ಭೂಮಿ ತಂಟೆಗೆ ಬಂದರೆ ಸರ್ಕಾರದ ಮಂತ್ರಿಗಳು ರಸ್ತೆಯಲ್ಲಿ ತಿರುಗಾಡಲು ಸಾಧ್ಯವಿಲ್ಲ – ಬಡಗಲಪುರ ನಾಗೇಂದ್ರ

ಬೆಂಗಳೂರು: ಭೂಮಿ ತಂಟೆಗೆ ಬಂದರೆ ರಸ್ತೆಯಲ್ಲಿ ತಿರುಗಾಡಲು ಸಾಧ್ಯವಿಲ್ಲ!’ “ನಂಜುಂಡಸ್ವಾಮಿ ಅವರ ಶಿಷ್ಯರಾಗಿರುವುದರಿಂದ ಸಿದ್ದರಾಮಯ್ಯ ಅವರ ಮೇಲೆ ನಂಬಿಕೆ ಇದೆ. ಆ ನಂಬಿಕೆಯನ್ನು ಉಳಿಸಿಕೊಳ್ಳಿ. ಎಂ.ಬಿ. ಪಾಟೀಲ್ ಮುಖ್ಯಮಂತ್ರಿ ಆಗಬೇಕೆನ್ನುವ ವಿಶ್ವಾಸದಲ್ಲಿ ನೀವು ಇದ್ದೀರಿ. ಆದರೆ, ಇದೀಗ ಭೂಮಿಯನ್ನು ಕೈ ಬಿಡದಿದ್ದರೆ, ಮುಂದೆ ನೀವು ವಿಧಾನ ಸೌಧಕ್ಕೆ ಆಯ್ಕೆ ಆಗುವುದಕ್ಕೂ ಸಾಧ್ಯವಿಲ್ಲ. ಭೂಮಿ ತಂಟೆಗೆ ಬಂದರೆ, ನೀವು ರಸ್ತೆಯಲ್ಲಿ ಸುಲಭವಾಗಿ ತಿರುಗಾಡುವುದಕ್ಕೆ ಸಾಧ್ಯವಿಲ್ಲ” ಎಂದು ನಾಗೇಂದ್ರ ನೇರವಾಗಿ ಸವಾಲು ಹಾಕಿದರು.

ಪ್ರೀಡಂಪಾರ್ಕ್‌ನಲ್ಲಿ ನಡೆಯುತ್ತಿರುವ ನಾಡ ಉಳಿಸಿ ಸಮಾವೇಶ’ದಲ್ಲಿ ಮಾತನಾಡಿದ ಅವರು, ದೇವನಹಳ್ಳಿ ಭೂಸ್ವಾಧೀನ ವಿರೋಧಿ ಹೋರಾಟವನ್ನು ರಾಜ್ಯದ ಇತಿಹಾಸದಲ್ಲಿ ‘ಐತಿಹಾಸಿಕ ಹೋರಾಟ’.ರೈತರು ಇಷ್ಟು ಸುದೀರ್ಘ ಹೋರಾಟ ನಡೆಸಿದ್ದು ಇದೆ ಮೊದಲು ಎಂದು ಬಣ್ಣಿಸಿದರು.

ಇದನ್ನೂ ಓದಿ : ರೈತರ ಓಟು ನಮಗೆ ಬೇಕಾಗಿಲ್ಲ ಎಂದು ಹೇಳುವ ಧೈರ್ಯ ಸಿದ್ದರಾಮಯ್ಯ ಸರ್ಕಾರಕ್ಕೆ ಇದೆಯಾ? ಎಸ್‌ಕೆಎಂ ನಾಯಕರ ಪ್ರಶ್ನೆ

