ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯರವರು 2026-27ನೇ ಸಾಲಿನ ಆಯವ್ಯಯದಲ್ಲಿರೂ. 4,48,004 ಕೋಟಿ ಗಾತ್ರದ ಬಜೆಟ್ ಮಂಡನೆ ಮಾಡಿದ್ದಾರೆ. ಗ್ಯಾರಂಟಿ ಯೋಜನೆಗಳಿಗಾಗಿ ಫೆಬ್ರವರಿ 2026ರವರೆಗೆ ರೂ. 1,21,598 ಕೋಟಿ ವೆಚ್ಚ ಭರಿಸಿರುವುದು ಪ್ರಶಂಸಾರ್ಹವಾಗಿದೆ. ಆದರೆ, ಸಾರ್ವಜನಿಕ ಶಿಕ್ಷಣ ಮತ್ತು ಆರೋಗ್ಯ ವಲಯವನ್ನು ಕಡೆಗಣಿಸಲಾಗಿದೆ. ನಿರುದ್ಯೋಗಿ ವಿದ್ಯಾವಂತರಿಗೆ ಉದ್ಯೋಗ ಸೃಜನೆಗೆ ಯಾವುದೇ ಹೊಸ ಕ್ರಮಗಳಿಲ್ಲ ಎಂದು ಅಖಿಲ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಎನ್. ಶೋಭಾ ಲೋಕನಾಗಣ್ಣ ಅಸಮಧಾನ ವ್ಯಕ್ತಪಡಿಸಿದ್ದಾರೆ. ನಿರಾಶಾ
ಸರ್ಕಾರವು ಘೋಷಿಸಿರುವ ಹೊಸ ಯೋಜನೆಗಳನ್ನು ಜಾರಿಗೊಳಿಸಲು ನೌಕರ ಸಿಬ್ಬಂದಿಯ ಕೊರತೆ ದೊಡ್ಡ ಪ್ರಮಾಣದಲ್ಲಿದೆ. ವಿವಿಧ ಇಲಾಖೆಗಳಲ್ಲಿ ಮಂಜೂರಾದ ಹುದ್ದೆಗಳ ಪೈಕಿ 2.80 ಲಕ್ಷ ಹುದ್ದೆಗಳು ಖಾಲಿಯಿವೆ. ಈ ಪೈಕಿ ಕೇವಲ 56,432 ಹುದ್ದೆಗಳನ್ನು ಮಾತ್ರವೇ ಮುಂದಿನ ವರ್ಷ ತುಂಬುವುದಾಗಿ ಘೋಷಿಸಿದ್ದು, ಈ ಪೈಕಿ 15,000 ಶಾಲಾ ಕಾಲೇಜುಗಳ ಖಾಲಿ ಹುದ್ದೆಗಳನ್ನು ತುಂಬುವುದಾಗಿ ಹೇಳಲಾಗಿದೆ. ನಿರಾಶಾ
ಇದನ್ನೂ ಓದಿ: Karnataka Budget 2026 Live Updates : ರಾಜ್ಯ ಬಜೆಟ್ 2026-27 | ಬಜೆಟ್ ಗಾತ್ರ 4 ಲಕ್ಷ ಕೋಟಿ
ಕೆಳಸ್ತರದ ಬಹು ಸಂಖ್ಯಾತ ಮಕ್ಕಳ ವಿದ್ಯಾಭ್ಯಾಸಕ್ಕೆ ಆಸರೆಯಾಗಿರುವ ಸರ್ಕಾರಿ ಶಾಲೆಗಳನ್ನು ಬಲಪಡಿಸಬೇಕಾದ ಶಿಕ್ಷಣ ಇಲಾಖೆಯಲ್ಲೇ 80,000 ಹುದ್ದೆಗಳು ಖಾಲಿಯಿವೆ. ಆರೋಗ್ಯ ಇಲಾಖೆಯಲ್ಲಿಯೂ 37,500 ಹುದ್ದೆ ಖಾಲಿ ಬಿದ್ದಿವೆ. ಸರ್ಕಾರಿ ವಲಯದಲ್ಲಿ ಹೊರಗುತ್ತಿಗೆ, ಅತಿಥಿ ನೌಕರರಿಗೆ ಋತುಚಕ್ರ ರಜೆ ಜಾರಿಯಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೇಂದ್ರ ಸರ್ಕಾರವು ಅನುಸರಿಸುತ್ತಿರುವ ನೌಕರ-ವಿರೋಧಿ ನೀತಿಗೆ ಪ್ರತಿಯಾಗಿ ಕೇರಳ ಮತ್ತು ತಮಿಳುನಾಡು ನಂತಹ ನೆರೆಹೊರೆಯ ರಾಜ್ಯಗಳು ನೌಕರರಿಗೆ ಹಳೆಯ ಬಾಕಿ ತುಟ್ಟಿ ಭತ್ಯೆ ಬಿಡುಗಡೆಗೊಳಿಸುವುದರೊಂದಿಗೆ ಖಾತರಿ ಪಿಂಚಣಿ ಪದ್ದತಿಯನ್ನು ಜಾರಿಗೊಳಿಸಿವೆ. ಆದರೆ, ಪ್ರಗತಿಪರ ರಾಜ್ಯಗಳಲ್ಲೊಂದೆ ನಿಸಿರುವ ಕರ್ನಾಟಕ ರಾಜ್ಯ ಸರ್ಕಾರವು ಈ ಬಗ್ಗೆ ಅಧಿಕಾರಿಗಳ ಪರಿಶೀಲನಾ ಸಮಿತಿಯನ್ನು ನಾಮಕಾವಸ್ತೆಗೆಂಬಂತೆ ರಚಿಸಿದ್ದುಬಿಟ್ಟರೆ, ನಿಶ್ಚಿತ ಪಿಂಚಣಿ ಪದ್ದತಿ (ಒಪಿಎಸ್) ಮರುಸ್ಥಾಪನೆ ಬಗ್ಗೆ ಯಾವುದೇ ಪ್ರಸ್ತಾಪವಿಲ್ಲ.
ಈ ಹಿನ್ನೆಲೆಯಲ್ಲಿ, ಇದೊಂದು ನಿರಾಶಾದಾಯಕವಾದ, ನೌಕರ-ವಿರೋಧಿ ಬಜೆಟ್ ಆಗಿದೆ ಎಂದು ಹೇಳಿದರು.
ಇದನ್ನೂ ನೋಡಿ: ಮುಟ್ಟಿನ ರಜೆ ದಯೆಯಲ್ಲ, ಅದು ಹಕ್ಕು — ವಿಶೇಷ ಸೌಲಭ್ಯವಲ್ಲ, ನ್ಯಾಯಯುತ ಸೌಕರ್ಯ Janashakthi Media
