ಬೆಂಗಳೂರು: ಡಿಸೆಂಬರ್ 17 ರಿಂದ 19ರ ವರೆಗೆ ಹರಿದ್ವಾರ್‌ನಲ್ಲಿ ನಡೆದ ಧಾರ್ಮಿಕ ಸಂಸತ್ತಿನ ಕಾರ್ಯಕ್ರಮದಲ್ಲಿ ಹಿಂದು ತೀವ್ರಗಾಮಿ ಸಂಘಟನೆಗಳು ಮತ್ತು ಅದಕ್ಕೆ ಸಹಭಾಗಿಯಾಗಿರುವ ಹಲವು ಹಿಂದು ಧಾರ್ಮಿಕ ಮುಖಂಡರು ಮಾತನಾಡುತ್ತಾ ಭಾರತದಲ್ಲಿರುವ ಮುಸ್ಲಿಮರನ್ನು ತೊಡೆದುಹಾಕಲು ಹಿಂದುಗಳು ಸಶಸ್ತ್ರದಾರಿಗಳಾಗಲು ಬಹಿರಂಗ ಕರೆ ನೀಡಿದ್ದಾರೆ.
ಸಾದ್ವಿ ಅನ್ನಪೂರ್ಣ ಮತ್ತು ಹಿಂದು ಮಹಾಸಭಾದ ಪ್ರಧಾನ ಕಾರ್ಯದರ್ಶಿ ಮುಸ್ಲಿಮರನ್ನು ಕೊಲೆ ಮಾಡಲು ನೇರ ಕರೆ ನೀಡಿದ್ದು, 20 ಲಕ್ಷ ಮುಸ್ಲಿಮರನ್ನು ಕೊಲ್ಲಲು ನೂರು ಹಿಂದೂ ಸೈನಿಕರ ಅಗತ್ಯವಿದೆ ಎಂದು ಹೇಳುತ್ತಾ, ಹೇಗೆ ಸಿಂಹದ ಉಗುರುಗಳಿಂದ ಯಾರು ತಪ್ಪಿಸಿಕೊಳ್ಳಲಾಗದೊ ಹಾಗೆ ಸಿಗಿದು ಹಾಕಬೇಕು ಎಂದು ಹೇಳಿರುವುದು ಖಂಡನೀಯ ಎಂದು ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ತಿಳಿಸಿದೆ.
ಇದನ್ನು ಓದಿ: ಹರಿದ್ವಾರ: ಮುಸ್ಲಿಮರ ವಿರುದ್ಧ ದ್ವೇಷಪೂರಿತ ಭಾಷಣ-ಪ್ರಕರಣ ದಾಖಲು
ಈ ಬಗ್ಗೆ ಹೇಳಿಕೆ ನೀಡಿರುವ ಎಐಡಿಡಬ್ಲ್ಯೂಎ ರಾಜ್ಯ ಅಧ್ಯಕ್ಷೆ ದೇವಿ ʻʻಹಲವು ತಿಂಗಳುಗಳಿಂದ ಮುಸ್ಲಿಮರ ವಿರುದ್ಧ ವಿಷಕಾರುತ್ತಿದ್ದ ಸ್ವಾಮಿ ನರಸಿಂಗನಂದ ಈ ಧರ್ಮ ಸಂಸತ್ತನ್ನು ಸಂಘಟಿಸಿದ್ದರು. ಆರ್ಥಿಕತೆಯ ನಿಷೇಧದಿಂದ ಮುಸ್ಲಿಮರನ್ನು ತಡೆಯಲು ಸಾಧ್ಯವಿಲ್ಲ. ಆಯುಧಗಳನ್ನು ಎತ್ತದೇ ಯಾವುದೇ ಸಮುದಾಯದ ಅಸ್ತಿತ್ವ ಉಳಿಯದು, ಕತ್ತಿಗಳು ಕೆಲಸ ಮಾಡಲಾರವು, ನಮಗೆ ಅತ್ಯಾಧುನಿಕ ಆಯುಧಗಳ ಅಗತ್ಯವಿದೆ. ಹೆಚ್ಚಿನ ಸಂತತಿ/ಸಂತಾನ ಮತ್ತು ಉತ್ತಮ ಆಯುಧಗಳಿಂದ ಮಾತ್ರ ಹಿಂದುಗಳನ್ನು ಕಾಪಾಡಬಹುದು ಎಂದರು. ಮುಸ್ಲಿಮರ ಪಾಲಿಗೆ ಪ್ರಭಾಕರನ್ ಅಥವಾ ಬಿಂದ್ರನ್‌ವಾಲೆ ಆಗುವವರಿಗೆ 1 ಕೋಟಿ ಹಣ ನೀಡುವ ಘೋಷಣೆಯನ್ನು ಮಾಡುವ ಮೂಲಕ ಮುಸ್ಲಿಮರ ವಿರುದ್ಧ ಸಶಸ್ತ್ರ ಹಿಂಸೆಗೆ ಕರೆ ನೀಡಿದ್ದಾರೆ.
