ಬೆಂಗಳೂರು : ಎಲ್ಲಾ ಮಹಿಳೆಯರು ಹೋರಾಡಿದರೆ ಕ್ರಾಂತಿಯಾಗಲಿದೆ, ಧರ್ಮಸ್ಥಳದ ಸುತ್ತಮುತ್ತ ನಡೆದ ಕೊಲೆ, ಅತ್ಯಾಚಾರ, ನಾಪತ್ತೆ ಪ್ರಕರಣದ ತನಿಖೆಗಾಗಿ ನಡೆಯುತ್ತಿರುವ ಹೋರಾಟಕ್ಕೆ ನಾನು ಬೆಂಬಲ ನೀಡುತ್ತೇನೆ ಎಂದು ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌಧರಿ ತಿಳಿಸಿದರು.
ಕೊಂದವರು ಯಾರು? ಆಯೋಜಿಸಿದ್ದ ‘ನನ್ನ ಸಹಿ ನನ್ನ ಧ್ವನಿ’ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.ಕೊಂದವರು ಯಾರು? ಎರಡು ಪದಗಳಲ್ಲಿ ನೊಂದವರ ನೋವಿನ ಧ್ವನಿ ಕಾಣಿಸುತ್ತಿದೆ ಎಂದರು.
ಧರ್ಮಸ್ಥಳದ ಸುತ್ತ ಮುತ್ತ ನಡೆದ ನೂರಾರು ಕೊಲೆಗಳು, ನಾಪತ್ತೆಯಾದವರ ತನಿಖೆಯಾಗಬೇಕು. ಆದರೆ ಚಿನ್ನಯ್ಯನ ಹೇಳಿಕೆಯ ಸುತ್ತ ತನಿಖೆ ನಡೆಸುತ್ತಿದೆ. ಇದು ಆತಂಕಕಾರಿ ಹಾಗಾಗಿ ಅಲ್ಲಿ ನಡೆದ ಕೊಲೆ ಪ್ರಕರಣ, ನಾಪತ್ತೆ ಪ್ರಕರಣಗಳ ತನಿಖೆಯಾಗಬೇಕು ಎಂದು SIT ಗೆ ಪತ್ರ ಬರೆಯಬೇಕಾಯಿತು ಎಂದರು.

ಒಡೆದಾಳುವ ನೀತಿ ಬೇಡ, ಅಲ್ಲಿ ಕೊಲೆಯಾದವರು, ಅತ್ಯಾಚಾರಕೊಳಪಟ್ಟವರು, ನಾಪತ್ತೆಯಾದವರು ಎಲ್ಲರೂ ಹಿಂದೂಗಳೆ. ಆದರೆ ಷಡ್ಯಂತ್ರ ಎಂಬೆಲ್ಲ ಆರೋಪಗಳು ಬಂದವು. ಹೆಣ್ಣಿಗೆ ಜಾತಿ, ಧರ್ಮದ ಕಳಂಕ ಕಟ್ಟಬೇಡಿ ಎಂದು ಆಕ್ರೋಶಿತ ಮಾತುಗಳನ್ನಾಡಿದರು.
ರಾಜ್ಯವ್ಯಾಪಿ ಸಾರ್ವಜನಿಕರಿಂದ ಸಂಘರಹಿಸಿದ ಸಹಿ ಸಂಗ್ರದ ಅರದಜಿಗಳನ್ನು ನಾಗಲಕ್ಷ್ಮಿಯವರಿಗೆ ಕೊಂದವರು ಯಾರು ತಂಡದಿಂದ ಸಲ್ಲಿಸಲಾಯಿತು. ಸಹಿಸಂಗ್ರಹದ ವೇಳೆ ಬಹಳಷ್ಟು ಜನ ಹೋರಾಟಕ್ಕೆ ಬೆಂಬಲ ನೀಡಿದ್ದಾರೆ. ಡಿಸೆಂಬರ್ 16 ರ ಹೋರಾಟವನ್ನು ರಾಜ್ಯದ ಪುರುಷರು, ಮಹಿಳೆಯರು ಬೆಂಬಲಿಸಿದ್ದಾರೆ ಎಂದು ಸಹಿ ಸಂಗ್ರಹ ಅಭಿಯಾನದಲ್ಲಿ ಭಾಗವಹಿಸಿದ್ದ ಸಂಘಟನೆಗಳ ನಾಯಕರು ಅಭಿಪ್ರಾಯ ಹಂಚಿಕೊಂಡರು.
ವೇದಿಕೆಯಮೇಲೆ ಚಂಪಾ, ಗೌರಮ್ಮ, ಮಮತಾ ಯಜಮಾನ್, ವಿ.ಗಾಯಂತ್ರಿ, ಮಧು ಭೂಷಣ್, ಜ್ಯೋತಿ, ಮಲ್ಲಿಗೆ ಸೇರಿದಂತೆ ಅನೇಕರಿದ್ದರು.
