ಮಹಾರಾಷ್ಟ್ರ: ಮಹಾರಾಷ್ಟ್ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಸೋಲಿನ ಹೊಣೆಹೊತ್ತಿರುವ ಡಿಸಿಎಂ ದೇವೇಂದ್ರ ಫಡ್ನವೀಸ್ ತಮ್ಮನ್ನು ಕರ್ತವ್ಯದಿಂದ ಮುಕ್ತಗೊಳಿಸುವಂತೆ ಬಿಜೆಪಿಯನ್ನು ಒತ್ತಾಯಿಸಿದ್ದಾರೆ.
ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, “ಮಹಾರಾಷ್ಟ್ರದಲ್ಲಿ ಇಂತಹ ಫಲಿತಾಂಶಗಳ ಜವಾಬ್ದಾರಿಯನ್ನು ತೆಗೆದುಕೊಂಡು ಪಕ್ಷವನ್ನು ಮುನ್ನಡೆಸುವುದಾಗಿ ಹೇಳಿದ್ದಾರೆ. ಸೋಲಿನ
ಇದನ್ನೂ ಓದಿ: ವಿಶ್ವ ಪರಿಸರ ದಿನದ ಅಂಗವಾಗಿ ಹಸಿರು ಜಗತ್ತನ್ನು ನಿರ್ಮಾಣಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಕರೆ
ಪಕ್ಷಕ್ಕಾಗಿ ಶ್ರಮಿಸಲು ಸರ್ಕಾರದ ಜವಾಬ್ದಾರಿಯಿಂದ ನನ್ನನ್ನು ಮುಕ್ತಗೊಳಿಸುವಂತೆ ಬಿಜೆಪಿ ಹೈಕಮಾಂಡ್‌ಗೆ ಫಡ್ನವೀಸ್ ಮನವಿ ಮಾಡಿದ್ದಾರೆ.
ಹಿರಿಯ ಬಿಜೆಪಿ ಮುಖಂಡ ಫಡ್ನವೀಸ್ 2014 ರಿಂದ 2019ರವರೆಗೆ ಹುದ್ದೆಯಲ್ಲಿದ್ದರು. ಉದ್ಭವ್ ಠಾಕರೆ ನೇತೃತ್ವದ ಅವಿಭಜಿತ ಶಿವಸೇನೆಯೊ ಜೊತೆ ಗಠ್‌ಬಂಧನ್ ಮಾಡಿಕೊಂಡಿದ್ದರು.
ಪಕ್ಷದ ಹಿರಿಯ ಮಾಲೀಕರಿಗೆ ಮನವಿ ಮಾಡುವುದಾಗಿ ಸುದ್ದಿಗೋಷ್ಠಿಯಲ್ಲಿ ಹೇಳಿದ ದೇವೇಂದ್ರ ಫಡ್ನವೀಸ್, ಸರ್ಕಾರದ ಜವಾಬ್ದಾರಿಯಿಂದ ತಮ್ಮನ್ನು ವಿಮುಕ್ತಗೊಳಿಸುವಂತೆಯೂ ಹಾಗೂ ಹೊರಗಿನಿಂದ ಕೆಲಸ ಮಾಡಲು ಅವಕಾಶ ನೀಡುವಂತೆ ಹೇಳಿದ್ದಾರೆ.
ದೇವೇಂದ್ರ ಫಡ್ನವೀಸ್ ರಾಜೀನಾಮೆ ಮಹಾರಾಷ್ಟ್ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ನಿರಾಶಾದಾಯಕ ಪ್ರದರ್ಶನ ಕಂಡ ಬೆನ್ನಲ್ಲೆ ಮುನ್ನಲೆಗೆ ಬಂದಿದೆ.
ಬಿಜೆಪಿ ಪಕ್ಷವು 2019 ರ ಚುನಾವಣೆಯಲ್ಲಿ ಮಹಾರಾಷ್ಟ್ರದಲ್ಲಿ 48 ಸ್ಥಾನಗಳ ಪೈಕಿ 23 ಸೀಟುಗಳನ್ನು ಗೆದ್ದಿತ್ತು. ಆದರೆ, ಈ ಬಾರಿ ಕಳಪೆ ಪ್ರದರ್ಶನದ ಕಾರಣ ಕೇವಲ 9 ಸೀಟುಗಳನ್ನಷ್ಟೇ ತನ್ನದಾಗಿಸಿಕೊಳ್ಳಲು ಸಾಧ್ಯವಾಯಿತು.ಮೋದಿಯ ಹೆಸರಿನಲ್ಲಿ ಬಿಜೆಪಿ ಇಲ್ಲಿ ಚುನಾವಣೆ ಎದುರಿಸಿತ್ತು ಎನ್ನುವುದು ಗಮನಾರ್ಹ.
ಇದನ್ನೂ ನೋಡಿ: ಲೋಕಮತ 2024 | ಐದು ರಾಜ್ಯಗಳಲ್ಲಿ ನಡೆಯದ ಬಿಜೆಪಿ ಆಟ | ನಾಯ್ಡು, ನಿತೀಶ್ ಕಿಂಗ್‌ಮೇಕರ್ Janashakthi Media