ತಾನೇನಾದರು ಪ್ರಧಾನ ಮಂತ್ರಿ ಮನಮೋಹನ್‌ಸಿಂಗ್ ನವರ ಪಾರ್ಲಿಮೆಂಟ್ ನಲ್ಲಿ ಇದ್ದಿದ್ದರೆ, ಈ ದೇಶದ ಮಸ್ಲಿಂಮರು ರಾಷ್ಟ್ರೀಯ ಸಂಪನ್ಮೂಲಗಳನ್ನು ಸರಿಯಾಗಿ ಬಳಸುತ್ತಿದ್ದಾರೆಂದು ಹೇಳುತ್ತಿದ್ದಾಗ ತಾನು ನಾತೊರಾಮ್ ಗೂಡ್ಸೆ ಯವರಂತೆ ಆರು ಸಲ ರಿವಾಲ್ವರ್‌ನಿಂದ ಶೂಟ್ ಮಾಡುತ್ತಿದ್ದೆ ಎಂದು ಬಿಹಾರ್‌ನಲ್ಲಿ ಧರ್ಮ ದಾಸ್ ಮಹಾರಾಜ್ ಹೇಳಿದ್ದ. ಅಲ್ಪಸಂಖ್ಯಾತರ ವಿರುದ್ಧ ಸಶಸ್ತ್ರ ಹೋರಾಟ ಮಾಡಿ ಹಿಂದು ರಾಷ್ಟ್ರ ನಿರ್ಮಾಣಕ್ಕೆ ಮುಂದಾಗದಿದ್ದರೆ 1857 ರ ದಂಗೆಗಿಂತಾ ಭೀಕರ ಯುದ್ಧಕ್ಕೆ ಹೋಗಬೇಕಾದೀತೆಂದು ಎಚ್ಚರಿಸಿದ್ದಾರೆ. ಉತ್ತರಖಂಡ್ ಹಿಂದುಗಳ ರಾಜ್ಯವಾದರೆ ಮುಂದೆ ಮುಸ್ಲಿಂ ಮತ್ತು ಕ್ರಿಶ್ಚಿಯನ್ನರಿಗೆ ಹಬ್ಬ ಹರಿದಿನ ಮಾಡಲು ಅವಕಾಶ ನೀಡುವುದಿಲ್ಲ ಎಂದು ಹೇಳಿದ್ದಾರೆ. ಬಲಪಂಥೀಯ ಸಂಘಟನೆಯಾದ ಹಿಂದು ರಕ್ಷಾ ಸೇನೆಯ ಅಧ್ಯಕ್ಷ ಸ್ವಾಮಿ ಪ್ರಮೋದಾನಂದ ಗಿರಿ ಮಾತನಾಡುತ್ತಾ ʻಸಿದ್ಧರಾಗಿ ಕೊಲ್ಲಲು ಬೇರೆ ದಾರಿಯೇ ಇಲ್ಲ, ಮ್ಯಾನ್‌ಮರ್ ನಾಗರೀಕ ಯುದ್ಧದಂತೆ ಎಲ್ಲ ಪೊಲೀಸ್, ರಾಜಕಾರಣಿಗಳು, ಸೇನೆ ಎಲ್ಲ ಹಿಂದುಗಳು ಆಯುಧಗಳನ್ನು ಕೈಗೆತ್ತಿಕೊಂಡು ಶುದ್ಧಿಕರಿಸಬೇಕಿದೆ. ಅನ್ಯ ದಾರಿಯೇ ಇಲ್ಲ ಎಂದು ಪ್ರಚೋದನಾ ಭಾಷಣ ಮಾಡಿದ್ದಾರೆ ಇವರುಗಳ ಇಂತಹ ಹೇಳಿಕೆಗಳು ಖಂಡನೀಯ ಎಂದು ಎಐಡಿಡಬ್ಲ್ಯೂಎ ಸಂಘಟನೆಯು ತಿಳಿಸಿದೆ.
