆಯುವುದು ಕೇವಲ ಹೆಚ್ಚಾಗದ ಬೆಲೆಗಳಲ್ಲಿ ಮಾತ್ರವೇ ಅಲ್ಲ, ಇವು ವಾಸ್ತವವಾಗಿ ಡಾಲರ್‍ ಲೆಕ್ಕಾಚಾರದಲ್ಲಿ ಹಲವು ದಶಕಗಳಿಂದ ಸಂಪೂರ್ಣ ಕುಸಿತವನ್ನೇ ತೋರಿಸಿವೆ. ಉತ್ಪಾದನೆ

ಈ ಸರಕುಗಳವಿನಿಮಯ ಮೌಲ್ಯವು ತುಲನಾತ್ಮಕವಾಗಿ ಕಡಿಮೆ, ಇದು ಈ ಸರಕುಗಳ ಸಣ್ಣ ಉತ್ಪಾದಕರನ್ನು ವರ್ಷಗಳಿಂದ ತೀವ್ರವಾಗಿ ಹಿಂಡಿರುವ ಪರಂಪರೆಗೆ ಸೇರಿದ್ದು. ಆದ್ದರಿಂದ ಈ ಸರಕುಗಳು ವ್ಯವಸ್ಥೆಗೆ ಸಾಕಷ್ಟು ಮುಖ್ಯವೇನಲ್ಲ ಎಂಬ ಸಂಪೂರ್ಣ ತಪ್ಪಾದ ಭಾವನೆ ಸೃಷ್ಟಿಯಾಗಿದೆ. ಏಕೆಂದರೆ ಬಂಡವಾಳ ಶಾಹಿಗೆ ಅವುಗಳು ಬಳಕೆ-ಮೌಲ್ಯಗಳಾಗಿ ಬೇಕೇ ಬೇಕು. ಈಗ, ಅಂತಹ ಸರಕುಗಳನ್ನು, ವಿಶೇಷವಾಗಿ ಉಷ್ಣವಲಯದ ಮತ್ತು ಅರೆ-ಉಷ್ಣವಲಯದ ಕೃಷಿ ಸರಕುಗಳನ್ನು ಈಗಾಗಲೇ ಹೆಚ್ಚು ಕಡಿಮೆ ಸಂಪೂರ್ಣವಾಗಿ ಬಳಸಿರುವ ಭೂ-ಸಮೂಹದಿಂದ ಪಡೆಯ ಬೇಕಾಗಿದೆ. ಅಲ್ಲಿ ನೆಲೆಗೊಂಡಿರುವ ಸಣ್ಣ ಉತ್ಪಾದಕರು “ಭೂಮಿ-ವರ್ಧನೆ” (ಅಂದರೆ ಇಳುವರಿಯನ್ನು ಹೆಚ್ಚಿಸುವ ಕ್ರಮಗಳನ್ನು) ಮತ್ತು ನವೀನ ವಿಧಿ-ವಿಧಾನಗಳನ್ನು ಬಳಸುವಂತಾದರೆ ಬಲವಂತದ ಅಗತ್ಯವಿರುವುದಿಲ್ಲ ಆದರೆ ಅಂತಹ ಆವಿಷ್ಕಾರಗಳು ಮತ್ತು ಅಭ್ಯಾಸಗಳು, ನೀರಾವರಿಯಾಗಿರಲಿ ಅಥವಾ ಹೆಚ್ಚಿನ ಇಳುವರಿ ನೀಡುವ ಬೀಜ ಪ್ರಭೇದಗಳ ಸಂಶೋಧನೆ ಮತ್ತು ಜನಪ್ರಿಯಗೊಳಿಸಲು ಸಾಮಾನ್ಯವಾಗಿ ಪ್ರಭುತ್ವದ ಪ್ರಯತ್ನ ಗಣನೀಯವಾಗಿ ಅಗತ್ಯವಿರುತ್ತದೆ, ಆಧರೆ ಇದು ಬಂಡವಾಳ ಶಾಹಿಯ, ವಿಶೇಷವಾಗಿ ನವ ಉದಾರವಾದಿ ಬಂಡವಾಳ ಶಾಹಿಯ ತೀವ್ರ ಅಸಮಾಧಾನಕ್ಕೆ ತುತ್ತಾಗಿಸುವ ಸಂಗತಿ. ಅದು ಅಂತರರಾಷ್ಟ್ರೀಯ ಬಂಡವಾಳ ಮತ್ತು ಅದ ರಸ್ಥಳೀಯ ಮಿತ್ರರು.

