ದಕ್ಷಿಣ ಪದವೀಧರ ಕ್ಷೇತ್ರ ಅಭ್ಯರ್ಥಿ ಪ್ರಸನ್ನ ಎನ್ ಗೌಡ ಬೆಂಬಲಿಸಿ: ಬಡಗಲಪುರ ನಾಗೇಂದ್ರ

  • ರೈತ ಸಂಘ ಈ ಚುನಾವಣೆಯಲ್ಲಿ ಸ್ಪರ್ಧಿಸಲು ಕಳೆದ ಎರಡು ವರ್ಷದಿಂದ ಸಕ್ರಿಯವಾಗಿ ದುಡಿಯುತ್ತ ಪ್ರಚಾರ ಮಾಡುತ್ತಿದೆ ಎಂದ ಪ್ರಸನ್ನ ಎನ್‌ ಗೌಡ
  • ಸಿಪಿಐಎಂ, ಸ್ವರಾಜ್ ಇಂಡಿಯ, ಆಮ್ ಆದ್ಮಿ ಪಾರ್ಟಿ ಸೇರಿದಂತೆ 20 ಸಂಘಟನೆಗಳ ಬೆಂಬಲ

ಹಾಸನ: ಜೂನ್ 13 ರಂದು ನಡೆಯಲಿರುವ ದಕ್ಷಿಣ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ರಾಜ್ಯ ರೈತ ಸಂಘ, ದಲಿತ ಸಂಘರ್ಷ ಸಮಿತಿಗಳ ಒಕ್ಕೂಟ ಹಾಗೂ ಪ್ರಗತಿಪರ ಸಂಘಟನೆಗಳ ಬೆಂಬಲಿತ ಅಭ್ಯರ್ಥಿ ಪ್ರಸನ್ನ ಎನ್. ಗೌಡ ಅವರನ್ನು ಬೆಂಬಲಿಸುವ ಮೂಲಕ ಹೊಸ ನಡೆ-ನುಡಿ ರಾಜಕಾರಣಕ್ಕೆ ಮುನ್ನುಡಿ ಬರೆಯೋಣ ಎಂದು ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ರವರು ಮನವಿ ಮಾಡಿದರು.

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ  ಅಭ್ಯರ್ಥಿ ಪ್ರಸನ್ನ ಎನ್. ಗೌಡ  ಹಲವು ದಶಕಗಳಿಂದಲೂ ರೈತರ, ಶೋಷಿತರ ಪರ ಹೋರಾಡುತ್ತಲೇ ಬಂದಿದ್ದು, ಪ್ರತಿ ಗ್ರಾಮ ಹೋಬಳಿ ಹಾಗೂ ತಾಲೂಕುಗಳಲ್ಲಿರುವ ಎಲ್ಲಾ ಪದವೀಧರರನ್ನು ಭೇಟಿಯಾಗಿ ಮತ ಕೇಳಲಾಗಿದೆ. ದಲಿತ ಸಂಘರ್ಷ ಸಮಿತಿ ಪ್ರತ್ಯೇಕವಾಗಿದ್ದರೂ ಒಕ್ಕೂಟ ಮಾಡಿಕೊಂಡು ರೈತ ಸಂಘರ್ಷ ಬೆಂಬಲಿತ ಅಭ್ಯರ್ಥಿಗೆ ಬೆಂಬಲ ನೀಡಿದೆ. ರೈತ ಸಂಘ ಈ ಚುನಾವಣೆಯಲ್ಲಿ ಸ್ಪರ್ಧಿಸಲು ಕಳೆದ ಎರಡು ವರ್ಷದಿಂದ ಸಕ್ರಿಯವಾಗಿ ದುಡಿಯುತ್ತ ಪ್ರಚಾರ ಮಾಡುತ್ತಿದೆ. ಇದುವರೆಗೆ 1 ಲಕ್ಷ ಪದವಿ ಮತದಾರರನ್ನು ಭೇಟಿ ಮಾಡಿ ಪಕ್ಷದ ಉದ್ದೇಶದ ಬಗ್ಗೆ ತಿಳಿಸಲಾಗಿದೆ. ಹಾಗೂ ಇತರೆ ಪಕ್ಷದ ಮತದಾರರು ಸಹ ನಮ್ಮ ಧ್ಯೇಯ ಮೆಚ್ಚಿ ರೈತ ಸಂಘಕ್ಕೆ ಬೆಂಬಲ ನೀಡುವುದಾಗಿ ಹೇಳಿದ್ದು, ಮೈಸೂರಿನಲ್ಲಿ ಸಹ ಚಳುವಳಿಗಾರರು ಅವರ ಕುಟುಂಬದವರು ಬೆಂಬಲಕ್ಕೆ ನಿಂತಿದ್ದಾರೆ. ಸಿಪಿಐಎಂ, ಸ್ವರಾಜ್ ಇಂಡಿಯ, ಆಮ್ ಆದ್ಮಿ ಪಾರ್ಟಿ ಸೇರಿದಂತೆ 20 ಸಂಘಟನೆಗಳು ಬೆಂಬಲ ಘೋಷಣೆ ಮಾಡಿದ್ದಾರೆ ಎಂದರು.

