ನಾಡ, ಆಲೂರು ಹಕ್ಲಾಡಿ ಗ್ರಾಮಸ್ಥರಿಂದ ಉಡುಪಿಯಲ್ಲಿ ಧರಣಿ

ಉಡುಪಿ: ಸರಕಾರಿ ಬಸ್ಸುಗಳು ಇಲ್ಲದ ಕುಂದಾಪುರ ಆಲೂರು, ಹೊಯ್ಯಾಣ ಕ್ರಾಸ್, ತಾರಿಬೇರು, ಅಕ್ಷಾಲಿಬೆಟ್ಟು ಕೋಣ್ಕಿ, ನಾಡ, ಮೊವಾಡಿ ಮಾರ್ಗವಾಗಿ ಕುಂದಾಪುರಕ್ಕೆ ಸರಕಾರಿ ಬಸ್ಸಿಗೆ ಪರ್ಮಿಟ್ ನೀಡಬೇಕು ಎಂದು ಆಗ್ರಹಿಸಿ ಇಂದು ಮಣಿಪಾಲದ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಕಚೇರಿ ಎದುರು ಗ್ರಾಮಸ್ಥರು ಧರಣಿ ನಡೆಸಿದರು.

ಸ್ಥಳೀಯ ಮುಖಂಡರಾದ ರಾಜೀವ ಪಡುಕೋಣೆ ಮಾತನಾಡಿ; ನಾವು ಕೇಳುತ್ತಿರುವ ಮಾರ್ಗದಲ್ಲಿ ಯಾವುದೇ ಬಸ್ಸುಗಳು ಓಡಾಡುತ್ತಿಲ್ಲ ಇಲ್ಲಿನ ಗ್ರಾಮೀಣ ಪ್ರದೇಶದ ಜನರು ಹಲವಾರು ವರ್ಷಗಳಿಂದ ಬಸ್ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ.

ಮಕ್ಕಳು ಶಿಕ್ಷಣಕ್ಕಾಗಿ, ಉದ್ಯೋಗ ಖಾತ್ರಿ ಕೂಲಿಕಾರರು ಪ್ರಯಾಣಕ್ಕೆ ದುಬಾರಿ ವೆಚ್ಚ ನೀಡಿ ಆದಾಯ ಕಳೆದುಕೊಳ್ಳುತ್ತಿದ್ದಾರೆ ಪ್ರಾಧಿಕಾರ ಗ್ರಾಮೀಣ ಭಾಗದ ಜನರ ಸಮಸ್ಯೆಗಳನ್ನು ಅರಿತು ಬಸ್ ಸೌಲಭ್ಯ ನೀಡಬೇಕು ಇಲ್ಲವಾದಲ್ಲಿ ನಿರಂತರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಇದನ್ನೂ ಓದಿ: ದೆಹಲಿ, ತಮಿಳುನಾಡು, ಉತ್ತರ ಪ್ರದೇಶ ಚುನಾವಣೆ: ಫೆಬ್ರವರಿ 5ರಂದು ಮತದಾನ

ಕ್ರಷಿಕೂಲಿಕಾರರ ಸಂಘಟನೆಯ ನಾಗರತ್ನ ನಾಡ ಮಾತನಾಡಿ; ಆಲೂರು,ನಾಡ, ಹಕ್ಲಾಡಿ ಗ್ರಾಮದ ಮಹಿಳೆಯರಿಗೆ ಶಕ್ತಿ ಯೋಜನೆ ಸಾರಿಗೆ ಪ್ರಾಧಿಕಾರ ಕೊಡಿಸುವಲ್ಲಿ ಅನ್ಯಾಯ ಮಾಡಿದೆ ಕೂಡಲೇ ಸರ್ಕಾರಿ ಬಸ್ ಆರಂಭಿಸುವುದರ ಮೂಲಕ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದರು.

ಧರಣಿಯನ್ನುದ್ದೇಶಿಸಿ ಮಾತನಾಡಿದ ಸಿಐಟಿಯು ರಾಜ್ಯ ಉಪಾಧ್ಯಕ್ಷ ಬಾಲಕ್ರಷ್ಣ ಶೆಟ್ಟಿ ಅವರು ಸಾರಿಗೆ ಪ್ರಾದಿಕಾರ ಜನರ ಹೋರಾಟಗಳನ್ನು ನಿರ್ಲಕ್ಷಿಸುತ್ತಿದೆ ಈ ಹಿಂದೆ ಕೊಲ್ಲೂರು ಗ್ರಾಮಸ್ಥರು ಹೋರಾಟ ಮಾಡಿ ಬೈಂದೂರು ಕೊಲ್ಲೂರು ಮಾರ್ಗಕ್ಕೆ ಬಸ್ ಓಡಿಸುವಂತೆ ಮಾಡಿದರೂ ಈಗ ಅದನ್ನು ರದ್ದು ಪಡಿಸಿರುವುದು ಖಂಡನೀಯ ಇಂತಹ ವರ್ತನೆ ಪ್ರಾಧಿಕಾರ ಕೈಬಿಡಬೇಕು ಜನರ ಬೇಡಿಕೆಯನ್ನು ಈಡೇರಿಸಲು ಪ್ರಾಧಿಕಾರ ಮುಂದಾಗಬೇಕು ಎಂದು ಹೇಳಿದರು.

ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಶ್ ಕಲ್ಲಾಗರ, ಎಚ್ ನರಸಿಂಹ, ಧರಣಿಯಲ್ಲಿ ಚಂದ್ರಶೇಖರ ವಿ, ಕವಿರಾಜ್ ಎಸ್ ಕಾಂಚನ್, ರಘುರಾಮ ಆಚಾರ್ಯ ಆಲೂರು,ಶೀಲಾವತಿ ಹಡವು, ನಾಗರತ್ನ ಪಡುವರಿ, ನಿಸರ್ಗ, ಬಲ್ಕೀಸ್, ನಳಿನಿ ಉಮೇಶ್ ಕುಂದರ್ ಮೊದಲಾದವರಿದ್ದರು ಡಿವೈಎಫ್ಐ ಮುಖಂಡ ರಾಜೇಶ್ ಪಡುಕೋಣೆ ಸ್ವಾಗತಿಸಿದರು. ನಾಡ ಗ್ರಾಮ ಪಂಚಾಯತ್ ಸದಸ್ಯೆ ಶೋಭಾ ಕೆರೆಮನೆ ವಂದಿಸಿದರು.

ಇದನ್ನೂ ನೋಡಿ: ಬಹುರೂಪಿ| ಬರುತಿಹೆವು ನಾವು ಬರುತಿಹೆವು Janashakthi Media

Donate Janashakthi Media

Leave a Reply

Your email address will not be published. Required fields are marked *