ಬೆಂಗಳೂರಿನಲ್ಲಿ ಅಗ್ನಿ ಅವಘಡ: ಹಲವು ಬಸ್‌ಗಳು ಬೆಂಕಿಗಾಹುತಿ

 ಬೆಂಗಳೂರು: ವೀರಭದ್ರ ನಗರದಲ್ಲಿ ಬೆಂಕಿ ಅನಾಹುತ ಉಂಟಾಗಿದ್ದು ಹಲವು ಖಾಸಗಿ ಬಸ್‌ಗಳು ಬೆಂಕಿಗಾಹುತಿಯಾಗಿರುವ ಬಗ್ಗೆ ವರದಿಯಾಗಿದೆ.

ವೀರಭದ್ರನಗರದ ಬಸ್‌ಗಳ ಬಾಡಿ ಬಿಲ್ಡಿಂಗ್ ಮತ್ತು ವೆಲ್ಡಿಂಗ್ ಮಾಡುವ ವರ್ಕ್ ಶಾಪ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಈ ಬೆಂಕಿ ವರ್ಕ್​​ಶಾಪ್‌​ ನಲ್ಲಿರೋ ಇತರೆ ವಾಹನಗಳಿಗೆ ಬೆಂಕಿ ವ್ಯಾಪಿಸುತ್ತಿದೆ.

ಆಕಸ್ಮಿಕವಾಗಿ ಬಸ್​ಗಳಿಗೆ ಬಸ್‌ತಗುಲಿದೆ ಎಂದು ಹೇಳಲಾಗುತ್ತಿದೆ. ಬೆಂಕಿಯ ತೀವ್ರತೆಗೆ ಎರಡು ಬಸ್​ಗಳು ಹೊತ್ತಿ ಉರಿಯುತ್ತಿವೆ. ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಧಾವಿಸಿದ್ದು,ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಯುತ್ತಿದೆ. ಯಾವುದೇ ಪ್ರಾಣ ಹಾನಿ ನಡೆದಿರುವ ಬಗ್ಗೆ ವರದಿಯಾಗಿಲ್ಲ. ಬೆಂಕಿಯ ತೀವ್ರತೆ ಹೆಚ್ಚಾಗುತ್ತಿದ್ದು, ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗುತ್ತಿದೆ. ವರ್ಕ್​ಶಾಪ್‌ ನಿಂದ ಜನರನ್ನು ದೂರ ಕಳುಹಿಸಲಾಗುತ್ತಿದೆ.

ಇದನ್ನೂ ಓದಿ: ಕೇರಳ | ಸ್ಫೋಟ ಪ್ರಕರಣ: 3 ಸಾವು, ಹಮಾಸ್‌ ದೂಷಿಸಿ ಜನರಿಂದ ಛೀಮಾರಿ ಹಾಕಿಸಿಕೊಂಡ ಬಿಜೆಪಿ

ಬೆಂಕಿಯೊಂದಾಗಿ ವೀರಭದ್ರನಗರದ ವ್ಯಾಪ್ತಿಯಲ್ಲಿ ದಟ್ಟ ಹೊಗೆ ಆವರಿಸಿದೆ. ವರ್ಕ್ ಶಾಪ್ ಇರೋ ಮುಖ್ಯರಸ್ತೆಯಲ್ಲಿ ಟ್ರಾಫಿಕ್ ಸಹ ಉಂಟಾಗಿದೆ. ಪೊಲೀಸರು ಟ್ರಾಫಿಕ್ ತಿಳಿಗೊಳಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದಾರೆ.

ಮೊದಲು ಒಂದು ಬಸ್‌ಗೆ ಬೆಂಕಿ ಹತ್ತಿಕೊಂಡಿತ್ತು. ನಂತರ ಪಕ್ಕದಲ್ಲಿ ನಿಲ್ಲಿಸಲಾಗಿದ್ದ ಬಸ್​ಗಳಿಗೆ ಬೆಂಕಿ ವ್ಯಾಪಿಸಿದೆ. ಸುಮಾರು 6 ಬಸ್​ಗಳಿಗೆ ಬೆಂಕಿ ತಗುಲಿದೆ ಎಂಬ ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ.

ಕೆಲ ದಿನಗಳ ಹಿಂದೆ ಬೆಂಗಳೂರಿನ ಕೋರಮಂಗಲ ರಸ್ತೆಯಲ್ಲಿರೋ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಈ ವೇಳೆ ನಾಲ್ಕನೇ ಅಂತಸ್ತಿನಿಂದ ವ್ಯಕ್ತಿಯೋರ್ವ ಜಿಗಿದಿದ್ದನು.

ವಿಡಿಯೋ ನೋಡಿ: ರಸ್ತೆ ಸಾರಿಗೆ ಕಾರ್ಮಿಕರನ್ನು ಶೋಷಿಸುವ ಮೋಟಾರು ತಿದ್ದುಪಡಿ ಕಾಯ್ದೆ ವಾಪಸ್ಸಾಗಲಿ Janashakthi Media

Donate Janashakthi Media

Leave a Reply

Your email address will not be published. Required fields are marked *