ಧರ್ಮ ಸಂಸತ್‌ನಲ್ಲಿ ದ್ವೇಷ ಭಾಷಣ ಮಾಡಿರುವ ಯೋಗಿನರಸಿಂಗನಂದ, ಅನ್ನಪೂರ್ಣ ಮತ್ತಿತರರನ್ನು ಬಂಧಿಸಿ ಕಠಿಣವಾದ ಶಿಕ್ಷೆಗೆ ಗುರಿಪಡಿಸಬೇಕೆಂದು ಎಐಡಿಡಬ್ಲ್ಯೂಎ ರಾಜ್ಯ ಸಮಿತಿಯು ಆಗ್ರಹಿಸಿದೆ.
ಎಐಡಿಡಬ್ಲ್ಯೂಎ ರಾಜ್ಯ ಕಾರ್ಯದರ್ಶಿ ಗೌರಮ್ಮ ʻʻದ್ವೇಷದ ಪ್ರಸಾರವನ್ನು ತಡೆಯುವ ಈ ದೇಶದ ಸಂವಿಧಾನದ ಎಲ್ಲ ನಿಭಂದನೆಗಳು ಮತ್ತು ಕಾನೂನು ಕ್ರಮಗಳ ಬಹಿರಂಗ ಉಲ್ಲಂಘನೆ ಮಾಡಲಾಗಿದೆ. ಇದು ದ್ವೇಷದ ಪ್ರಸಾರವಷ್ಟೇ ಅಲ್ಲ, ಮುಸ್ಲಿಮರ ವಿರುದ್ಧ ಹಿಂಸೆಯನ್ನು ಪ್ರಚೋಧಿಸುವ ಕರೆಯಾಗಿದೆ. 5 ದಿನ ನಡೆದಿರುವ ಈ ಕಾರ್ಯಕ್ರಮ ರಾಜ್ಯ ಸರ್ಕಾರದ ಕಾವಲಿನಲ್ಲಿ ನಡೆದಿದೆ. ಅಲ್ಲಿಂದ ಇಡೀ ದೇಶಕ್ಕೆ ಮತ್ತು ಸಾಮಾಜಿಕ ಮಾಧ್ಯಮಗಳ ಮೂಲಕ ಇಡೀ ಜಗತ್ತಿಗೆ ಈ ವಿಷ ಪ್ರಸರಣಗೊಳ್ಳುತಿರುವುದನ್ನು ಆಡಳಿತ ನೋಡುತ್ತಲೇ ಇತ್ತು. ಇಂಥಹ ಸಮಯದಲ್ಲಿ ಪೊಲೀಸರಿಂದ ಮತ್ತೆ ಮತ್ತೆ ಬರುತ್ತಿದ್ದ ವಾಖರಿಕೆಯ ಉತ್ತರ “ನಾವು ಕಣ್ಣಿಟ್ಟಿದ್ದೇವೆ, ಸೂಕ್ತ ಕ್ರಮ ಕೈಗೊಳ್ಳುತ್ತೇವೆ” ಎಂಬುದು ಯಾವ ಪರಿಸ್ಥಿತಿಯಲ್ಲಿ ವ್ಯವಸ್ಥೆ ಇದೆ ಎಂದು ತೋರಿಸುತ್ತದೆ ಎಂದು ತಿಳಿಸಿದ್ದಾರೆ.