ಸರ್ಕಾರವು ಬ್ರಿಟಿಷರ ಪದ್ಧತಿಗಳನ್ನೇ ಮುಂದುವರೆಸುತ್ತಿದೆ ಎಂದು ತೀವ್ರ ವಾಗ್ದಾಳಿ ನಡೆಸಿದ ಅವರು,  “ಒಂದು ಕಡೆ ಮೋದಿ ಸರಕಾರ, ಮತ್ತೊಂದು ಕಡೆ ಸಿದ್ದರಾಮಯ್ಯ ಸರಕಾರ. ಎರಡು ಬೇರೆ ಬೇರೆ ಪಕ್ಷಗಳು, ಆದರೆ ಅವುಗಳ ನೀತಿಗಳು ಒಂದೇ. ಇವೆರಡೂ ಕಾರ್ಪೊರೇಟ್‌ ನೀತಿಗಳನ್ನು ಮುಂದುವರೆಸುತ್ತಿವೆ. ಆ ನಿಟ್ಟಿನಲ್ಲಿ ಭೂಮಿಗೆ ಕೈ ಹಾಕಕ್ಕೆ ಬಂದಿವೆ” ಎಂದು ಅವರು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಸಮಾವೇಶದಲ್ಲಿ ಸಿಐಟಿಯು ರಾಜ್ಯಾಧ್ಯಕ್ಷೆ ಎಸ್‌ ವರಲಕ್ಷ್ಮಿ, ಪ್ರಧಾನ ಕಾರ್ಯದರ್ಶಿ ಮೀನಾಕ್ಷಿ ಸುಂದರಂ, ಸಂಯುಕ್ತ ಹೋರಾಟ ಕರ್ನಾಟಕದ ನಾಯಕರಾದ ಮಾರೇಗೌಡ, ಗೋಪಿನಾಥ್, ರಮೇಶ್ ಚೀಮಾಚನಹಳ್ಳಿ, ಅಶ್ವಥ್ಥಪ್ಪ, ಪ್ರಭಾ ಬೆಳವಂಗಲ, ರಘು, ನೂರ್ ಶ್ರೀಧರ್, ಎಚ್.ಆರ್.ಬಸವರಾಜಪ್ಪ,  ಡಾ.ಸಿದ್ದನಗೌಡ ಪಾಟೀಲ್, ಗುರುಪ್ರಸಾದ್ ಕೆರಗೋಡು, ಯು ಬಸವರಾಜ, ಚುಕ್ಕಿ ನಂಜುಂಡಸ್ವಾಮಿ, ವಿ ನಾಗರಾಜ್, ಪಿ ಪಿ ಅಪ್ಪಣ್ಣ, ಡಿ.ಎಚ್.ಪೂಜಾರ್, ಕೆ.ವಿ.ಭಟ್, ಮಾವಳ್ಳಿ ಶಂಕರ್‌, ರಾಷ್ಟ್ರೀಯ ನಾಯಕಾರ ದರ್ಶನ್‌ ಪಾಲ್‌, ಯುದ್‌ವೀರ್‌ ಸಿಂಗ್‌, ರಾಕೇಶ್‌ ಟಿಕಾಯತ್‌, ಡಾ.ಸುನೀಲಮ್‌, ವಿಜು ಕೃಷ್ಣನ್‌, ಪಿ,ಟಿ.ಜಾನ್‌, ನಟ ಪ್ರಕಾಶ್ ರಾಜ್, ಪತ್ರಕರ್ತ ಇಂದೂಧರ ಹೊನ್ನಾಪುರ, ಚಿಂತಕ ಎಸ್.ಆರ್.ಹಿರೇಮಠ್‌ ಉಪಸ್ಥಿತರಿದ್ದರು.

ಇದನ್ನೂ ನೋಡಿ : LIVE | ನಾಡ ಉಳಿಸಿ ಸಮಾವೇಶ | ಬಲವಂತದ ಭೂ ಸ್ವಾಧೀನದ ವಿರುದ್ಧ ಅನ್ನದಾತರ ಧರಣಿ

 

ಸಿಎಂ ಜೊತೆಗಿನ ಸಭೆಗೆ ತಾವು ಬೆಳದ ಹಣ್ಣು, ಹೂ, ತರಕಾರಿಗಳನ್ನು ಒಯ್ಯುತ್ತಿರುವ ರೈತ ನಾಯಕರು

 

Donate Janashakthi Media

Leave a Reply

Your email address will not be published. Required fields are marked *