ದೇವೇಗೌಡರು ಇರೋವರೆಗೂ ಜೆಡಿಎಸ್​ನಲ್ಲೇ ಇರುತ್ತೇನೆ; ವೈಎಸ್​ವಿ ದತ್ತ 

  • ಕಾಂಗ್ರೆಸ್​ಗೆ ಸೇರುವ ವದಂತಿಯನ್ನು ತಳ್ಳಿ ಹಾಕಿದ ವೈಎಸ್​ವಿ ದತ್ತ

ಬೆಂಗಳೂರು: ಜೆಡಿಎಸ್ನಾಯಕ ಹಾಗೂ ಮಾಜಿ ಶಾಸಕ ವೈಎಸ್ವಿ ದತ್ತ ಕಾಂಗ್ರೆಸ್ಗೆ ಸೇರಲಿದ್ದಾರೆ ಎಂಬ ಬಗ್ಗೆ ಕೆಲವು ದಿನಗಳಿಂದ ಸುದ್ದಿಗಳು ಹರಿದಾಡುತ್ತಿದ್ದವು. ಬಗ್ಗೆ ಇಂದು ಸ್ಪಷ್ಟನೆ ನೀಡಿರುವ ವೈಎಸ್ವಿ ದತ್ತ, ದೇವೇಗೌಡರು ಇರುವವರೆಗೂ ನಾನು ಜೆಡಿಎಸ್ತೊರೆಯುವುದಿಲ್ಲ. ಮುಂದೆಯೂ ಜೆಡಿಎಸ್ನಲ್ಲಿಯೇ ಇರುತ್ತೇನೆ ಎಂದಿದ್ದಾರೆ.

ವಿಧಾನಸೌಧದಲ್ಲಿ ಜೆಡಿಎಸ್ ಮಾಜಿ ಶಾಸಕ ವೈ.ಎಸ್.ವಿ ದತ್ತ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ನಾನು 22‌ ವರ್ಷದ ಹುಡುಗನಾಗಿದ್ದಾಗ ರಾಜಕೀಯಕ್ಕೆ ಪ್ರವೇಶಿಸಿದೆ. ಜೆಪಿ ಅವರ ತತ್ವ, ಸಿದ್ಧಾಂತ ಮೆಚ್ಚಿ ಬಂದವನು ನಾನು. ಅವರ ತತ್ವ, ಸಿದ್ಧಾಂತಗಳಿಗೆ ಅನುಗುಣವಾಗಿಯೇ ನಡೆದುಕೊಂಡಿದ್ದೇನೆ. ಜೆಡಿಎಸ್​ ಪಕ್ಷ ತತ್ವ ಸಿದ್ಧಾಂತ ಮುರಿಯುವ ಸಂದರ್ಭದಲ್ಲಿ ಪಕ್ಷದ ವೇದಿಕೆಯಲ್ಲಿಯೇ ಅದರ ವಿರುದ್ಧ ಮಾತನಾಡುತ್ತೇನೆ. ಆದರೆ, ಯಾವುದೇ ಕಾರಣಕ್ಕೂ ಜೆಡಿಎಸ್​ ಪಕ್ಷದಿಂದ ದೂರ ಸರಿಯುವುದಿಲ್ಲ ಎಂದಿದ್ದಾರೆ.

ದೇವೇಗೌಡರು ಇರುವವರೆಗೂ ನಾನು ಜೆಡಿಎಸ್‌ನಲ್ಲಿ‌ ಇರುತ್ತೇನೆ. ಜೆಡಿಎಸ್​ನಿಂದ ಎಂಎಲ್ಎ ಹಾಗೂ ಎಂಎಲ್‌ಸಿಯಾಗಿ ಕೆಲಸ ಮಾಡಿದ್ದೇನೆ ಎಂದು ವೈಎಸ್​ವಿ ದತ್ತ ಹೇಳಿದ್ದಾರೆ. ಈ ಬಗ್ಗೆ ನಿನ್ನೆ ಟ್ವಿಟ್ಟರ್​ನಲ್ಲೂ ಸ್ಪಷ್ಟನೆ ನೀಡಿದ್ದ ಅವರು, ನನ್ನ ತಲೆಯಲ್ಲಿ ಇದುವರೆಗೂ ಬಂದಿಲ್ಲದ ಆಲೋಚನೆಯನ್ನು ಮಾಧ್ಯಮಗಳು ತಾವೇ ಊಹಿಸಿಕೊಂಡು ಪ್ರಸಾರ ಮಾಡುತ್ತಿವೆ ಎಂದಿದ್ದರು.

ಸುದ್ದಿಯನ್ನು ಇವರೇ ಸೃಷ್ಟಿಸಿ ಪ್ರಸಾರ ಮಾಡುವ ಮುನ್ನ ನಮ್ಮದೊಂದು ಪ್ರತಿಕ್ರಿಯೆ ಕೇಳಬೇಕಲ್ಲವೇ? ಸುಮ್ಮನೆ ಇವನ್ನೆಲ್ಲ ನಿರ್ಲಕ್ಷಿಸಿ ಜೆಡಿಎಸ್​ ಪಕ್ಷ ಸಂಘಟನೆ ಕಡೆ ಗಮನ ಕೊಡೋಣ ಎಂದು ವೈಎಸ್​ವಿ ದತ್ತ ತಾವು ಕಾಂಗ್ರೆಸ್​ಗೆ ಸೇರುವ ವದಂತಿಯನ್ನು ತಳ್ಳಿ ಹಾಕಿದ್ದರು. ಇಂದು ಈ ಬಗ್ಗೆ ನೇರವಾಗಿ ಸ್ಪಷ್ಟನೆ ನೀಡಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *