ಹಾಸನ: ಮಹಿಳಾ ಮೀಸಲಾತಿ ಘೋಷಿಸಿದಾಗ ಇದ್ದ ಮಹಿಳಾ ಕಾಳಜಿ ಈಗ್ಯಾಕೆ ದೇವೇಗೌಡರಿಗೆ ಪೆನ್‌ಡ್ರೈವ್ ಸಂತ್ರಸ್ತೆಯರ ವಿಷಯದಲ್ಲಿ ಇಲ್ಲ ಎಂದು ಸಿಐಟಿಯು ರಾಜ್ಯಾಧ್ಯಕ್ಷೆ ವರಲಕ್ಷ್ಮೀ ಎಸ್ ಪ್ರಶ್ನಿಸಿದ್ದಾರೆ. ಮಹಿಳಾ
ವಿವಿಧ ಜನಪರ ಸಾಮಾಜಿಕ ಹೋರಾಟಗಾರರು, ವಿವಿಧ ಸಂಘಟನೆಗಳು ಒಗ್ಗಟ್ಟಾಗಿ ಹಾಸನದಲ್ಲಿಂದು ವಿಕೃತ ಲೈಂಗಿಕ ಹಗರಣದ ಆರೋಪಿ ಪ್ರಜ್ವಲ್ ರೇವಣ್ಣ ಬಂಧನ್ಕಕೆ ಆಗ್ರಹ, ಲೈಂಗಿಕ ದೌರ್ಜನ್ಯಕ್ಕೊಳಗಾದವರಿಗೆ ಆತ್ಮಸ್ಥೈರ್ಯ ತುಂಬುವ, ಹೆಣ್ಣು ಸಂಕುಲದ ಘನತೆ ಎತ್ತಿ ಹಿಡಿಯಲು “ಹೋರಾಟದ ನಡಿಗೆ ಹಾಸನದ ಕಡೆಗೆ” ಅಡಿಬರಹದಡಿ ಹಾಸನ ಚಲೋ ಬೃಹತ್ ಕಾರ್ಯಕ್ರವನ್ನು ಆಯೋಜಿಸಿವೆ. ಈ ಹಾಸನ ಚಲೋ ಕಾರ್ಯಕ್ರಮವನ್ನುದ್ದೇಶಿಸಿ ವರಲಕ್ಷ್ಮೀ ಮಾತನಾಡಿದರು.
ಇದನ್ನೂ ಓದಿ: ಮೇ31ಕ್ಕೆ ಭವಾನಿ ರೇವಣ್ಣ ನಿರೀಕ್ಷಣಾ ಜಾಮೀನು ಆದೇಶ ಕಾಯ್ದಿರಿಸಿದ ಕೋರ್ಟ್
ಲೈಂಗಿಕ ಪ್ರಕರಣ ಹಾಗೂ ಅಶ್ಲೀಲ ಪೆನ್‌ಡ್ರೈವ್ ರುವಾರಿ ವಿದೇಶದಲ್ಲಿ ತಲೆಮರಿಸಿಕೊಂಡಿರುವ ಹಾಸನ ಸಂಸದ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ತಮ್ಮ ಮೊಮ್ಮಗ ಪ್ರಜ್ವಲ್ ರೇವಣ್ಣರಿಂದ ದೌರ್ಜನ್ಯಕ್ಕೊಳಗಾಗಿರುವ ಮಹಿಳೆಯರ ಸಂತ್ರಸ್ತೆಯರ ವಿಷಯದಲ್ಲಿ ನ್ಯಾಯ ಒದಗಿಸಲು ಕಾಳಜಿ ವಹಿಸುತ್ತಿಲ್ಲ .ಈ ಸಮಾಜದ ಸ್ವಾಸ್ಥ್ಯವನ್ನು ಕಡೆಸಿ ಹೆಣ್ಣಿನ ಘನತೆಯನ್ನು ಕುಗ್ಗಿಸಿರುವ ವ್ಯಕ್ತಿಗೆ ನೀಡುವ ಶಿಕ್ಷೆ ಇಂತಹ ಕೆಲಸ ಮಾಡುವ ಯಾರಿಗೇ ಆದರೂ ಎಚ್ಚರಿಕೆಯ ಗಂಟೆ ಆಗಬೇಕು. ಯಾವ ಮಹಿಳೆಯ ಮೇಲೆ, ಯಾವ ಪುರುಷ ಬಲಾತ್ಕಾರ ಮಾಡಿ ಆಕೆ ಇರೋದೆ ನಮ್ಮ ಅನುಭೋಗಕ್ಕೆ ಎಂಬ ಮನಸ್ಥಿತಿಯ ಪ್ರಜ್ವಲನಂತಹ ವ್ಯಕ್ತಿಗೆ ತಕ್ಕ ಪಾಠ ಕಲಿಸಲು ಈ ಹೋರಾಟ ನಡಿತಿದೆ.
