ಬೆಂಗಳೂರು: ಪುಸ್ತಕ ಪ್ರೀತಿ ತಿಂಗಳ ಮಾತುಕತೆ ಕಾರ್ಯಕ್ರಮವನ್ನು ‘ಪುಸ್ತಕ ಪ್ರೀತಿ ‘ ಮಳಿಗೆಯಲ್ಲಿ ಜೂನ್ 24 ರಂದು ನಡೆಯಲಿದೆ. ಕಣ್ಕಟ್ಟು ಪುಸ್ತಕ ಮತ್ತು ಎನ್ಇಪಿ 2020ರ ಕುರಿತು ಚರ್ಚೆ, ಸಂವಾದ ನಡೆಯಲಿದೆ.
ಇದನ್ನೂ ಓದಿ:ಪುಸ್ತಕಪ್ರೀತಿ ತಿಂಗಳ ಮಾತುಕತೆ : ಜೆ.ಎನ್.ಯು ಅಂಗಳದಲ್ಲಿ ರಾಷ್ಟ್ರೀಯವಾದದ ಕ್ಲಾಸುಗಳು
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಿರಿಯ ಸಾಹಿತಿ ಪ್ರೊ.ಎಸ್.ಜಿ.ಸಿದ್ದರಾಮಯ್ಯ ವಹಿಸಲಿದ್ದಾರೆ. ಪುಸ್ತಕ ಕುರಿತು ಸಹಾಯಕ ಪ್ರಾಧ್ಯಾಪಕರಾದ ಪ್ರೊ.ವಿನುತಾ, ಮಾತನಾಡಲಿದ್ದಾರೆ. ಎನ್ಇಪಿ ಸಾಧಕ ಬಾಧಕಗಳ ಕುರಿತು ಸಹಾಯಕ ಪ್ರಾಧ್ಯಾಪಕರಾದ ಡಿ.ಎಚ್.ಡಿ.ಉಮಾಶಂಕರ್ ಮಾಹಿತಿ ಹಂಚಿಕೊಳ್ಳಲಿದ್ದಾರೆ. ಸಹಾಯಕ ಪ್ರಾಧ್ಯಾಪಕ ಡಾ.ರವಿಕುಮಾರ್ ಬಾಗಿ, ಸಹಾಯಕ ಪ್ರಾಧ್ಯಾಪಕ ವಿ.ಎಲ್.ನರಸಿಂಹಮೂರ್ತಿ, ಮತ್ತು ವಿದ್ಯಾರ್ಥಿ ಮುಖಂಡ ಭೀಮನಗೌಡ ಸುಂಕೇಶ್ವರಹಾಳ, ಪ್ರತಿಕ್ರಿಯೆಯನ್ನು ನೀಡಲಿದ್ದಾರೆ.
ಕೌದಿ ಪ್ರಕಾಶನದ ಡಾ.ಮಮತಾ, ಕ್ರಿಯಾ ಮಾಧ್ಯಮದ ಎನ್‌ಕೆ ವಸಂತ್‌ರಾಜ್, ಕೆ.ಎಸ್.ವಿಮಲಾ ಉಪಸ್ಥಿತರಿರುತ್ತಾರೆ. ಈ ಕಾರ್ಯಕ್ರಮವು ಜನಶಕ್ತಿ ಮೀಡಿಯಾದ ಫೆಸ್ಬುಕ್ ಹಾಗೂ ಯುಟ್ಯೂಬ್‌ನಲ್ಲಿ ನೇರ ಪ್ರಸಾರವಾಗಲಿದೆ.
ಕಾರ್ಯಕ್ರಮದ ವಿವರ
ಕಣ್ಕಟ್ಟು ಪುಸ್ತಕ ಮತ್ತು ಹೊಸ ಶಿಕ್ಷಣ ನೀತಿ (ಎನ್ಇಪಿ 2020) ಕುರಿತು ಚರ್ಚೆ, ಸಂವಾದ
ದಿನಾಂಕ : ಶನಿವಾರ 24.6.2023
ಸಮಯ : ಮಧ್ಯಾಹ್ನ 3.30ಕ್ಕೆ,
ಸ್ಥಳ : ಪುಸ್ತಕ ಪ್ರೀತಿ ಅಂಗಳ, ನೆಟ್ಕಲ್ಲಪ್ಪ ವೃತ್ತ, ಬಸವನಗುಡಿ ಹತ್ತಿರ ನಡೆಯುವ ಕಾರ್ಯಕ್ರಮದಲ್ಲಿ ನೀವು ಭಾಗವಹಿಸಿ, ಇತರರನ್ನು ಕರೆತನ್ನಿ.