ಹಾರೋಹಳ್ಳಿ: ಶೌಚಾಲಯದ ಗುಂಡಿಯಲ್ಲಿ ನವಜಾತ ಶಿಶು ಶವ ಪತ್ತೆ

ಹಾರೋಹಳ್ಳಿ : ಶೌಚಾಲಯದ ಗುಂಡಿಯಲ್ಲಿ ನವಜಾತ ಶಿಶು ಶವ ಪತ್ತೆಯಾಗಿರುವ ಘಟನೆ ಹಾರೋಹಳ್ಳಿಯಲ್ಲಿ ನಡೆದಿದೆ.

ಹಾರೋಹಳ್ಳಿ ತಾಲ್ಲೂಕಿನ ಪ್ರತಿಷ್ಠಿತ ಆಸ್ಪತ್ರೆಯಾದ ದಯಾನಂದ ಸಾಗರ ಆಸ್ಪತ್ರೆಯ ಶೌಚಾಲಯದ ಗುಂಡಿಯಲ್ಲಿ ಗುರುವಾರ ನವಜಾತ ಶಿಶು ಶವ ಪತ್ತೆಯಾಗಿದೆ.ಆಗ ತಾನೆ ಜನಿಸಿರೋ ಮಗುವನ್ನು ಟಾಯ್ಲೇಟ್ ಕಮೋಡ್ ನಲ್ಲಿ ಹಾಕಿ ನೀರನ್ನು ಫ್ಲಶ್ ಮಾಡಿದ್ದು ಶವ ಪೈಪ್ ನಲ್ಲಿ ಸಿಲುಕಿಕೊಂಡಿದೆ.

ಇದನ್ನೂ ಓದಿ : ವಿದ್ಯಾರ್ಥಿನಿಯರ ಜೊತೆ ಅನುಚಿತ ವರ್ತಿನೆ ; ಶಿಕ್ಷಕನ ವಿರುದ್ಧ ದೂರು ದಾಖಲು

ಇದರಿಂದಾಗಿ ಕಟ್ಟಿಕೊಂಡಿದ್ದ ಟಾಯ್ಲೇಟ್ ಪೈಪ್ ಲೈನ್ ಮತ್ತು ಗುಂಡಿಯನ್ನು ಪರಿಶೀಲಿಸಿದಾಗ ಮಗು ಶವ ಪತ್ತೆಯಾಗಿದೆ.

ಘಟನೆ ಕುರಿತು ಆಸ್ಪತ್ರೆ ವೈದ್ಯರು ಹಾರೋಹಳ್ಳಿ ಪೊಲೀಸ್‌ ಠಾಣೆಗೆ ದೂರು ಕೊಟ್ಟಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮಗು ಶವದ ಡಿಎನ್ಎ ಪರೀಕ್ಷೆ ನಡೆಸಿ ಆರೋಪಿ ತಂದೆ-ತಾಯಿ ಪತ್ತೆಗೆ ಮುಂದಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಇದನ್ನೂ ನೋಡಿ : ನಮ್ಮನ್ನು ಗೌರವಿಸುವ ಸಂವಿಧಾನ ಬರಬೇಕಂತೆ ಪೇಜಾವರರೇ “ನಮ್ಮನ್ನು ಅಂದ್ರೆ ನಿಮ್ಮನ್ನಾ” ಮಾತ್ರನಾ? – ಕೆ.ಎಸ್.‌ ವಿಮಲಾ

Donate Janashakthi Media

Leave a Reply

Your email address will not be published. Required fields are marked *