ದಾಖಲೆ ಪರಿಶೀಲನೆಗಾಗಿ ಮಾತ್ರ ವಾಹನಗಳನ್ನು ತಡೆಯದಿರಿ: ಪ್ರವೀಣ್ ಸೂದ್ ಸೂಚನೆ

ಬೆಂಗಳೂರು: ನಗರದಲ್ಲಿ ಇನ್ನು ಮುಂದೆ ಎಲ್ಲೆಂದರಲ್ಲಿ ವಾಹನಗಳನ್ನು ತಡೆದು ದಾಖಲಾತಿ ಪರಿಶೀಲನೆ ನೆಪದಲ್ಲಿ ಪೊಲೀಸರು ಕೈಗೊಳ್ಳುವುದು ನಿಲ್ಲಿಸಬೇಕೆಂದು ರಾಜ್ಯ ಪೊಲೀಸ್ ಇಲಾಖೆಯ ಡಿಜಿ ಮತ್ತು ಐಜಿಪಿ ಪ್ರವೀಣ್ ಸೂದ್ ಸೂಚನೆ ನೀಡಿದ್ದಾರೆ.

ಎಲ್ಲೆಂದರಲ್ಲಿ ವಾಹನ ಸವಾರಿಗೆ ತಡೆದು ತೊಂದರೆ ಕೊಡುವುದನ್ನು ನಿಲ್ಲಿಸುತ್ತಿರುವ ಬಗ್ಗೆ ಟ್ವಿಟ್ಟರ್‌ ಬಳಕೆದಾರರೊಬ್ಬರು ‘ರಸ್ತೆಯಲ್ಲಿ ಎಲ್ಲೆಂದರಲ್ಲಿ ವಾಹನ ತಡೆದು ಪರಿಶೀಲನೆ ನಡೆಸುವ ಪೊಲೀಸರ ಕ್ರಮದ’ ಕುರಿತು ಉಲ್ಲೇಖಿಸಿದ್ದರು.

ಈ ಹಿಂದೆ ಸಂಚಾರ ವಿಭಾಗದ ಎಸಿಪಿಯಾಗಿದ್ದ ಪ್ರವೀಣ್ ಸೂದ್ ‘ದಾಖಲೆಗಳ ಪರಿಶೀಲನೆ ಹೆಸರಿನಲ್ಲಿ ಅನಾವಶ್ಯಕವಾಗಿ ವಾಹನಗಳನ್ನು ತಡೆದು ನಿಲ್ಲಿಸುವುದಕ್ಕೆ ಬ್ರೇಕ್ ಹಾಕಿದ್ದರು. ಈಗ ಡಿಜಿ, ಐಜಿಪಿಯಾಗಿರುವ ಅವರಿಂದ ಮತ್ತೊಮ್ಮೆ ಅದೇ ನಿಯಮ ನಿರೀಕ್ಷಿಸಬಹುದೇ’ ಎಂದು ಟ್ವೀಟ್​ ಮಾಡಿದವರು ಉಲ್ಲೇಖಿಸಿದ್ದರು.

ಟ್ವೀಟ್​ಗೆ ಪ್ರತಿಕ್ರಿಯಿಸಿರುವ ಪ್ರವೀಣ್ ಸೂದ್ ‘ಸಂಚಾರ ನಿಯಮಗಳನ್ನು ಉಲ್ಲಂಘಿಸಿದ ವಾಹನಗಳನ್ನು ದಾಖಲಾತಿ ಪರಿಶೀಲನೆ ಹೆಸರಿನಲ್ಲಿ ಅನಾವಶ್ಯಕವಾಗಿ ತಡೆಯದಂತೆ’ ಸೂಚಿಸಿದ್ದಾರೆ. ಕೇವಲ ಪಾನಮತ್ತರಾಗಿ ವಾಹನ ಚಾಲನೆ ಮಾಡುತ್ತಿದ್ದಾರೆಯೇ ಎಂದು ಬಗ್ಗೆ ಮಾತ್ರ ಪರಿಶೀಲಿಸಬಹುದು ಎಂದು ನಗರ ಪೊಲೀಸ್ ಆಯುಕ್ತರು ಹಾಗೂ ಸಂಚಾರ ವಿಭಾಗದ ಜಂಟಿ ಆಯುಕ್ತರಿಗೂ ತಿಳಿಸಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *