ಬಳ್ಳಾರಿ: “ಸಂಡೂರಿನಲ್ಲಿ ಕುದುರೆಮುಖ ಕಬ್ಬಿಣದ ಅದಿರು ಕಂಪನಿ ನಡೆಸಲು ಉದ್ದೇಶಿಸಿರುವ ‘ದೇವದಾರಿ ಗಣಿ’ಯನ್ನು ಯಾವುದೇ ಕಾರಣಕ್ಕೂ ನೀಡಬಾರದು” ಎಂದು ಅಕ್ಟೋಬರ್ 27ರಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸರ್ವೋದಯ ಕರ್ನಾಟಕದ ಉಗ್ರನರಸಿಂಹೇಗೌಡ ಆಗ್ರಹಿಸಿದರು.
“ಗಣಿಗಾರಿಕೆಗೆ ಸ್ಥಳೀಯರ ವಿರೋಧವಿದೆ. ನಾವು ಅವರ ಪರ ಇದ್ದೇವೆ. ಗಣಿಗಾರಿಕೆಯಿಂದ ಸಂಡೂರಿನಲ್ಲಿ ಲಾರಿ ಚಾಲಕ ಮತ್ತು ಕ್ಲೀನರ್ ಕೆಲಸ ಸಿಗುವುದೇ ಹೊರತು ಬೇರೆ ಉದ್ಯೋಗ ಸಿಗಲ್ಲ” ಎಂದು ತಿಳಿಸಿದರು.
ಇದನ್ನೂ ಓದಿ: ನಿರಂಜನ ಮರು ಓದು ಮಾಲಿಕೆಯ ಪುಸ್ತಕಗಳ ಕಿರು ಪರಿಚಯ : ‘ಬದುಕು-ಬರಹಗಳ ಕತೆ’, ‘ಆಯ್ದ ಕತೆಗಳು’
ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ ಅವರೇ ಅರಣ್ಯ ನಾಶಕ್ಕೆ ಮುಂದಾಗಿದ್ದಾರೆ. ದೇವದಾರಿ ಗಣಿಗೆ ಅರಣ್ಯ ಹಕ್ಕು ಕಾಯ್ದೆಯಡಿ ಅಕ್ರಮವಾಗಿ ಪ್ರಮಾಣ ಪತ್ರ ನೀಡಲಾಗಿದೆ. ಇದರ ತನಿಖೆ ಆಗಬೇಕು’ ಎಂದರು.
‘ಸಂಡೂರಿನಲ್ಲಿ ಸದ್ಯ ವಾರ್ಷಿಕ 50 ದಶಲಕ್ಷ ಟನ್ ಅದಿರು ಉತ್ಪಾದನೆ ಆಗುತ್ತಿದೆ. ಅದನ್ನು 20 ದಶಲಕ್ಷ ಟನ್‌ಗೆ ಇಳಿಸುವಂತೆ ಸುಪ್ರೀಂ ಕೋರ್ಟ್‌ಗೆ ಕೇಂದ್ರದ ಉನ್ನತಾಧಿಕಾರ ಸಮಿತಿ ಸಲ್ಲಿಸಿದ ಶಿಫಾರಸಿನಲ್ಲಿ ಉಲ್ಲೇಖವಿದೆ. ಹೀಗಿದ್ದ ಮೇಲೆ ಅರಣ್ಯ ಪ್ರದೇಶದಲ್ಲಿ ಹೊಸ ಗಣಿ ಯಾಕೆ ಬೇಕು’ ಎಂದು ಅವರು ಪ್ರಶ್ನಿಸಿದರು.
ಇದನ್ನೂ ನೋಡಿ: ಧರ್ಮಸ್ಥಳದ ನಿಗೂಢಗಳು | ಲಾಡ್ಜ್‌ಗಳ ದಾಖಲೆ ಪರಿಶೀಲನೆಗೆ ಮುಂದಾದ ಎಸ್‌ಐಟಿ Janashakthi Media
