ಕೊಪ್ಪಳ: ಯಲಬುರ್ಗಾ ಸಾರ್ವಜನಿಕ ಆಸ್ಪತ್ರೆ ವೈದ್ಯಾಧಿಕಾರಿ ಡಾ. ಶಿವಕುಮಾರ್ ಬಿ. ವಿರುದ್ಧ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಸಾಕ್ಷ್ಯ ನಾಶಪಡಿಸಿದ ಆರೋಪದ ಮೇಲೆ ಡಿಸೆಂಬರ್ 27ರಂದು ಪ್ರಕರಣ ದಾಖಲಾಗಿದೆ.
2025ರ ನವೆಂಬರ್ 16ರಂದು ರಾತ್ರಿ ಹೊಸಪೇಟೆ ಮೂಲದ 39 ವರ್ಷದ ಮಹಿಳೆಗೆ ಮದ್ಯ ಕುಡಿಸಿ ನಾಲ್ವರು ಯುವಕರು ದಮ್ಮೂರು ಸಮೀಪ ಅತ್ಯಾಚಾರ ಎಸಗಿದ್ದರು.
ಇದನ್ನೂ ಓದಿ: ವಿಕಾಸಶೀಲ ದೇಶವೂ ಸಾಮಾಜಿಕ ಅವನತಿಯೂ
ಮತ್ತೊಬ್ಬ ಕೃತ್ಯಕ್ಕೆ ಸಹಕಾರ ನೀಡಿದ್ದ. ಪ್ರಕರಣ ದಾಖಲಾದ 7 ಗಂಟೆಗಳಲ್ಲೇ ಐವರು ಆರೋಪಿಗಳನ್ನು ಬಂಧಿಸಲಾಗಿತ್ತು. ಈ ಆರೋಪಿಗಳನ್ನು ರಕ್ಷಿಸಲು ವೈದ್ಯರು ಸಾಕ್ಷ್ಯ ನಾಶ ಮಾಡಲು ಮುಂದಾಗಿರುವುದು ಬೆಳಕಿಗೆ ಬಂದಿದೆ. ನಾಲ್ವರು ಪ್ರಮುಖ ಆರೋಪಿಗಳ ವೈದ್ಯಕೀಯ ಪರೀಕ್ಷೆಯ ವೇಳೆ ಸಂಗ್ರಹಿಸಿದ್ದ 16 ವಸ್ತುಗಳ ಮೇಲೆ ಕರ್ತವ್ಯದಲ್ಲಿದ್ದ ವೈದ್ಯಾಧಿಕಾರಿ ಡಾ. ಶಿವಕುಮಾರ್ ಬಿ. ಸಹಿ ಹಾಕದೆ ತಮ್ಮ ಸಹಾಯಕ ಸಿಬ್ಬಂದಿಯಿಂದ ಸಹಿ ಮಾಡಿಸಿ ಗೊಂದಲ ಮೂಡಿಸಿದ್ದರು.
ಇದನ್ನು ಸರಿಪಡಿಸುವಂತೆ ಸ್ಪಷ್ಟನೆ ಕೇಳಿದ್ದರೂ ಬೇಜವಾಬ್ದಾರಿ ತೋರಿಸಿದ್ದರು. ಪ್ರಕರಣಕ್ಕೆ ಪೂರಕವಾದ ಡಿಎನ್‌ಎ ಮತ್ತು ಇತರೆ ಸಾಕ್ಷ್ಯಗಳು ಲಭ್ಯವಾಗದಂತೆ ನೋಡಿಕೊಂಡಿದ್ದರು. ಕರ್ತವ್ಯ ಲೋಪ ಹಿನ್ನೆಲೆಯಲ್ಲಿ ಮುಂದಿನ ತನಿಖೆ ಕೈಗೊಳ್ಳಲು ನ್ಯಾಯಾಲಯದ ಅನುಮತಿ ಪಡೆದು ವೈದ್ಯನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಇದನ್ನೂ ನೋಡಿ: ಕುವೆಂಪು ಜನ್ಮ ದಿನ | ಮಾನವನ ಮನಸ್ಸು ಶ್ರೀಮಂತವಾಗಬೇಕಾದರೆ ಕುವೆಂಪುರನ್ನು ಓದಬೇಕು – ಡಾ. ಬಿ.ಆರ್. ಮಂಜುನಾಥ್
