ಕೇಂದ್ರ ಸಚಿವ ಜೋಷಿ ವಿರುದ್ಧ ಕೋಟಿ ರೂಪಾಯಿ ಒಡೆಯ ದಿಂಗಾಲೇಶ್ವರ ಸ್ವಾಮಿ ಸ್ಪರ್ಧೆ

ಬೆಂಗಳೂರು: ಶಿರಹಟ್ಟಿ ಫಕ್ಕೀರೇಶ್ವರ ಮಠದ ದಿಂಗಾಲೇಶ್ವರ ಸ್ವಾಮಿ ಲೋಕಸಭೆ ಚುನಾವಣೆಗೆ ಸ್ಪರ್ಧಿಸುತ್ತಿದ್ದು, ಇಂದು ನಾಮಪತ್ರ ಸಲ್ಲಿಸುವ ವೇಳೆ 9.74 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಘೋಷಿಸಿದ್ದಾರೆ. ದಿಂಗಾಲೇಶ್ವರ ಸ್ವಾಮಿ

ಪಕ್ಷೇತರ ಅಭ್ಯರ್ಥಿಯಾಗಿ ಧಾರವಾಡ ಲೋಕಸಭೆ ಕ್ಷೇತ್ರದಿಂದ ಅಫಿಡವಿಟ್‌ನಲ್ಲಿ ವೀರಶೈವ ಲಿಂಗಾಯತ ಸ್ವಾಮೀ 1.22 ಕೋಟಿ ಮೌಲ್ಯದ ಚರಾಸ್ಥಿಯನ್ನು ಘೋಷಿಸಿದ್ದಾರೆ.

ಇದನ್ನು ಓದಿ: ವಿದ್ಯಾರ್ಥಿನಿಯರೊಂದಿಗೆ ಅನುಚಿತವಾಗಿ ವರ್ತಿಸಿದ ಕಂಡಕ್ಟರ್ ಡ್ರೈವರ್ ಮೇಲೆ ಶಿಸ್ತು ಕ್ರಮ ಜರುಗಿಸಲು ಎಸ್ಎಫ್ಐ ಆಗ್ರಹ

ಕೃಷಿ, ಕೃಷಿಯೇತರ ಭೂಮಿ, ಶಾಲಾ ಕಟ್ಟಡ ಸೇರಿದಂತೆ ಅವರ ಬಳಿ ಇರುವ ಸ್ಥಿರಾಸ್ತಿ ಮೌಲ್ಯ 8.52 ಕೋಟಿ ರೂಪಾಯಿಯದ್ದಾಗಿದ್ದರೆ ಒಟ್ಟು 39.68 ಲಕ್ಷ ರೂಪಾಯಿ ಸಾಲ ಮಾಡಿದ್ದಾರೆ. 48 ವರ್ಷದ ಸ್ವಾಮೀ ವಿರುದ್ಧ ಮೂರು ಪ್ರಕರಣಗಳು ಬಾಕಿ ಉಳಿದಿವೆ.

ಸ್ವಾಮೀ ಬಳಿ ಎರಡು ಟೊಯೊಟಾ ಇನ್ನೋವಾ, ಟ್ರ್ಯಾಕ್ಟರ್ ಮತ್ತು ಶಾಲಾ ಬಸ್ ಇದೆ. ಅಲ್ಲದೆ ಅವರು 4.35 ಲಕ್ಷ ಮೌಲ್ಯದ 7.82 ಕೆಜಿ ಬೆಳ್ಳಿ, 1.17 ಲಕ್ಷ ಮೌಲ್ಯದ 18.9 ಗ್ರಾಂ ಚಿನ್ನವಿದೆ.

ಇದನ್ನು ನೋಡಿ : ಹೆಣ್ಣುಮಕ್ಕಳ ಮೇಲೆ ದೌರ್ಜನ್ಯ ನಡೆಸಿದ ಬಿಜೆಪಿಯನ್ನು ಸೋಲಿಸಿ – ವಸುಂಧರಾ ಭೂಪತಿ Janashakthi Media

Donate Janashakthi Media

Leave a Reply

Your email address will not be published. Required fields are marked *