ಗದಗ: ಕೆ.ಎಸ್‌.ಆರ್.ಟಿ.ಸಿ ಡಿಪೋದಲ್ಲಿ ನಿಲ್ಲಿಸಿದ್ದ ಬಸ್‌ಗಳಲ್ಲಿ ಡೀಸೆಲ್ ಕಳ್ಳತನ

ಗದಗ: ಬೆಟಗೇರಿ ಕೆ.ಎಸ್‌.ಆರ್.ಟಿ.ಸಿ. ಬಸ್ ಡಿಪೋದಲ್ಲಿ ಪಾರ್ಕಿಂಗ್ ಮಾಡಿದ್ದ ಬಸ್ ಗಳಲ್ಲಿನ ಡೀಸೆಲ್ ಕಳ್ಳತನವಾಗಿರುವ ಘಟನೆ ನಡೆದಿದೆ. ಗದಗ

ಡಿ. 19ರ ಗುರುವಾರ ರಾತ್ರಿ ಈ ಕಳ್ಳತನ ನಡೆದಿದ್ದು, ಬಸ್ ಗಳನ್ನು ರಾತ್ರಿ ವೇಳೆ ಪಾರ್ಕ್‌ ಮಾಡುವಾಗ ಡೀಸೆಲ್ ಟ್ಯಾಂಕನ್ನು ತುಂಬಿಸಿ ಇಡಲಾಗಿತ್ತು. ಆದರೆ ಬೆಳಿಗ್ಗೆ, ಚಾಲಕ ಬಂದು ನೋಡಿದಾಗ ಡೀಸೆಲ್ ಕಳ್ಳತನವಾಗಿರುವ ಬಗ್ಗೆ ತಿಳಿದು ಬಂದಿದೆ.

ಇದನ್ನೂ ಓದಿ : ಕೊಪ್ಪಳ : ವಸತಿ ಶಾಲೆಯ ಅಡುಗೆ ಸಹಾಯಕನಿಂದ ವಿದ್ಯಾರ್ಥಿಗಳಿಗೆ ಲೈಂಗಿಕ ಕಿರುಕುಳ

ಬೆಟಗೇರಿ ಡಿಪೋದಲ್ಲಿನ ಬಸ್ ನಿಂದ 200 ಲೀ., 135 ಲೀ. ಹಾಗೂ 186 ಲೀ. ಡೀಸೆಲ್ ಕಳ್ಳತನವಾಗಿದ್ದು, ಒಟ್ಟು 3 ಬಸ್ ಗಳಲ್ಲಿ 44,806 ರೂ. ಗಳ ಒಟ್ಟು 521 ಲೀ. ಡೀಸೆಲ್ ಅನ್ನು ಖದೀಮರು ಕಳ್ಳತನ ಮಾಡಿಕೊಂಡು ಹೋಗಿದ್ದಾರೆ. ಈ ಘಟಕದಲ್ಲಿ ಯಾವುದೇ ಸಿಸಿ ಕ್ಯಾಮರಾಗಳು ಇಲದಿರುವುದು ಕೆ.ಎಸ್.ಆರ್.ಟಿ.ಸಿ. ಘಟಕದ ಭದ್ರತಾ ಲೋಪಕ್ಕೆ ಸಾಕ್ಷಿಯಾಗಿದೆ.

ಕಳ್ಳತನದ ಪ್ರಕರಣದ ಕುರಿತಂತೆ ಘಟಕದ ವ್ಯವಸ್ಥಾಪಕ ರಾಜಶೇಖರ ಧನಾಳ ಅವರು ಡಿ. 22ರಂದು ಬೆಟಗೇರಿ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದು, ಬೆಟಗೇರಿ ಪೊಲೀಸರು ಪ್ರಕರಣ ದಾಖಲಿಕೊಂಡಿದ್ದಾರೆ.

ಇದನ್ನೂ ನೋಡಿ : ಮನುವಾದಿ ಅಮಿತ್ ಶಾ ವಜಾಕ್ಕೆ ದಲಿತ ಹಕ್ಕುಗಳ ಸಮಿತಿ ಆಗ್ರಹ Janashakthi Media

Donate Janashakthi Media

Leave a Reply

Your email address will not be published. Required fields are marked *