ಸೌಮ್ಯವಾಗಿ ಕಾಣುವ ಉತ್ತರಖಂಡ ರಾಜ್ಯದ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿಯವರಡಿಯಲ್ಲಿ ಈ ಸಂಸತ್ತನ್ನು ಸಂಘಟಿಸಲಾಗಿದ್ದು, ಇತ್ತಿಚೆಗೆ ಅವರು ಯತಿ ಮಹಾರಾಜ್ ಅವರಿಗೆ ಗೌರವ ನಮನಗಳನ್ನು ಸಲ್ಲಿಸಿದ್ದರು.
ಈಗಿರುವ ಆಡಳಿತ/ ಪ್ರಭುತ್ವ ಭಾರತದ ಸಂವಿಧಾನವನ್ನು ಎತ್ತಿ ಹಿಡಿಯುತ್ತದೆಯೇ ಅಥವಾ ಭಗವತ್ ಸಂವಿಧಾನವನ್ನು ಜನರ ಮೇಲೆ ಹೇರುವುದೇ ಎಂದು ಈ ಪ್ರಜ್ಞಾವಂತ ಭಾರತೀಯರು ವಿಚಾರ ಮಾಡಬೇಕಿದೆ. ಉತ್ತರ ಪ್ರದೇಶ, ಉತ್ತರಖಂಡ ರಾಜ್ಯಗಳ ಚುನಾವಣೆಗಳ ಸಂದರ್ಭದಲ್ಲಿ ಈ ಧರ್ಮ ಸಂಸತ್ ನನ್ನು ಸಂಘಟಿಸಲಾಗಿದ್ದು ಇದು ಮಹಾತ್ಮ ಗಾಂಧಿ, ಜವಾಹಲ್ ಲಾಲ್ ನೆಹರು, ಮೌಲಾನಾ ಅಜಾದ್, ಭೀಮ್ ರಾವ್ ಅಂಬೇಡ್ಕರ್ ರವರ ಭಾರತದ ಪರಿಕಲ್ಪನೆಯನ್ನು ನಾಶಮಾಡಲಿವೆ ಎಂದು ಸಂಘಟನೆಯು ವಿವರಿಸಿದೆ.
ದ್ವೇಷಪೂರಿತ ಭಾಷಣಗಳ ಮೂಲಕ ನರಮೇಧಕ್ಕೆ ಕರೆ ನೀಡುವುದನ್ನು ನಮ್ಮ ಸಂಘಟನೆಯು ತೀವ್ರವಾಗಿ ಖಂಡಿಸುತ್ತದೆ. ಕೋಮು ಧೃಡೀಕರಣ ಮಾಡಿ ವಾತಾವರಣವನ್ನು ಹದಗೆಡೆಸುವ ಇಂಥಹ ಸಮಾವೇಶಗಳಿಗೆ ಸರ್ಕಾರ ಅವಕಾಶ ನೀಡಬಾರದು ಮತ್ತು ದ್ವೇಷ ರಾಜಕಾರಣ ಮಾಡಿರುವ ಸ್ವಾಮಿ ನರಸಿಂಗನAದಸಾದ್ವಿ ಅನ್ನಪೂರ್ಣ,ಧರ್ಮ ದಾಸ್ ಮಹಾರಾಜ್, ಆನಂದ ಸ್ವರೂಪ ಮಹಾರಾಜ್, ಮತ್ತು ಆ ಕಾರ್ಯಕ್ರಮವನ್ನು ಸಂಘಟಿಸಿದವರನ್ನು ಬಂಧಿಸುವ ಮೂಲಕ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸುತ್ತೇವೆ.