ಸುರತ್ಕಲ್ : ಸುಳ್ಳು ಭರವಸೆಗಳನ್ನು ನೀಡುವ ಬಿಜೆಪಿ ಪಕ್ಷದ ಜನಪ್ರತಿನಿಧಿಗಳ ಜಾಯಮಾನ ಇಂದು ಜನರಿಗೆ ಅರ್ಥ ಆಗಿದೆ. ಸುರತ್ಕಲ್ ಟೋಲ್‌ಗೇಟ್ ತೆರವಿಗೆ ಸಂಬಂಧಪಟ್ಟು ಜನರ ಸಹನೆ ಮುಗಿದಿದೆ. ತೆರವು ಆದೇಶ ಹೊರಡಿಸದೆ ಹಗಲು ರಾತ್ರಿ ಧರಣಿ ನಿಲ್ಲಿಸುವ ಮಾತೇ ಇಲ್ಲ. ಮಹಿಳೆಯರನ್ನು ದೊಡ್ಡ ಸಂಖ್ಯೆಯಲ್ಲಿ ಈ ಹೋರಾಟಕ್ಕಾಗಿ ಸಂಘಟಿಸಿ ಮುಂಚೂಣಿಯಲ್ಲಿ ಇರುತ್ತೇವೆ ಹೋರಾಟ ಯಶಸ್ಸು ಕಂಡ ನಂತರವೇ ವಿಶ್ರಾಂತಿ ಎಂದು ಹೋರಾಟಗಾರ್ತಿ ಮಂಜುಳಾ ನಾಯಕ್ ಹೇಳಿದರು.
ಸುರತ್ಕಲ್ ಟೋಲ್‌ಗೇಟ್ ತೆರವಿಗೆ ಆಗ್ರಹಿಸಿ ನಡೆಯುತ್ತಿರುವ ಅನಿರ್ಧಿಷ್ಟಾವಧಿ ಹಗಲು ರಾತ್ರಿ ಧರಣಿಯ ಮೂರನೇ ದಿನದ ಸಭೆಯನ್ನುದ್ದೇಶಿಸಿ ಮಾತನಾಡಿದರು.
ಮಾಜಿ ವಿಧಾನ ಪರಿಷತ್ ಸದಸ್ಯ ಐವಾನ್ ಡಿಸೋಜ ಮಾತನಾಡಿ, ಜನರನ್ನು ಪ್ರತಿಭಟನೆಯ ಹೆಸರಿನಲ್ಲಿ ಹಿಂಸಾತ್ಮಕ ಹೋರಾಟಗಳಿಗೆ ಇಳಿಸುತ್ತಾ ಅಧಿಕಾರಕ್ಕೇರಿದ ಬಿಜೆಪಿ ಈಗ ಶಾಂತಿಯುತ ಹೋರಾಟಕ್ಕೂ ಅವಕಾಶ ನಿರಾಕರಿಸುತ್ತಿರುವುದು, ಬೆದರಿಸುವುದು ಮಾಡುತ್ತಿದೆ. ಟೋಲ್‌ಗೇಟ್ ತೆರವು ಆಗದಿದ್ದಲ್ಲಿ ಈ ಬಾರಿ ಬಿಜೆಪಿ ದುಬಾರಿ ಬೆಲೆ ತೆರಬೇಕಾಗುತ್ತದೆ ಎಂದರು.
ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ ಸಂಚಾಲಕ ಮುನೀರ್ ಕಾಟಿಪಳ್ಳ, ನ್ಯಾಯವಾದಿ ದಿನೇಶ್ ಹೆಗ್ಡೆ ಉಳೆಪಾಡಿ, ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಲುಕ್ ಮಾನ್ ಬಂಟ್ವಾಳ, ಪುರುಷೋತ್ತಮ ಚಿತ್ರಾಪುರ, ಮುಹಮ್ಮದ್ ಕುಂಜತ್ತಬೈಲ್, ಬಿ ಕೆ ಇಮ್ತಿಯಾಜ್, ಸುನಿಲ್ ಕುಮಾರ್ ಬಜಾಲ್, ಉದಯಚಂದ್ರ ರೈ, ವೈ ರಾಘವೇಂದ್ರ ರಾವ್, ಹರೀಶ್ ಪೇಜಾವರ, ಮನ್ಸೂರ್ ಸಾಗ್, ಸಂತೋಷ್ ಬಜಾಲ್, ಬಾವಾ ಪದರಂಗಿ, ಪ್ರಮೀಳಾ ಶಕ್ತಿನಗರ, ಅಸುಂತ ಡಿಸೋಜ, ಚರಣ್ ಶೆಟ್ಟಿ, ಮಾಧುರಿ ಬೋಳಾರ, ಮೌಶೀರ್ ಸಾಮಣಿಗೆ, ಕೃಷ್ಣ ತಣ್ಣೀರುಬಾವಿ, ರಾಜೇಶ್ ಕುಳಾಯಿ, ರಿಯಾಜ್ ಮಂಗಳೂರು, ಶ್ರೀಕಾಂತ್ ಸಾಲ್ಯಾನ್, ದಿನೇಶ್ ಬಸ್ರೂರು, ಸಮರ್ಥ ಭಟ್, ಶ್ರೀನಾಥ್ ಕುಲಾಲ್, ಸುಪ್ರೀತ್ ಶೆಟ್ಟಿ ಕೆದಿಂಜೆ, ಯೋಗೀಶ್ ಆಚಾರ್ಯ ಇನ್ನಾ, ಪ್ರದೀಪ್ ಬೇಳಾಡಿ ಕಾರ್ಕಳ ಸೇರಿದಂತೆ ವಿವಿಧ ಸಂಘಟನೆಗಳ ಹಲವಾರು ಪ್ರತಿನಿಧಿಗಳು ಉಪಸ್ಥಿತರಿದ್ದರು.