ಹೊಸದಾಗಿ 1,45 ಲಕ್ಷ ಮಂದಿ ನೊಂದಾಯಿತರಾಗಿದ್ದಾರೆ ರೈತ ಸಂಘದ ಅಭ್ಯರ್ಥಿ ಮೊದಲ ಪ್ರಾಶಸ್ತ್ಯ ಮತಗಳಿಂದ ಗೆಲ್ಲುವ ನಿರೀಕ್ಷೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ನಾನು ಚುನಾವಣಾ ಪ್ರಚಾರಕ್ಕೆ ಹೋದಲೆಲ್ಲಾ ಪದವೀಧರರು ಮತ ನೀಡುವ ಭರವಸೆ ನೀಡಿದ್ದಾರೆ ಹೊಸ ನಡೆ ನುಡಿಯ ರಾಜಕಾರಣಕ್ಕೆ ಮುನ್ನುಡಿ ಬರೆಯುತ್ತಿರುವ ದಿನವಿದು. ಹಾಗಾಗಿ ಈ  ಚಳವಳಿಗಾರರ ಕನಸು ನನಸಾಗುತ್ತಿದೆ. ಆದರೆ ಚಳುವಳಿಯನ್ನು ವೃತ್ತಿ ಮಾಡಿಕೊಂಡ ಕೋಡಿಹಳ್ಳಿಯವರು ಹಸಿರು ಶಾಲು ಹಾಕಲು ಯೋಗ್ಯರಲ್ಲ. ರೈತ ಪರ ಹೋರಾಟ ಚಳುವಳಿಯನ್ನು ಪ್ರವೃತ್ತಿಯಾಗಿ ಕಾಣದೆ ಹಣ ಮಾಡುವ ವೃತ್ತಿಯಾಗಿ ಕೋಡಿಹಳ್ಳಿ ಚಂದ್ರಶೇಖರ್ ಕಂಡಿದ್ದೆ ಇಂದಿನ ಅವರ ಪರಿಸ್ಥಿತಿಗೆ ಕಾರಣ , ಹಸಿರು ಶಾಲು ಹಾಕಲು ಅವರಿಗೆ ಯೋಗ್ಯತೆ ಇಲ್ಲ ಎಂದು ನಾಗೇಂದ್ರ ಟೀಕಿಸಿದರು. ಭ್ರಷ್ಟಾಚಾರ ಹಿನ್ನೆಲೆಯಲ್ಲಿ ಅವರನ್ನು ಸದ್ಯ ಉಚ್ಚಾಟಿಸಿ ಬಸವರಾಜಪ್ಪ ಅವರನ್ನು ಅಧ್ಯಕ್ಷ ರನ್ನಾಗಿ ಕೋಡಿಹಳ್ಳಿ ಬಣ ಘೋಷಣೆ ಮಾಡಿದೆ ಎಂದು ಹೇಳಿದರು.

ನಾವು ಸಹ ಹೊಸ ಸಂಘ ರಚನೆ ಮಾಡಿದ್ದು “ಕರ್ನಾಟಕ ರಾಜ್ಯ ರೈತ ಸಂಘ” ಎಂದು ಹೊಸ ಚಿನ್ಹೆಯೊಂದಿಗೆ ಶಾಲನ್ನು ಬಳಸಲು ಸಮಿತಿಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ ಎಂದರು. ರೈತ ಸಂಘದ ಮುಂದಿನ ಚಳುವಳಿ ಹೋರಾಟದ ಬಗ್ಗೆ ರೂಪುರೇಷೆ ಸೇರಿದಂತೆ ಅಡಳಿತದ ಬಗ್ಗೆ ಸವಿಸ್ತಾರವಾಗಿ ಚರ್ಚಿಸಲು ರಾಜ್ಯದ ರೈತ ಮುಂಖಂಡರ ನೇತೃತ್ವದಲ್ಲಿ, ಜೂನ್ 25 ಮತ್ತು 26 ರಂದು  ದಾವಣಗೆರೆಯಲ್ಲಿ ಸಭೆ ನಡೆಸಲಾಗುವುದು. ರೈತ ಸಂಘ, ದಲಿತ ಸಂಘರ್ಷ ಸಮಿತಿಗಳ ಒಕ್ಕೂಟ, ಆಮ್ ಆದ್ಮಿ ಪಕ್ಷ ಹಾಗೂ ನಾನಾ ಪ್ರಗತಿಪರ ಸಂಘಟನೆಗಳು ಅವರನ್ನು ಬೆಂಬಲಿಸಿವೆ  ಹಾಗಾಗಿ ಹಾಸನದಲ್ಲಿ ಸಹ ಪ್ರಜ್ಞಾವಂತ ಪದವೀಧರ ಮತದಾರರು ರೈತ ಸಂಘದ ಅಭ್ಯರ್ಥಿಗೆ ಮತ ನೀಡುವಂತೆ ಮನವಿ ಮಾಡಿದರು.

ಈ ಪತ್ರಿಕಾಗೋಷ್ಠಿಯಲ್ಲಿ ರೈತ ಸಂಘದ ಚಾಮರಸ ಮಾಲಿ ಪಾಟೀಲ್, ಶಂಕರಪ್ಪ, ಗೋವಿಂದ ರಾಜ್, ರಘು, ಸಿಪಿಐಎಂ ಮುಖಂಡರಾದ ಧರ್ಮೇಶ್ ಇತರರು ಉಪಸ್ಥಿತರಿದ್ದರು.

Donate Janashakthi Media

Leave a Reply

Your email address will not be published. Required fields are marked *