ಒಳಮೀಸಲಾತಿ: ಆಗಸ್ಟ್‌ 7ರಂದು ಸಚಿವ ಸಂಪುಟ ಸಭೆಯಲ್ಲಿ ಚರ್ಚೆ

ಬೆಂಗಳೂರು: ಪರಿಶಿಷ್ಟ ಒಳಜಾತಿಗಳನ್ನು ವರ್ಗೀಕರಿಸಿ ಮೀಸಲು ಹಂಚಿಕೆ ಮಾಡುವ ಸಂಬಂಧ ನ್ಯಾ. ನಾಗಮೋಹನದಾಸ್‌ ನೇತೃತ್ವದ ಏಕಸದಸ್ಯ ಆಯೋಗದ ವರದಿ ಆಗಸ್ಟ್‌ 7ರಂದು ರಾಜ್ಯ ಸಚಿವ ಸಂಪುಟ ಸಭೆಯ ಮುಂದೆ ಚರ್ಚೆಗೆ ಬರಲಿದೆ. ಒಳಮೀಸಲಾತಿ

ದಲಿತರಲ್ಲೇ ಕೆಲವರಿಗೆ ಖುಷಿ, ಮತ್ತೆ ಕೆಲವು ಜಾತಿಗಳಿಗೆ ಅತೃಪ್ತಿ ತರುವ ಒಳ ಮೀಸಲನ್ನು ‘ಜೇನುಗೂಡಿಗೆ ಕಲ್ಲು’ ಎಂದೇ ವ್ಯಾಖ್ಯಾನಿಸಲಾಗುತ್ತಿದ್ದು, ಈ ಸವಾಲನ್ನು ಮೆಟ್ಟಿನಿಂತು ಬಹುನಿರೀಕ್ಷಿತ ಒಳ ಮೀಸಲು ವಿಚಾರದಲ್ಲಿ ತೀರ್ಮಾನ ಕೈಗೊಳ್ಳುವಲ್ಲಿ ಕ್ಯಾಬಿನೆಟ್‌ ಯಶಸ್ವಿಯಾಗುತ್ತಾ ಎಂಬುದು ಕುತೂಹಲ ಮೂಡಿಸಿದೆ.

ಪರಿಶಿಷ್ಟ ಜಾತಿಗಳ ಮೀಸಲು ಅವಕಾಶವನ್ನು ನಿರ್ದಿಷ್ಟ ಸಮುದಾಯ ಬಳಸಿಕೊಳ್ಳುತ್ತಿದ್ದು, ಪರಿಶಿಷ್ಟರಲ್ಲೇ ಬಹುಸಂಖ್ಯಾತರಾದರೂ ಅವಕಾಶ ವಂಚಿತರಾಗಿದ್ದೇವೆ ಎಂಬುದು ಪರಿಶಿಷ್ಟ ಎಡಗೈ (ಮಾದಿಗ) ಸಮುದಾಯದ ದಶಕಗಳ ದೂರು. ಜನಸಂಖ್ಯೆ ಆಧರಿಸಿ ಒಳ ಮೀಸಲು ನಿಗದಿಯಾಗಬೇಕು ಎಂಬ ಒತ್ತಾಯದಂತೆ ನ್ಯಾ. ನಾಗಮೋಹನದಾಸ್‌ ಆಯೋಗ ಎಲ್ಲ 101 ಪರಿಶಿಷ್ಟ ಒಳಜಾತಿಗಳ ಸಮೀಕ್ಷೆ ನಡೆಸಿ ವರದಿ ನೀಡಿದೆ. ಒಳಜಾತಿಗಳನ್ನು ವರ್ಗೀಕರಿಸಿ ಮೀಸಲು ನಿಗದಿ ಮಾಡಿರುವ ವರದಿ ಸೋರಿಕೆಯಾಗಿರುವ ಬೆನ್ನಲ್ಲೇ ದಲಿತ ಸಮುದಾಯದಲ್ಲೇ ಅಪಸ್ವರಗಳು ಕೇಳಿಬರುತ್ತಿವೆ. ಒಳಮೀಸಲಾತಿ

