ಬೆಂಗಳೂರು: ದೇವನಹಳ್ಳಿ ಭೂಸ್ವಾಧೀನದ ವಿರುದ್ಧ ನಡೆಯುತ್ತಿರುವ ರೈತ ಹೋರಾಟದ ಹಿನ್ನೆಲೆಯಲ್ಲಿ ರೈತ ಮುಖಂಡರ ಜೊತೆಗೆ ಸಿಎಂ ಸಿದ್ದರಾಮಯ್ಯ ಅವರ ಜೊತೆಗಿನ ಸಭೆ ಅಪೂರ್ಣಗೊಂಡಿದೆ.
ವಿಧಾನಸೌಧದಲ್ಲಿ ಶುಕ್ರವಾರ ನಡೆದ ಸಭೆಯಲ್ಲಿ ರೈತ ಮುಖಂಡರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಯಾವುದೇ ಕಾರಣಕ್ಕಾಗಿಯೂ ಭೂಮಿಯನ್ನು ಬಿಟ್ಟುಕೊಡಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಸಭೆಯಲ್ಲಿ ನಟ ಪ್ರಕಾಶ್ ರೈ, ಸಿಐಟಿಯು ರಾಜ್ಯಾಧ್ಯಕ್ಷೆ ಎಸ್ ವರಲಕ್ಷ್ಮಿ, ಪ್ರಧಾನ ಕಾರ್ಯದರ್ಶಿ ಮೀನಾಕ್ಷಿ ಸುಂದರಂ, ರೈತ ಹೋರಾಟಗಾರ ಬಡಗಲಪುರ ನಾಗೇಂದ್ರ, ಚುಕ್ಕಿ ನಂಜುಂಡ ಸ್ವಾಮಿ, ಯು. ಬಸವರಾಜ್, ನೂರ್ ಶ್ರೀಧರ್, ಕಾರಳ್ಳಿ ಶ್ರೀನಿವಾಸ, ರಮೇಶ್ ಪ್ರಭಾ ಬೆಳವಂಗಲ ಸೇರಿದಂತೆ ಹೋರಾಟಗಾರು ಸಭೆಯಲ್ಲಿ ಭಾಗಿಯಾಗಿದ್ದರು.
ಇದನ್ನೂ ಓದಿ : ಭೂಮಿ ಸ್ವಾಧೀನ ವಿರೋಧಿಸಿ ತರಕಾರಿ, ಹಣ್ಣು ಸಮೇತ ವಿಧಾನಸೌಧ ಪ್ರವೇಶಿಸಿದ ರೈತರು
ರೈತರ ಸಭೆ ಬಳಿಕ ಸಿಎಂ ಸಿದ್ದರಾಮಯ್ಯ ಮಾತನಾಡಿ, ಚನ್ನರಾಯಪಟ್ಟಣ ಹೋರಾಟಗಾರರ ಸಭೆ ಕರೆದಿದ್ದೆ. ಅನೇಕ ರೈತಪರ ಹೋರಾಟಗಾರರು ಭಾಗವಹಿಸಿದ್ರು.ಭೂಸ್ವಾಧೀನ ಸಂಬಂಧ ಫೈನಲ್ ನೋಟೀಫಿಕೇಷನ್ ಆಗಿಬಿಟ್ಟಿದೆ. ಹಾಗಾಗಿ ಕಾನೂನು ಗೊಂದಲಗಳು ಇವೆ. ಸಮಸ್ಯೆ ಇತ್ಯರ್ಥಕ್ಕೆ ಸಮಯ ಬೇಕು ಅಂತ ಹೇಳಿದ್ದೇನೆ ಎಂದರು. ಸರ್ಕಾರಕ್ಕೆ ಹತ್ತು ದಿನ ಸಮಯ ಬೇಕು ಅಂತ ಹೇಳಿದ್ದೇನೆ. 15 ನೇ ತಾರೀಕು ಬೆಳಿಗ್ಗೆ ರೈತರ ಜೊತೆ ಸಭೆ ನಡೆಯಲಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ಸಭೆಯ ಕುರಿತಾಗಿ ಮಾತನಾಡಿದ ನಟ ಪ್ರಕಾಶ್ ರಾಜ್, ಅಂತಿಮ ಅಧಿಸೂಚನೆ ಹೊರಡಿಸುವ ಮೊದಲು ಕಾನೂನು ಅಂಶಗಳನ್ನು ನೋಡಬೇಕು ಎಂದು ಸಿಎಂ ತಿಳಿಸಿದ್ದಾರೆ. ಬಿಜೆಪಿ ಸರ್ಕಾರ ಮೊದಲ ಅಧಿಸೂಚನೆ ಹೊರಡಿಸಿ ಗಾಯ ಮಾಡಿದೆ. ಗಾಯ ವಾಸಿ ಮಾಡುತ್ತೇವೆ ಅನ್ನುವ ನೀವೇ ಈಗ ಗಾಯ ಹೆಚ್ಚು ಮಾಡುತ್ತಿದ್ದೀರಿ ಎಂದು ಹೇಳಿದ್ದೇವೆ ಎಂದು ಪ್ರಕಾಶ್ ರೈ ತಿಳಿಸಿದರು.
ಹೋರಾಟದ ಹಿನ್ನೆಲೆ : ದೇವನಹಳ್ಳಿ ತಾಲ್ಲೂಕಿನ ಚನ್ನರಾಯಪಟ್ಟಣ ಹೋಬಳಿಯಲ್ಲಿ ಹೈಟೆಕ್ ಡಿಫೆನ್ಸ್ ಏರೋಸ್ಪೇಸ್ ಪಾರ್ಕ್ ನಿರ್ಮಾಣಕ್ಕಾಗಿ 1282 ಎಕರೆ ಭೂಮಿ ಬೇಕಾಗಿದೆ. ಹೀಗಾಗಿ ರಾಜ್ಯ ಕಾಂಗ್ರೆಸ್ ಸರ್ಕಾರವು ದೇವನಹಳ್ಳಿ ಸುತ್ತಮುತ್ತಲಿನ ಹತ್ತು ಗ್ರಾಮಗಳ ಭೂಮಿ ಸ್ವಾಧೀನಪಡಿಸಿಕೊಳ್ಳುವುದಕ್ಕೆ ಮುಂದಾಗಿದೆ. ಇದನ್ನು ವಿರೋಧಿಸಿ ರೈತರು ಮತ್ತು ಜನಪರ ಸಂಘಟನೆಗಳು 1,189 ದಿನಗಳಿಂದ ಹೋರಾಟ ನಡೆಸುತ್ತಾ ಬಂದಿದ್ದರೆ.
ಸಿಎಂ ಸಭೆ ನಂತರ ರೈತ ನಾಯಕರ ನಿರ್ಣಯದ ನೇರ ಪ್ರಸಾರ