ಜಾಗತಿಕ ದಕ್ಷಿಣದ ಕಾರ್ಪೊರೇಟ್-ಹಣ ಕಾಸು ಕೂಟಗಳನ್ನು ಬಿಟ್ಟು ಬೇರೆಯವರ ಹಿತಾಸಕ್ತಿಗಳನ್ನು ಉತ್ತೇಜಿಸುವ ಯಾವುದೇ ಚಟುವಟಿಕೆಯಲ್ಲಿ ಪ್ರಭುತ್ವವು ತೊಡಗಿಸಿಕೊಳ್ಳುವುದನ್ನು ಅದು ಬಯಸುವುದಿಲ್ಲ, ರೈತರು ಮತ್ತು ಸಣ್ಣ ಉತ್ಪಾದಕರ ಹಿತಾಸಕ್ತಿಗಳನ್ನು ಉತ್ತೇಜಿಸುವುದನ್ನಂತೂ ಖಂಡಿತವಾಗಿಯೂ ಬಯಸುವುದಿಲ್ಲ, ಅದಕ್ಕಾಗಿಯೇ “ಭೂಮಿ-ವರ್ಧನೆ” ಮುಂತಾದ ಕ್ರಮಗಳನ್ನು ಕೈ ಬಿಟ್ಟು ಸ್ಥಳೀಯ ಆದಾಯವನ್ನು ಸಂಕುಚಿತಗೊಳಿಸುವ ಮತ್ತುಆಮೂಲಕ ಆ ಸರಕುಗಳಿಗೆ ಆಂತರಿಕ ಬೇಡಿಕೆಯನ್ನು ಕಡಿತಗೊಳಿಸಿ ತನ್ನ ಪ್ರಾಥಮಿಕ ಸರಕುಗಳ ಅಗತ್ಯ ಪೂರೈಕೆಗಳನ್ನು ಪಡೆಯುತ್ತದೆ. ಇಂತಹ ಕಡಿತ ದಬ್ಬಾಳಿಕೆಯಿಲ್ಲದೆ ಅಸಾಧ್ಯ.

ಜಾಗತಿಕ ದಕ್ಷಿಣದಲ್ಲಿ ತಲಾವಾರು ಆಹಾರಧಾನ್ಯ ಉತ್ಪಾದನೆಯಲ್ಲಿನ ಕುಸಿತ, ಮತ್ತು ಅದಕ್ಕಿಂತ ತೀವ್ರವಾಗಿ  ತಲಾವಾರು ಆಹಾರಧಾನ್ಯಗಳ ಲಭ್ಯತೆಯಲ್ಲಿ ಕುಸಿತ (ಇತ್ತೀಚಿನ ವರ್ಷಗಳಲ್ಲಿ ಜೈವಿಕ ಇಂಧನಗಳ ಕಡೆಗೆ ಆಹಾರಧಾನ್ಯಗಳನ್ನು ತಿಗುಗಿಸಲಾಗುತ್ತಿದೆ) ಈ  ದಬ್ಬಾಳಿಕೆಯ ಪರಿಣಾಮವಾಗಿದೆ, ಪೌಷ್ಟಿಕಾಂಶದ ಕೊರತೆ ಕಂಡು ಬಂದಿರುವುದು ಇದರ ಒಂದು ಅಭಿವ್ಯಕ್ತಿಯಾಗಿದೆ. ಆದ್ದರಿಂದ ಜಾಗತಿಕ ದಕ್ಷಿಣಕ್ಕೆ ಉತ್ಪಾದನೆಯ ಚದುರಿಕೆಯು  ಸಾಮ್ರಾಜ್ಯಶಾಹಿ ಎಂಬ ವಿದ್ಯಮಾನವನ್ನು ಯಾವುದೇ ರೀತಿಯಲ್ಲಿ ತೊಡೆದು ಹಾಕುವುದಿಲ್ಲ.

ಇದನ್ನೂ ನೋಡಿ: ನಾಟಕ | ದೇವರ ಹೆಣ – ಕಥೆ : ಕುಂ. ವೀರಭದ್ರಪ್ಪ, ನಿರ್ದೇಶನ : ವಸಂತ ಗಂಗೇರ್ Janashakthi Media

Donate Janashakthi Media

Leave a Reply

Your email address will not be published. Required fields are marked *