ಇದನ್ನೂ ಓದಿ: ಧರ್ಮಸ್ಥಳ ಪ್ರಕರಣ: ಪಂಚಾಯತ್‌ಯಿಂದ ದಾಖಲೆಗಳನ್ನು ಪಡೆದುಕೊಂಡ ಎಸ್‌ಐಟಿ ತಂಡ

ಪರಿಶಿಷ್ಟ ಬಲಗೈ (ಛಲವಾದಿ) ಸಮುದಾಯದಿಂದ ವರದಿಗೆ ವಿರೋಧವಿದ್ದು, ಸ್ಪೃಶ್ಯ ಎಸ್‌ಸಿ ಸಮುದಾಯಗಳಿಗೆ ಮೀಸಲು ಪ್ರಮಾಣ ತಗ್ಗಿಸಲಾಗಿದೆ ಎಂಬ ಮಾಹಿತಿಯಿಂದ ಬಂಜಾರ, ಬೋವಿ ಮತ್ತಿತರ ಜಾತಿಗಳ ಪ್ರಮುಖರು ಈಗಾಗಲೇ ಆಕ್ಷೇಪ ಎತ್ತಿದ್ದಾರೆ. ತರಾತುರಿಯಲ್ಲಿಈ ವಿಚಾರದಲ್ಲಿತೀರ್ಮಾನ ಬೇಡ ಎಂದು ಸರಕಾರವನ್ನು ಸ್ಪೃಶ್ಯ ಸಮುದಾಯಗಳ ಶ್ರೀಗಳು ಮತ್ತು ಮುಖಂಡರು ಆಗ್ರಹಿಸಿದ್ದಾರೆ. ಈ ಬೆಳವಣಿಗೆ ಮಧ್ಯೆಯೇ ಹೆಚ್ಚುವರಿ ಅಜೆಂಡಾದೊಂದಿಗೆ ಗುರುವಾರ ಕ್ಯಾಬಿನೆಟ್‌ ಮುಂದೆ ನ್ಯಾ.ನಾಗಮೋಹನದಾಸ್‌ ವರದಿ ಚರ್ಚೆಗೆ ಬರುತ್ತಿದ್ದು, ತೀರ್ಮಾನ ಏನಿರಲಿದೆ ಎಂಬುದು ಕುತೂಹಲ ಕೆರಳಿಸಿದೆ. ಒಳಮೀಸಲಾತಿ

ಇದುವರೆಗೂ ಎಲ್ಲಸಚಿವರು ಒಗ್ಗಟ್ಟಿನ ಮಂತ್ರಿ ಜಪಿಸಿದ್ದಾರೆ. ಆದರೆ, ಸಂಪುಟದಲ್ಲಿವರದಿ ಚರ್ಚೆ ವೇಳೆ ಒಳಮೀಸಲು ಹಂಚಿಕೆ ಪ್ರಮಾಣ ಬಹಿರಂಗವಾದ ಬಳಿಕ ಈ ಸಚಿವರುಗಳ ಪ್ರತಿಕ್ರಿಯೆ ಹೇಗಿರಲಿದೆ? ಪ್ರತಿಪಕ್ಷಗಳ ದಲಿತ ನಾಯಕರು ಹಾಗೂ ಸಮುದಾಯದ ಮುಖಂಡರು ಸಹಮತ ವ್ಯಕ್ತಪಡಿಸುತ್ತಾರಾ ಎಂಬುದು ಮಹತ್ವ ಪಡೆದುಕೊಂಡಿದೆ. ದಲಿತರಲ್ಲೇ ಬಹುಸಂಖ್ಯಾತರಾದ ಎಡಗೈ ಸಮುದಾಯಕ್ಕೆ ನ್ಯಾಯ ದೊರಕಿಸಿಕೊಡುವ ಪ್ರಯತ್ನದಲ್ಲಿಉಳಿದ ಜಾತಿಗಳ ಮೀಸಲು ಪ್ರಮಾಣ ತಗ್ಗಿಸಲಾಗಿದೆ ಎಂಬುದು ಇದಕ್ಕೆ ಕಾರಣವಾಗಿದೆ. ಒಳಮೀಸಲಾತಿ

ತೀರ್ಮಾನ ಅಥವಾ ಮುಂದೂಡಿಕೆ ಸಾಮಾಜಿಕ, ಶೈಕ್ಷಣಿಕ ಸ್ಥಿತಿಗತಿ ಹಾಗೂ ಸರಕಾರಿ ಉದ್ಯೋಗದಲ್ಲಿಪ್ರಾತಿನಿಧ್ಯ ಮಾನದಂಡ ಆಧರಿಸಿ ಪರಿಶಿಷ್ಟ ಒಳಜಾತಿಗಳನ್ನು ವರ್ಗೀಕರಿಸಿ ಮೀಸಲು ಹಂಚಿಕೆ ಮಾಡಿರುವ ನ್ಯಾ.ನಾಗಮೋಹನದಾಸ್‌ ಆಯೋಗದ ವರದಿಯನ್ನು ಗುರುವಾರದ ಕ್ಯಾಬಿನೆಟ್‌ ಸಭೆ ಒಪ್ಪಿ ಜಾರಿ ಮಾಡುತ್ತಾ? ಅಥವಾ ತೀರ್ಮಾನ ಮುಂದೂಡುತ್ತಾ ಎಂಬುದು ಸ್ಪಷ್ಟವಿಲ್ಲ. ವರದಿ ಅನುಷ್ಠಾನದ ಸಾಧಕ -ಬಾಧಕಗಳ ಪರಾಮರ್ಶೆಗೆ ಸಚಿವ ಸಂಪುಟ ಉಪಸಮಿತಿಯೊಂದನ್ನು ರಚಿಸಿ, ತೀರ್ಮಾನವನ್ನು ಕೆಲದಿನಗಳ ಮಟ್ಟಿಗೆ ತಡೆಹಿಡಿಯುತ್ತಾ ಎಂಬುದನ್ನು ಕಾದುನೋಡಬೇಕಿದೆ.

ಇದನ್ನೂ ನೋಡಿ: ಯುವಜನರಲ್ಲಿ ಹೆಚ್ಚುತ್ತಿರುವ ಹೃದಯಾಘಾತಗಳು ಮತ್ತು ಪರಿಹಾರ Janashakthi Media | DYFI

Donate Janashakthi Media

Leave a Reply

Your email address will not be published. Required fields are marked *