ಡಿಜಿ ಹಳ್ಳಿ, ಕೆಜಿ ಹಳ್ಳಿ ಗಲಭೆ ಪ್ರಕರಣ – ಸಂಪತ್ ರಾಜ್ ಗೆ ಜಾಮೀನು

ಬೆಂಗಳೂರು ಫೆ 13: ಡಿ.ಜೆ. ಹಳ್ಳಿ,ಕೆ.ಜಿ. ಹಳ್ಳಿ ಗಲಭೆ ಪ್ರಕರಣ ಸಂಬಂಧ ಬಂಧನಕ್ಕೆ ಒಳಗಾಗಿದ್ದ ಮಾಜಿ ಮೇಯರ್‌ ಸಂಪತ್‌ರಾಜ್‌ಗೆ ಹೈಕೋರ್ಟ್‌ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.

ಜಾಮೀನು ಕೋರಿ ಸಂಪತ್‌ರಾಜ್‌ ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸಿದ ನ್ಯಾ| ಜಾನ್‌ ಮೈಕೆಲ್‌ ಕುನ್ಹಾ ಅವರಿದ್ದ ಏಕಸದಸ್ಯ ನ್ಯಾಯಪೀಠ ಶುಕ್ರವಾರ ಜಾಮೀನು ನೀಡಿದೆ.

ಪ್ರಕರಣ ಕುರಿತ ಪೊಲೀಸರ ತನಿಖೆ ಅಂತಿಮ ಹಂತಕ್ಕೆ ಬಂದಿದೆ. ಈಗಾಗಲೇ ತನಿಖಾಧಿಕಾರಿಗಳು ನ್ಯಾಯಾಲಯಕ್ಕೆ ಎರಡು ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ. ಈ ಹಂತದಲ್ಲಿ ಆರೋಪಿಗೆ ಜಾಮೀನು ನೀಡಬಹುದು ಎಂದು ನ್ಯಾಯಪೀಠ ಆದೇಶದಲ್ಲಿ ಅಭಿಪ್ರಾಯಪಟ್ಟಿದೆ.

ಸಂಪತ್ ನನ್ನನ್ನು ಸುಮ್ಮನೆ ಬಿಡುತ್ತಾನಾ, ಅಖಂಡ ಅಳಲು : ನನ್ನ ಮನೆಯನ್ನೆ ಸುಟ್ಟ ಸಂಪತ್ ಹಾಗೂ ಆತನ ಬೆಂಬಲಿಗರು ನನ್ನನ್ನು ಹಾಗೆ ಬಿಡುತ್ತಾರಾ? ನನ್ನನ್ನೂ ಸುಟ್ಟರೆ ಯಾರು ಹೊಣೆ ಎಂದು ಹೈ ಕೋರ್ಟ ಆದೇಶವನ್ನು ಶಾಸಕ ಅಖಂಡ ಶ್ರೀನಿವಾಸ ಶ್ರೀನಿವಾಸಮೂರ್ತಿ ಪ್ರಶ್ನಿಸಿದ್ದಾರೆ. ಮಾಧ್ಯಮಗಳ ಜೊತೆ ಮಾತನಾಡುತ್ತಾ, ಸಂಪತ್‌ರಾಜ್‌ ಅವರನ್ನು ಪಕ್ಷದಿಂದ ಅಮಾನತು ಮಾಡುವಂತೆ ಮನವಿ ಮಾಡಿದ್ದೇನೆ. ಅಗತ್ಯ ಬಿದ್ದರೆ ಸೋನಿಯಾ ಗಾಂಧಿಯವರಿಗೂ ಪತ್ರ ಬರೆಯುತ್ತೇನೆ. ನನ್ನ ಜತೆ ಸಿದ್ದರಾಮಯ್ಯ, ಜಮೀರ್‌ ಅಹಮದ್‌ ಇದ್ದಾರೆ. ನನಗೆ ನ್ಯಾಯ ಸಿಗುವ ಭರವಸೆ ಇದೆ ಎಂದು ಹೇಳಿದರು.

ಸಂಪತ್‌ರಾಜ್‌ ಮೇಲೆ ಕ್ರಮಕ್ಕೆ ನಾನು ಒತ್ತಡ ಹಾಕಿದ್ದೇನೆ. ಆದರೂ ಅಧ್ಯಕ್ಷರು ಏನೂ ಕ್ರಮ ತೆಗೆದುಕೊಂಡಿಲ್ಲ. ಸಂಪತ್‌ಗೆ ಶಿಕ್ಷೆಯಾಗಲೇ ಬೇಕು ಎಂದು ಡಿಕೆಶಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

Donate Janashakthi Media

Leave a Reply

Your email address will not be published. Required fields are marked *