ಹುಬ್ಬಳ್ಳಿಯ ನೇಹಾ ಹತ್ಯೆಯಾದ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಹಾಗೂ ಅವರ ಚಮಚ ಸಂಘಟನೆಗಳು, ಬಿಜೆಪಿ ನಾಯಕರು ಸಾಲು ಸಾಲು ಪ್ರತಿಭಟನೆ ಮಾಡಿ ಆ ಕುಟುಂಭವನ್ನು ಭೇಟಿ ಮಾಡಿದವು. ಆದರೆ, ಇಂದು ಹಾಸನದ ಯಾವ ಹೆಣ್ಣುಮಕ್ಕಳನ್ನು ಸಾಂತ್ವಾನ ಮಾಡಲು ಯಾಕೆ ಬಂದಿಲ್ಲ. ಈ ರಾಜಕೀಯ ದೊಂದರಾಟವನ್ನು ನೋಡಿಕೊಂಡು ಯಾಕೆ ಸುಮ್ಮನಿದ್ದಾರೆ ಎಂದು ವರಲಕ್ಷ್ಮೀ ಪ್ರಶ್ನಿಸಿದರು. .
ಮಹಿಳಾ ಮೀಸಲಾತಿ ಪರಿಚಯಿಸಿದಾಗ ಮಹಿಳೆಯರ ಬಗ್ಗೆ ನಮಗೆ ಕಾಳಜಿ ಇದೆ ಅಂತ ದೇವೇಗೌಡರು ಹೇಳಿದರು. ಆದರೆ, ಹಾಸನದ ಹೆಣ್ಣುಮಕ್ಕಳ ಬಗ್ಗೆ ಯಾಕೆ ಆ ಕಾಳಜಿ ಮಾಜಿ ಪ್ರಧಾನಿ ಹಾಗೂ ಹಾಲಿ ಪ್ರಧಾನಿಯಲ್ಲಿ ಕಾಣ್ತಿಲ್ಲ. ಹಾಸನದ ಅಕ್ಕತಂಗಿಯರೇ ನಮ್ಮ ಹಕ್ಕುಗಳು ಯಾರ ಬಿಕ್ಷೆಯೂ ಅಲ್ಲ, ಹೋರಾಟದ ಫಲವಾಗಿ ನಮಗೆ ಸಿಕ್ಕಂತವು. ಈ ಸಂದರ್ಭದಲ್ಲಿ ಕೇರಳದ ವೀರ ಮಹಿಳೆ ನಂಗೇಲಿಯನ್ನು ನೆನೆಯಬೇಕು. ಸ್ತನ ತೆರಿಗೆ ವಿರುದ್ಧ ಒಬ್ಬಂಟಿಯಾಗಿ ಹೋರಾಡಿ ಸ್ತನವನ್ನೇ ಕತ್ತರಿಸಿ ಕೊಟ್ಟ ನಂಗೇಲಿ, ಮಗುವನ್ನು ಬೆನ್ನಿಗೆ ಕಟ್ಟಿಕೊಂಡು ಶತ್ರುಗಳ ರುಂಢ ಚಂಡಾಡಿದ ಜಾನ್ಸಿರಾಣಿ ಲಕ್ಷ್ಮಿಬಾಯಿ, ಕಿತ್ತೂರು ರಾಣಿ ಚೆನ್ನಮ್ಮ ನಮಗೆ ನೆನಪಾಗಲಿಬೇಕು. ಈ ದೌರ್ಜನ್ಯದ ಸಂಧರ್ಭದಲ್ಲೂ ನಾವೆಲ್ಲರೂ ಗಟ್ಟಿಯಾದ ಹೋರಾಟ ಮಾಡಬೇಕು ಎಂದು ಕರೆ ನೀಡಿದರು.
ಸಾಮಾಜಿಕ ಹೋರಾಟಗಾರ್ತಿ ಮಲ್ಲಿಗೆ ಮಾತನಾಡಿ, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ, ಮಾಜಿ ಸಚಿವ ರೇವಣ್ಣ ಹಾಗೂ ಬಿಜೆಪಿಯವರು ಏನೂ ಗೊತ್ತಿರದವರಂತೆ ನುಣಚಿಕೊಂಡರು. ಈ ನುಣುಚುಕೋರರಿಗೆ ಈ ಹೋರಾಟ ಒಂದು ಪಾಠ ಕಲಿಸಲಿದೆ. ಅಪರಾಧಗಳ ಹೊಣೆ ಪ್ರತಿಬಾರಿಯೂ ಹೆಣ್ಣುಮಕ್ಕಳು ಹೊತ್ತುಕೊಳ್ಳುವುದು ಬೇಡ.. ಈ ನುಣುಚುಕೋರರನ್ನು ರಾಜಕೀಯದಿಂದ ನಿವೃತ್ತಿಗೊಳಿಸುವ ಹೋರಾಟ ಇದಾಗಿದೆ. ಹಿರಿಯ , ಮುತ್ಸದ್ದಿ ಎಂದು ಕರೆಯಿಸಿಕೊಳ್ಳುವ ದೇವೆಗೌಡರು, ಪ್ರಜ್ವಲ್ಲ ರೇವಣ್ಣನ ಮೇಲೆ ಕಾನೂನು ಕ್ರಮಕ್ಕೆ ಒತ್ತಾಯಿಸಬೇಕು. ರಾಜ್ಯ ಸರ್ಕಾರ ನಿದ್ದೆಯಿಂದ ಎದ್ದು ಬಂದು ದೌರ್ಜನ್ಯಕ್ಕೊಳಗಾದವರ ನ್ಯಾಯ ಕೇಳಬೇಕು ಎಂದು ಆಗ್ರಹಿಸಿದರು.
ಇದನ್ನೂ ನೋಡಿ: ಪ್ರಜ್ವಲ್ ರೇವಣ್ಣ – ಲೈಂಗಿಕ ಹತ್ಯಾಕಾಂಡ ಆರೋಪಿJanashakthi Media